Bigg Boss: ಬಿಗ್ ಬಾಸ್ ಮನೆ ಎಂದಮೇಲೆ ಒಂದಲ್ಲಾ ಒಂದು ಕಾರಣಕ್ಕೆ ಜಗಳ ಆಗುತ್ತಲೇ ಇರುತ್ತದೆ. ಕಳೆದ ವಾರ ನಡೆದ ಜಗಳ ದೊಡ್ಡ ಪರಿಣಾಮ ಬೀರಿದೆ. ಕಿಚ್ಚ ಸುದೀಪ್ ಅವರು ಮನೆಮಂದಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಅದರಿಂದ ಈಗ ಮನೆಯ ಸ್ಪರ್ಧಿಗಳು ಬುದ್ಧಿ ಕಲಿತಿದ್ದಾರೆ. ಆದರೆ ಜಗಳ ಅಂತೂ ಸಂಪೂರ್ಣವಾಗಿ ಕಡಿಮೆ ಆಗಿಲ್ಲ. ಈ ಬಾರಿ ಜಗಳ ನಡೆದಿರುವುದು ಸಣ್ಣದೊಂದು ಕಾರಣಕ್ಕೆ.
ಮನೆಯಲ್ಲಿ ಲೈಟ್ ಆಫ್ ಆದ ಮೇಲೆ ಮಲಗುವ ವಿಚಾರಕ್ಕೆ ತನಿಷಾ ಮತ್ತು ಸ್ನೇಹಿತ್ ನಡುವೆ ಜಗಳ ಆಗಿದೆ. ಬಿಗ್ ಬಾಸ್ ನೀಡ್ಜ್ದ್ದ ಟಾಸ್ಕ್ ನಲ್ಲಿ ಒಂದೊಂದು ಪದಕ್ಕೆ ಹೋಲಿಕೆ ಆಗುವ ಹಾಗೆ, ಒಬ್ಬೊಬ್ಬ ಸದಸ್ಯರು ಕೂಡ, ಬೆಸ್ಟ್ ಇಂದ ಲೀಸ್ಟ್ ವರೆಗು ಸ್ಪರ್ಧಿಗಳನ್ನು ಆರ್ಡರ್ ನಲ್ಲಿ ನಿಲ್ಲಿಸಬೇಕಿತ್ತು. ಸ್ನೇಹಿತ್ ಗೆ ಪ್ರೀತಿ ಪಾತ್ರರು ಎನ್ನುವ ಪದ ಬಂದಿತ್ತು, ಅದಕ್ಕೆ ಅವರು ಮೊದಲ ಸ್ಥಾನಕ್ಕೆ ನಮ್ರತಾ ಅವರನ್ನು ನಿಲ್ಲಿಸಿ, ಕೊನೆಯ ಎರಡು ಸ್ಥಾನಗಳಲ್ಲಿ ತನಿಷಾ ಮತ್ತು ಸಂಗೀತ ಅವರನ್ನು ನಿಲ್ಲಿಸಿದರು.
ಇದಕ್ಕೆ ಆರ್ಗುಮೆಂಟ್ ಶುರುವಾಯಿತು, ಸ್ನೇಹಿತ್ ನಮ್ಮೊಡನೆ ಫ್ಲರ್ಟ್ ಮಾಡಿಲ್ಲ, ಮಾಡುವ ಅವಕಾಶವನ್ನು ಕೊಟ್ಟಿಲ್ಲ ಅದಕ್ಕೆ ನಾವು ಪ್ರೀತಿಪಾತ್ರರಾಗಿಲ್ಲ ಎಂದರು ತನಿಷಾ. ಅದಕ್ಕೆ ವಾದ ಶುರುವಾಗಿ, ಈಗಲೇ ಮಲಗಬೇಕು, ಆಗಲೇ ಮಲಗಬೇಕು, ಬಾಗಿಲು ಹಾಕೊಂಡು ಮಲಗಬೇಕು ಅಂತ ಹೇಳೋಕೆ ನೀವು ಕ್ಲಾಸ್ ಮಾನಿಟರ್ ಅಲ್ಲ ಅಂತ ಹೇಳಿದ್ದಾರೆ. ಸ್ನೇಹಿತ್ ಮಾತಿಗೆ ತನಿಷಾ, ನಾನೇನು ತಪ್ಪಾಗಿ ಮಾತನಾಡಿಲ್ಲ ಹೇಳಿದ್ದು ಸರಿಯಿದೆ ಎಂದಿದ್ದಾರೆ. ಈ ವಿಷಯಕ್ಕೆ ಹೆಚ್ಚಿಗೆ ಮಾತು ಬೆಳೆದು, ರೂಲ್ಸ್ ಮಾಡೋಕೆ ನೀವು ಬಿಗ್ ಬಾಸ್ ಅಲ್ಲ..
ನಿಮ್ಮನ್ನ ಇಲ್ಲಿಗೆ ಕಳಿಸಿರೋದು ಸ್ಪರ್ಧಿಯಾಗಿ, ಕ್ಲಾಸ್ ಲೀಡರ್ ಆಗಿ ಅಲ್ಲ, ಬಿಗ್ ಬಾಸ್ ಥರ ವರ್ತನೆ ಮಾಡಬೇಡಿ ಎಂದು ಹೇಳುತ್ತಾರೆ ಸ್ನೇಹಿತ್.ಅದಕ್ಕೆ ತನಿಷಾ, ನಾನು ಬಿಗ್ ಬಾಸ್ ಥರ ವರ್ತನೆ ಮಾಡ್ತಿಲ್ಲ, ನಾನು ಹೇಳೋದ್ರಲ್ಲಿ ತಪ್ಪಿಲ್ಲ, ನೀವು ಯಾಕೆ ಬಿಲೋ ಲೆವೆಲ್ ಸ್ಟುಡೆಂಟ್ ಥರ ಆಡ್ತಿದ್ದೀರಾ ಎಂದು ಹೇಳಿದ್ದಾರೆ. ಇವರಿಬ್ಬರ ನಡುವೆ ಈ ವಾದ ವಿವಾದ ನಡೆಯುವಾಗ ಮನೆಯವರು ಏನನ್ನು ಹೇಳಲಿಲ್ಲ. ಕೊನೆಯಲ್ಲಿ ಸ್ನೇಹಿತ್ ನೀವು ಇಲ್ಲಿ ಬ್ಯುಸಿನೆಸ್ ಶುರು ಮಾಡ್ತಾ ಇಲ್ಲ.
ನಾವು ನಿಮ್ಮ ಎಂಪ್ಲಾಯಿಗಳಲ್ಲ ಎಂದು ಹೇಳುತ್ತಾರೆ. ಆಗ ಸಂಗೀತ ಅವರು ತನಿಷಾ ಅವರ ಸಪೋರ್ಟ್ ಗೆ ಬಂದು, ನಾವು ಆ ರೀತಿ ಹೇಳಿಲ್ಲ ನೀವೇ ಹೇಳಿ ಒಪ್ಪಿಕೊಳ್ತಾ ಇದ್ದೀರಾ. ನೀವು ನಮ್ಮನ್ನೇ ಬಾಸ್ ಮಾಡಿದ್ದೀರಾ ಥ್ಯಾಂಕ್ ಯು ಎಂದು ಹೇಳಿದ್ದಾರೆ. ಈ ಮಾತುಕತೆ ನೋಡಿದ ನೆಟ್ಟಿಗರು ನಿಜಕ್ಕೂ ಅವರಿಬ್ಬರು ಬಾಸ್ ಲೇಡೀಸ್, ಬಿಗ್ ಮನೆಯಲ್ಲಿ ಖಡಕ್ ಆಗಿದ್ದಾರೆ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ.