Bigg Boss: ಬಿಗ್ ಬಾಸ್ ಟ್ರೋಫಿ ಕಾರ್ತಿಕ್ ಕೈಸೇರೋ ಮೊದಲು ಕೆಳಗೆ ಬಿದ್ದು ಒಡೆದು ಹೋಗಿತ್ತಾ? ಅಸಲಿ ವಿಷಯ ಬಿಚ್ಚಿಟ್ಟ ಆನೆ!

0 15

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ರ ಗ್ರ್ಯಾಂಡ್ ಫಿನಾಲೆ ನಡೆದು 1 ವಾರ ಕಳೆದು ಹೋಗಿದೆ. ಫಿನಾಲೆಯಲ್ಲಿ ಗೆದ್ದಿದ್ದು ಕಾರ್ತಿಕ್, ಮೊದಲ ರನ್ನರ್ ಅಪ್ ಪ್ರತಾಪ್, ಎರಡನೇ ರನ್ನರ್ ಅಪ್ ಸಂಗೀತ, ಮೂರನೇ ರನ್ನರ್ ಅಪ್ ವಿನಯ್ ಆಗಿದ್ದಾರೆ. ಆದರೆ ಟ್ರೋಫಿಗೆ ಸಂಬಂಧಿಸಿದ ಹಾಗೆ ಒಂದು ವಿಚಾರ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಅದೇನು ಎಂದರೆ, ಬಿಗ್ ಬಾಸ್ ಫಿನಾಲೆ ಇಂದ ಟ್ರೋಫಿ ಕೆಳಗೆ ಬಿತ್ತು ಒಡೆದು ಹೋಯ್ತು, ಫೆವಿಕ್ವಿಕ್ ಹಾಕಿ ಅಂಟಿಸಲಾಯಿತು ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾರ್ತಿಕ್ ಅವರಿಗೆ ಕೊಟ್ಟಿರೋ ಟ್ರೋಫಿ ಒಡೆದಿರೋ ಟ್ರೋಫಿ ಎಂದು ಕೂಡ ಹೇಳಲಾಗುತ್ತಿದೆ. ಈ ಟ್ರೋಫಿಗೆ ಅರ್ಹರು ಬೇರೆ ಸ್ಪರ್ಧಿ, ಸಂಗೀತ ಅಥವಾ ವಿನಯ್ ವಿನ್ನರ್ ಆಗಬೇಕಿತ್ತು, ಅವರಿಬ್ಬರು ಆಗದೆ ಇರೋದಕ್ಕೆ ಆ ರೀತಿ ಆಗಿದೆ ಎನ್ನುವುದು ಹಲವರ ಅಭಿಪ್ರಾಯ ಆಗಿದೆ..

ಅದರ ಬಗ್ಗೆ ಈಗ ಖುದ್ದು ವಿನಯ್ ಗೌಡ ಅವರೇ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಟ್ರೋಫಿ ಬಿದ್ದು ಒಡೆದು ಹೋಗಿದ್ದರ ಬಗ್ಗೆ ಖುದ್ದು ವಿನಯ್ ಗೆ ಪ್ರಶ್ನೆ ಕೇಳಿದಾಗ, ಅದು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ವಿನಯ್. ಆದರೆ ಮುಂದುವರೆದು ಮಾತನಾಡಿ, ನನ್ನ ಹೆಂಡತಿ ಬಂದು ಆ ಟ್ರೋಫಿ ನಿನ್ನ ಕೈಸೇರಬೇಕಿತ್ತು ಅಂತ ಅನ್ಸತ್ತೆ ಅದಕ್ಕೆ ಆ ಥರ ಆಗಿದೆ ಅಂತ ಹೇಳಿದ್ಲು.. ಎಂದಿದ್ದಾರೆ ವಿನಯ್.

ಇದು ನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಈ ಒಂದು ವಿಷಯ ಸಿಕ್ಕಾಪಟ್ಟೆ ವೈರಲ್ ಆಗ್ತಿರೋದಂತೂ ನಿಜ. ಇನ್ನು ವಿನಯ್ ಹಾಗೂ ಸಂಗೀತ ಇಬ್ಬರು 4ನೇ ಮತ್ತು 3ನೇ ಸ್ಥಾನಕ್ಕೆ ಎಲಿಮಿನೇಟ್ ಆಗಿದ್ದಕ್ಕೆ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡು ಕಣ್ಣೀರು ಹಾಕಿದ್ದರು. ಈಗ ಇವರ ಬಗ್ಗೆ ಈ ಥರದ ಸುದ್ದಿಯೊಂದು ವೈರಲ್ ಆಗಿದೆ.

Leave A Reply

Your email address will not be published.