Bigg Boss: ತಾನು ಮನೆಯಿಂದ ಹೊರ ಹೋಗಬೇಕು ಎಂದ ಸ್ಪರ್ಧಿ, ಹಾಗಿದ್ರೆ ಮನೆಯಿಂದ ಹೊರ ಹೋಗೋದು ಇವರೇನಾ?

Written by Pooja Siddaraj

Published on:

Bigg Boss: ಬಿಗ್ ಬಾಸ್ ಶೋ ಎಂದಮೇಲೆ ಹೊಸ ಹೊಸ ಟ್ವಿಸ್ಟ್ ಗಳು ಮತ್ತು ಟರ್ನ್ ಗಳು ಇದ್ದೇ ಇರುತ್ತದೆ. ಪ್ರತಿ ವಾರ ಟಾಸ್ಕ್ ಗಳು, ಎಲಿಮಿನೇಷನ್, ನಾಮಿನೇಷನ್ ಎಲ್ಲವೂ ನಡೆಯುತ್ತದೆ. ಮನೆಯಿಂದ ಹೊರಬರುವ ಸ್ಪರ್ಧಿ ಯಾರು ಎನ್ನುವುದನ್ನು ತೀರ್ಮಾನ ಮಾಡುವುದು ವೀಕ್ಷಕರು. ವೀಕ್ಷಕರ ವೋಟ್ ಗಳ ಅನುಸಾರ ಇದನ್ನು ನಿರ್ಧಾರ ಮಾಡಲಾಗುತ್ತದೆ. ಆದರೆ ಈ ವಾರ ಸ್ಪರ್ಧಿಯೊಬ್ಬರು ತಾವು ಮನೆಯಿಂದ ಹೋಗಬೇಕು ಎಂದು ಹೇಳಿದ್ದಾರೆ.

ಹೌದು, ಈ ಸ್ಪರ್ಧಿ ಈಗ ತಾವು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೋಗುವ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ. ಆ ಸ್ಪರ್ಧಿ ಮತ್ಯಾರು ಅಲ್ಲ, ವರ್ತೂರ್ ಸಂತೋಷ್ ಅವರು ತುಕಾಲಿ ಸಂತೋಷ್ ಅವರ ಜೊತೆಯಲ್ಲಿ ಈ ರೀತಿ ಹೇಳಿದ್ದಾರೆ. ತಮಗೆ ಈ ವಾರ ಮನೆಯಿಂದ ಎಲಿಮಿನೇಟ್ ಆಗುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ. ಈ ವಾರದ ಟಾಸ್ಕ್ ಗಳಲ್ಲಿ ಇವರು ಅಂದುಕೊಂಡ ಹಾಗೆ ಪರ್ಫಾರ್ಮ್ ಮಾಡಲಿಲ್ಲ.

ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಸಹ ವರ್ತೂರ್ ಸಂತೋಷ್ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ, ಯಾಕೆ ಎಂದು ಕೇಳಿದ್ದಕ್ಕೆ ಕ್ಯಾಪ್ಟನ್ಸಿ ಟಾಸ್ಕ್ ಅಲ್ವಾ ಎಂದು ಹೇಳಿದ್ದರು. ತುಕಾಲಿ ಸಂತೋಷ್ ಅವರೊಡನೆ ಸಹ ಈ ರೀತಿ ಹೇಳಿದ್ದಾರೆ. ಹಾಗಾಗಿ ವರ್ತೂರ್ ಸಂತೋಷ್ ಅವರು ಬೇಕೆಂದೇ ಹೀಗೆ ಹೇಳುತ್ತಿದ್ದಾರಾ, ಈ ವಾರ ಅವರೇ ಬಿಗ್ ಬಾಸ್ ಮನೆಯಿಂದ ಹೊರಬರುತ್ತಾರಾ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಶುರುವಾಗಿದೆ..

ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದಾಗಲೇ ಹುಲಿ ಉಗುರಿನ ವಿಚಾರಕ್ಕೆ ಬಿಗ್ ಬಾಸ್ ಮನೆಯಿಂದ ಮಧ್ಯದಲ್ಲೇ ಹೊರಬಂದು, ಜೈಲು ಸೇರಿದ್ದರು. ಕೆಲವು ದಿನಗಳ ಕಾಲ ಜೈಲಿನಲ್ಲೇ ಇದ್ದು, ಜಾಮೀನು ಸಿಕ್ಕ ಬಳಿಕ ವರ್ತೂರ್ ಸಂತೋಷ್ ಅವರು ಮತ್ತೆ ಬಿಗ್ ಬಾಸ್ ಮನೆಯೊಳಗೆ ಹೋದರು. ಆದರೆ ಎರಡು ವಾರಗಳಲ್ಲೇ ಮತ್ತೆ ಬಿಗ್ ಮನೆಯಿಂದ ಹೊರಬರುವ ಮಾತುಗಳನ್ನಾಡಿದ್ದಾರೆ.

ಈ ವಾರ ನಾಮಿನೇಟ್ ಆಗಿದ್ದವರಲ್ಲಿ ಟಾಸ್ಕ್ ಗೆದ್ದ ಬಳಿಕ ತನಿಷಾ, ಸಂಗೀತ ಮತ್ತು ಭಾಗ್ಯಶ್ರೀ ಅವರನ್ನು ಗಂಧದಗುಡಿ ಟೀಮ್ ಕ್ಯಾಪ್ಟನ್ ಪ್ರತಾಪ್ ಅವರು ಸೇವ್ ಮಾಡಿದ್ದರು. ಇನ್ನು ಕೆಲವು ಜನರು ನಾಮಿನೇಟ್ ಆಗಿದ್ದಾರೆ. ಈ ವಾರ ನೀತು ಅಥವಾ ಇಶಾನಿ ಮನೆಯಿಂದ ಹೊರಬಹುದು ಎನ್ನುವ ಅಭಿಪ್ರಾಯ ಜನರದ್ದಾಗಿತ್ತು, ಆದರೆ ವರ್ತೂರ್ ಸಂತೋಷ್ ಅವರು ಈ ರೀತಿ ಹೇಳಿರುವುದರಿಂದ ಇವರಿಗೆ ಹೊರಬರುವ ಅಗತ್ಯ ಇದೆಯೇನೋ, ವರ್ತೂರ್ ಸಂತೋಷ್ ಅವರೇ ಏನೋ ಎಂದು ಹೇಳಲಾಗುತ್ತಿದೆ.

Leave a Comment