Bigg Boss: ಬಿಗ್ ಬಾಸ್ ಮನೆಗೆ ಬಂದ್ರು ವರ್ತೂರ್ ಸಂತೋಷ್ ತಾಯಿ! ಇನ್ನಾದರೂ ಮನಸ್ಸು ಬದಲಿಸುತ್ತಾರ ಹಳ್ಳಿಕಾರ್ ಒಡೆಯ?

0 14

Bigg Boss: ಪ್ರತಿ ಭಾನುವಾರ ಬಿಗ್ ಬಾಸ್ ಮನೆಯಿಂದ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬರುತ್ತಾರೆ. ಪ್ರತಿ ವಾರ ಮನೆಯಿಂದ ಹೊರಹೋಗುವುದು ಯಾರು ಎನ್ನುವ ಕೂತೂಹಲ ಜನರಲ್ಲಿ ಮತ್ತು ಮನೆಯ ಸ್ಪರ್ಧಿಗಳಲ್ಲಿ ಇರುತ್ತದೆ. ಅದೇ ರೀತಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಬರುವವರು ಯಾರು ಎನ್ನುವುದರ ಜೊತೆಗೆ ಒಂದು ದೊಡ್ಡ ಟ್ವಿಸ್ಟ್ ಸಹ ಇತ್ತು. ಈ ವಾರ ಬಿಗ್ ಮನೆಯಿಂದ ಇನ್ನು ಯಾರು ಎಲಿಮಿನೇಟ್ ಆಗಿಲ್ಲ.

ಕಿಚ್ಚ ಸುದೀಪ್ ಅವರು ವರ್ತೂರ್ ಸಂತೋಷ್ ಅವರನ್ನು ಮನೆಯಿಂದ ಸೇವ್ ಮಾಡಿದ್ದಾರೆ. ವರ್ತೂರ್ ಸಂತೋಷ್ ಅವರೇ ನೀವು ಸೇಫ್ ಆಗಿದ್ದೀರಿ ಎಂದು ಹೇಳಿದಾಗ ಸಂತೋಷ್ ಅವರು ಮನೆಯಿಂದ ಹೊರಗಡೆ ನಡೆದ ಒಂದು ಘಟನೆ ಇಂದ ನನಗೆ ಮನೆಯಲ್ಲಿ ಇರೋದಕ್ಕೆ ಆಗ್ತಾ ಇಲ್ಲ. ನಾನು ಹೋಗ್ತೀನಿ ಎಂದು ಕಣ್ಣೀರು ಹಾಕುತ್ತಾರೆ. ಆಗ ಸುದೀಪ್ ಅವರು ವರ್ತೂರ್ ಸಂತೋಷ್ ಅವರಿಗೆ ಸುಮಾರು 34 ಲಕ್ಷದ 15 ಸಾವಿರ ವೋಟ್ ಗಳು ಬಂದಿವೆ ಎನ್ನುವುದನ್ನು ಹೇಳುತ್ತಾರೆ.

ಹಾಗೆಯೇ ಇದು ಜನರ ತೀರ್ಮಾನ ತಾವು ಜನರ ವಿರುದ್ಧ ಹೋಗೋದಿಲ್ಲ ಎಂದು ಹೇಳುವ ಸುದೀಪ್ ಅವರು ವೇದಿಕೆಯಿಂದ ಹೊರಹೋಗಿದ್ದಾರೆ. ಇತ್ತ ವರ್ತೂರ್ ಸಂತೋಷ್ ಅವರನ್ನು ಮನೆಯವರು ಮನೆಯಲ್ಲೇ ಇರಿ ಎಂದು ಕನ್ವಿನ್ಸ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ವರ್ತೂರ್ ಸಂತೋಷ್ ಅವರು ಮನೆಯವರ ಮಾತನ್ನು ಕೇಳದೆ ತಾವು ಹೋಗಬೇಕು ಎಂದು ಹಠ ಮಾಡಿದ್ದು ನಿನ್ನೆಯ ಎಪಿಸೋಡ್ ನಲ್ಲಿ ಕಂಡುಬಂದಿದೆ

ವರ್ತೂರ್ ಸಂತೋಷ್ ಅವರಿಗೆ ಅರ್ಥ ಮಾಡಿಸಿ, ಹೊರಗಡೆ ಯಾರಿಗೂ ಏನು ತೊಂದರೆ ಆಗಿಲ್ಲ ಎಂದು ಸುದೀಪ್ ಅವರು ಹೇಳುವ ಪ್ರಯತ್ನ ಮಾಡಿದರು ಸಹ, ಸಂತೋಷ್ ಅವರು ಅರ್ಥ ಮಾಡಿಕೊಳ್ಳದೆ, ಹೊರಗೆ ಹೋಗುತ್ತೇನೆ ಎಂದು ಹಠ ಹಿಡಿದಿದ್ದರು. ಮನೆಯ ಸ್ಪರ್ಧಿಗಳು ಕೂಡ ಸಂತೋಷ್ ಅವರೊಡನೆ ಮಾತನಾಡಿ, ಎಲ್ಲವನ್ನು ಸರಿಪಡಿಸಲು ಪ್ರಯತ್ನ ಪಟ್ಟರು ಸಹ, ಸಂತೋಷ್ ಅವರು ಯಾರ ಮಾತನ್ನು ಕೇಳದೇ, ಹೊರಗೆ ಹೋಗಲೇಬೇಕು ಎಂದಿದ್ದರು.

ಕಿಚ್ಚ ಸುದೀಪ್ ಅವರು ಜನರ ವಿರುದ್ಧ ಹೋಗಲು ಸಾಧ್ಯವಿಲ್ಲ ಎಂದು ವೇದಿಕೆಯಿಂದ ಹೊರಟು ಬಿಟ್ಟರು. ಇಂದಿನ ಸಂಚಿಕೆಯ ಪ್ರೋಮೋದಲ್ಲಿ ಭಾಗ್ಯಲಕ್ಷ್ಮಿ ಧಾರವಾಹಿ ಖ್ಯಾತಿಯ ಭಾಗ್ಯ ಅಂದರೆ ನಟಿ ಸುಶ್ಮಾ ಅವರು ಬಿಗ್ ಬಾಸ್ ಮನೆಗೆ ಬಂದು ಸ್ಪರ್ಧಿಗಳನ್ನು ಮಾತನಾಡಿಸುವ ಪ್ರೋಮೋದಲ್ಲಿ ಕೂಡ ಸಂತೋಷ್ ಅವರು ಒಪ್ಪಿರಲಿಲ್ಲ. ಇದೀಗ ಮತ್ತೊಂದು ಪ್ರೋಮೋ ಬಂದಿದ್ದು, ಅದರಲ್ಲಿ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಅವರವರ ಮನೆಯಿಂದ ಊಟ ಬಂದಿದೆ.

ಆದರೆ ಸಂತೋಷ್ ಅವರಿಗೆ ಮಾತ್ರ ಊಟ ಬಂದಿರಲಿಲ್ಲ, ಇದಕ್ಕೆ ಸಂತೋಷ್ ಅವರು ಕಣ್ಣೀರು ಹಾಕಿದ್ದಾರೆ. ಆದರೆ ಸಂತೋಷ್ ಅವರಿಗೆ ಬೇರೆಯದೇ ಸರ್ಪ್ರೈಸ್ ಕಾದಿತ್ತು, ಸಂತೋಷ್ ಅವರ ತಾಯಿ ಬಿಗ್ ಬಾಸ್ ಮನೆಗೆ ಬಂದಿದ್ದು, ಮಗನಿಗೆ ಊಟ ತಂದಿದ್ದಾರೆ. ನನ್ನ ಮಗ ನನ್ನ ಮಾತನ್ನು ಕೇಳ್ತಾನೆ, ನಾನು ರಿಕ್ವೆಸ್ಟ್ ಮಾಡಿಕೊಳ್ಳುತ್ತೀನಿ ಎನ್ನುತ್ತಿದ್ದಾರೆ. ತಾಯಿಯ ಮಾತನ್ನು ಸಂತೋಷ್ ನಡೆಸುತ್ತಾರಾ ಬಿಗ್ ಬಾಸ್ ಮನೆಯಲ್ಲೇ ಉಳಿದುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.