Bigg Boss: ಬೆಂಕಿ ವರ್ತೂರ್ ಸಂತೋಷ್ ಸ್ನೇಹದಲ್ಲಿ ಬಿರುಕು! ಮತ್ತೇನಾಯ್ತು ಬಿಗ್ ಬಾಸ್ ಮನೆಯಲ್ಲಿ?

Written by Pooja Siddaraj

Published on:

Bigg Boss: ಬಿಗ್ ಬಾಸ್ ಮನೆಯ ಒಳಗೆ ಯಾರು ಊಹೆ ಮಾಡಿರದ ಅನೇಕ ಟ್ವಿಸ್ಟ್ ಗಳು ನಡೆಯುತ್ತಿವೆ. ನಿನ್ನೆಯ ಸಂಚಿಕೆಯಲ್ಲಿ ಮನೆಯಿಂದ ಎಲಿಮಿನೇಟ್ ಆಗಿ ಹೊರಬರುವವರು ಯಾರು ಎನ್ನುವ ಕುತೂಹಲ ಇತ್ತು, ಆದರೆ ಸುದೀಪ್ ಅವರು ತಮ್ಮ ಅಧಿಕಾರವನ್ನು ಬಳಸಿ ಇದೇ ಮೊದಲ ಬಾರಿಗೆ ಎಲಿಮಿನೇಶನ್ ಅನ್ನು ಸ್ಟಾಪ್ ಮಾಡಿದ್ದಾರೆ. ಆದರೆ ಉಳಿದುಕೊಂಡ ಮೈಕಲ್ ಹಾಗೂ ಸ್ನೇಹಿತ್ ಇಬ್ಬರು ಮುಂದಿನ ವಾರಕ್ಕೆ ನಾಮಿನೇಟ್ ಆಗಿದ್ದಾರೆ.

ಮುಂದಿನ ವಾರ ಎಲಿಮಿನೇಟ್ ಆಗೋದು ಯಾರು ಎನ್ನುವ ಕುತೂಹಲ ಕೂಡ ಶುರುವಾಗಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಈ ಸೀಸನ್ ನಲ್ಲಿ ಇತ್ತೀಚೆಗೆ ಶುರುವಾದ ಹೊಸ ಲವ್ ಸ್ಟೋರಿ ತನಿಷಾ ಕುಪ್ಪಂಡ ಮತ್ತು ವರ್ತೂರ್ ಸಂತೋಷ್ ಅವರದ್ದು. ಇವರಿಬ್ಬರು ಜೊತೆಯಾಗಿ ಸಮಯ ಕಳೆಯುತ್ತಾ, ವರ್ತೂರ್ ಅವರು ತನಿಷಾ ಅವರನ್ನು ಬೆಂಕಿ ಎಂದು ಕರೆಯುತ್ತಾ ಅನ್ಯೋನ್ಯವಾಗಿದ್ದರು. ಜನರಿಗೂ ಕೂಡ ಈ ಜೋಡಿ ಇಷ್ಟವಾಗಿತ್ತು.

ಕಳೆದ ವಾರ ತನಿಷಾ ಅವರು ಕಾಲು ನೋವಿನ ಕಾರಣ ಮನೆಯಿಂದ ಹೊರ ಹೋಗಿದ್ದಕ್ಕೆ, ವರ್ತೂರ್ ಸಂತೋಷ್ ಬೇಸರ ಮಾಡಿಕೊಂಡಿದ್ದರು. ತನಿಷಾ ವಾಪಸ್ ಬಂದಾಗ ಖುಷಿ ಪಟ್ಟಿದ್ದರು. ಸುದೀಪ್ ಅವರು ಕೂಡ ಈ ಬಗ್ಗೆ ತಮಾಷೆ ಮಾಡಿದ್ದರು, ಆದರೆ ಇಂದು ತನಿಷಾ ಮತ್ತು ವರ್ತೂರ್ ಸಂತೋಷ್ ನಡುವೆ ಬಿರುಕು ಮೂಡಿದೆ. ಈ ವಾರ ಮನೆಯ ಕ್ಯಾಪ್ಟನ್ ಆಗಿ ಸ್ನೇಹಿತ್ ಆಯ್ಕೆಯಾಗಿದ್ದಾರೆ..

ಸ್ನೇಹಿತ್ ಅವರಿಗೆ ಬಿಗ್ ಬಾಸ್ ಒಂದು ಹೊಸ ಜವಾಬ್ದಾರಿ ಕೊಟ್ಟಿದ್ದು, ಮನೆಯ ಸ್ಪರ್ಧಿಗಳನ್ನು ನಾಮಿನೇಷನ್ ಇಂದ ಉಳಿಸುವ ಅಧಿಕಾರ ಸ್ನೇಹಿತ್ ಅವರಿಗೆ ಇದೆ. ಎಲ್ಲರೂ ಕೂಡ ಈ ಕಾರಣಕ್ಕೆ ತಮ್ಮನ್ನು ಉಳಿಸಬೇಕು ಎಂದು ಸ್ನೇಹಿತ್ ಅವರ ಬಳಿ ಹೇಳುತ್ತಿದ್ದಾರೆ. ಅದೇ ರೀತಿ ಕಾರ್ತಿಕ್, ತನಿಷಾ ಮತ್ತು ವರ್ತೂರ್ ಸಂತೋಷ್ ತಮ್ಮನ್ನು ಯಾಕೆ ಉಳಿಸಬೇಕು ಎಂದು ಕೇಳಿಕೊಂಡಿದ್ದಾರೆ..

ಕಾರ್ತಿಕ್ ಅವರು ತನಿಷಾ ಅವರು ಆರಂಭದಿಂದ ಹಾರ್ಡ್ ವರ್ಕ್ ಮಾಡಿದ್ದಾರೆ, ಇನ್ನು ಕಾಲಿನ ತೊಂದರೆ ಇದೆ ಅಂತ ಸರಿಯಾಗಿ ಆಡೋದಕ್ಕೆ ಆಗಿಲ್ಲ, ಅವರನ್ನ ಸೇವ್ ಮಾಡಿ ಎಂದು ಕೇಳಿದ್ದಾರೆ. ಆಗ ವರ್ತೂರ್ ಸಂತೋಷ್ ಅವರು “ಇಲ್ಲಿ ನಾವು ತ್ಯಾಗಮೂರ್ತಿಗಳಾಗಿ ಬಂದಿಲ್ಲ, ತನಿಶಾನ ನಾನು ಬೇಕು ಅಂತ ತಳ್ಳಿಲ್ಲ. ಅದಕ್ಕೋಸ್ಕರ ತನಿಶಾಗೆ ಇನ್ನೊಂದು ಚಾನ್ಸ್ ಸಿಕ್ಲಿ ಅಂತ ನಾನು ಖಂಡಿತ ಕೇಳಲ್ಲ. ನಾವು ಮಾನವೀಯತೆ ಅಂತ ಹೋದ್ರೆ ಹಿಂದೇನೆ ಅಲ್ಲ ಮುಂದೇನೆ ತೋಡಿರ್ತಾರೆ..” ಎಂದು ಹೇಳುತ್ತಾರೆ.

ಆಗ ತನಿಷಾ “ಈಗ ಒಂದು ವಾರದಿಂದ ಮಾತಾಡ್ತಾ ಇರೋ ವರ್ತೂರ್ ಡೇ 1 ಇಂದ ಇದೇ ಥರ ಮಾತಾಡಿದ್ರೆ ನಾನು ಈ ಮಾತನ್ನ ಮೆಚ್ಚಿಕೊಳ್ತಿದ್ದೆ..” ಎಂದು ಹೇಳಿದ್ದಾರೆ. ಇವರಿಬ್ಬರ ಸ್ನೇಹಕ್ಕೆ ಯಾರ ದೃಷ್ಟಿ ಬಿತ್ತೋ ಎನ್ನುತ್ತಿದ್ದಾರೆ ನೆಟ್ಟಿಗರು.

Leave a Comment