Bigg Boss: ಕಾರ್ತಿಕ್ ಜೊತೆ ಬೇಸರ, ಬಿಗ್. ಆಸ್ ಮನೆಯಿಂದ ಹೊರಹೋದ ಸಂಗೀತ?

0 1

Bigg Boss: ಬಿಗ್ ಬಾಸ್ ಮನೆವಾರದಿಂದ ವಾರಕ್ಕೆ ಬದಲಾಗುತ್ತಲೇ ಇದೆ. ನಿನ್ನೆ ಮೊನ್ನೆ ಬೆಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಿದ್ದವರು ಒಂದು ವೈರಿಗಳ ಹಾಗೆ ಮಾತನಾಡುತ್ತಿದ್ದಾರೆ. ಈ ವಾರದ ಟಾಸ್ಕ್ ನಲ್ಲಿ ತಂಡಗಳು ಕೂಡ ಬದಲಾಗಿದೆ. ಖುದ್ಧು ಬಿಗ್ ಬಾಸ್ ತಂಡ ರಚಿಸಿದ್ದು, ಅನಿರೀಕ್ಷಿತ ವ್ಯಕ್ತಿಗಳು ಒಂದು ತಂಡದಲ್ಲಿ ನಿನ್ನೆ ಜೊತೆಯಾಗಿದ್ದಾರೆ. ಮನೆಯ ಕ್ಯಾಪ್ಟನ್ ಕಾರ್ತಿಕ್ ಆಗಿದ್ದು, ಅವರ ತಂಡ ಸಂಪತ್ತಿಗೆ ಸವಾಲ್. ಈ ತಂಡದಲ್ಲಿ ಕಾರ್ತಿಕ್, ಮೈಕಲ್, ತನಿಷಾ, ನೀತು, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಇದ್ದಾರೆ.

ಈ ತಂಡದ ಕ್ಯಾಪ್ಟನ್ ಮೈಕಲ್ ಆಗಿದ್ದಾರೆ. ಮತ್ತೊಂದು ತಂಡದಲ್ಲಿ ವಿನಯ್, ಸಂಗೀತ, ನಮ್ರತಾ, ಸಿರಿ, ಸ್ನೇಹಿತ್, ಪ್ರತಾಪ್ ಇದ್ದಾರೆ. ಈ ತಂಡದ ಹೆಸರು ಗಜಕೇಸರಿ ಆಗಿದ್ದು ಈ ತಂಡಕ್ಕೆ ಕ್ಯಾಪ್ಟನ್ ಸಂಗೀತ ಆಗಿದ್ದಾರೆ. ಎರಡು ತಂಡಗಳಿಗೆ ಬಿಗ್ ಬಾಸ್ ನಿನ್ನೆ ಒಂದು ಟಾಸ್ಕ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಒಂದು ತಂಡದವರು ಮತ್ತೊಂದು ತಂಡಕ್ಕೆ ಟಾಸ್ಕ್ ನೀಡಬೇಕಿತ್ತು, ಟಾಸ್ಕ್ ಆಡುತ್ತಾರೋ ಇಲ್ಲವೋ ಎನ್ನುವುದನ್ನು ಆಯಾ ತಂಡಗಳು ನಿರ್ಧರಿಸಬೇಕಿತ್ತು. ಈ ಟಾಸ್ಕ್ ನಲ್ಲಿ ಕಾರ್ತಿಕ್ ಮತ್ತು ತುಕಾಲಿ ಅವರಿಗೆ ಕೂದಲು ಶೇವ್ ಮಾಡುವ ಟಾಸ್ಕ್ ನೀಡಲಾಯಿತು.

ಈ ಟಾಸ್ಕ್ ಒಪ್ಪಿಕೊಂಡು ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ಪೂರ್ತಿ ಕೂದಲನ್ನು ಶೇವ್ ಮಾಡಿಕೊಂಡರು. ನಂತರ ಸಂಗೀತ ಮತ್ತು ವರ್ತೂರ್ ಸಂತೋಷ್ ಅವರಿಗೆ 20 ಮೆಣಸಿನಕಾಯಿ ಗಳನ್ನು ತಿನ್ನುವ ಟಾಸ್ಕ್ ಕೊಡಲಾಯಿತು, ಇಬ್ಬರು ಇದನ್ನು ಮಾಡಿದರು. ಹೀಗೆ ಟಾಸ್ಕ್ ಗಳನ್ನು ಮಾಡಿ, ನಿನ್ನೆಯ ಸಂಚಿಕೆಯಲ್ಲಿ ಸಂಪತ್ತಿಗೆ ಸವಾಲ್ ತಂಡ ಗೆದ್ದಿದೆ, ಗಜಕೇಸರಿ ತಂಡ ಸೋತಿದೆ. ಇತ್ತ ಸಂಗೀತ ಅವರಿಗೆ ಕೆಲವು ವಿಚಾರಗಳಿಂದ ಬೇಸರವಾಗಿತ್ತು.

ತಮ್ಮ ಬೆರಳಿಗೆ ಪೆಟ್ಟು ಬಿದ್ದಿರುವುದಕ್ಕೆ ಅಡುಗೆಗೆ ಸಹಾಯ ಮಾಡಲು ಆಗೋದಿಲ್ಲ ಎಂದು ಹೇಳಿದ ವಿಷಯಕ್ಕೆ ಕಾರ್ತಿಕ್ ಸಂಗೀತ ನಡುವೆ ವಾದ ಶುರುವಾಗಿ, ಇವರಿಬ್ಬರ ನಡುವೆ ಮಾತುಕತೆ ನಡೆದು, ನಿನ್ನೆಯ ಸಂಚಿಕೆ ಅಲ್ಲಿಗೆ ನಿಂತಿತು. ಇಂದಿನ ಸಂಚಿಕೆಯ ಪ್ರೋಮೋ ಬಿಟ್ಟಿದ್ದು, ಸಂಗೀತ ಅವರು ನನ್ನಿಂದ ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಕಾರ್ತಿಕ್ ಬಂದು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಸಂಗೀತ ಅಳುತ್ತಲೇ, ಕಾರ್ತಿಕ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ನಾನು ನಿಮಗೆ ಏನು ಮಾಡಿದ್ದೀನಿ, ಎಲ್ಲದಕ್ಕೂ ಜಗಳ ಆಡ್ತೀರಾ, ನಿಮಗೆ ಬೇಕಾದಾಗ ಜಗಳ ಆಡ್ತೀರಾ, ನಿಮಗೆ ಬೇಕಾದಾಗ ಸಮಾಧಾನ ಮಾಡ್ತೀರಾ ನನಗೆ ಇದು ಆಗ್ತಿಲ್ಲ, ಆಟ ಆಡೋದಕ್ಕೆ ಆಗ್ತಿಲ್ಲ ಪ್ಲೀಸ್ ಬಿಗ್ ಬಾಸ್ ಎಂದು ಸಂಗೀತ ಹೇಳಿದ್ದು. ತಕ್ಷಣವೇ ಮನೆ ಡೋರ್ ಓಪನ್ ಆಗಿದೆ, ಮನೆಯಿಂದ ಒಬ್ಬರು ಹೊರಗೆ ಹೋಗಿದ್ದು, ಮನೆಯ ಸ್ಪರ್ದಿಗಳು ಕಿರುಚಿದ್ದಾರೆ. ಹಾಗಿದ್ರೆ ಸಂಗೀತ ಮನೆಯಿಂದ ಹೊರಗೆ ಹೋದ್ರಾ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಶುರುವಾಗಿದ್ದು, ಇಂದಿನ ಸಂಚಿಕೆಯಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ

Leave A Reply

Your email address will not be published.