Bigg Boss: ಹೆಣ್ಣುಮಕ್ಕಳನ್ನ ಕೆಟ್ಟ ದೃಷ್ಟಿಯಲ್ಲಿ ನೋಡ್ತಾನೆ ಅಂತ ಪ್ರತಾಪ್ ಮೇಲೆ ವಿನಯ್ ಆರೋಪ! ಕಿಚ್ಚನ ಪಂಚಾಯ್ತಿಯಲ್ಲಿ ಸಿಗುತ್ತಾ ಕ್ಲಾರಿಟಿ?

Written by Pooja Siddaraj

Published on:

Bigg Boss: ಈ ವರ್ಷದ ಬಿಗ್ ಬಾಸ್ ಸೀಸನ್ ವಿವಾದಗಳಿಂದಲೇ ತುಂಬಿದೆ ಎಂದರೆ ತಪ್ಪಲ್ಲ. ದಿನಕ್ಕೆ ಒಂದಲ್ಲಾ ಒಂದು ಜಗಳಗಳು ನಡೆಯುತ್ತಲೇ ಇದೆ. ಹೆಚ್ಚಿನ ಜಗಳ ನಡೆಯುತ್ತಿರುವುದು ವಿನಯ್ ಅವರ ಕಾರಣಕ್ಕೆ ಎಂದರೆ ತಪ್ಪಲ್ಲ. ಬಹುತೇಕ ಸ್ಪರ್ಧಿಗಳೊಡನೆ ಜಗಳ ಅಡುತ್ತಿರುವ ವಿನಯ್ ಇದೀಗ ಪ್ರತಾಪ್ ಅವರ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ. ಇದಕ್ಕೆಲ್ಲಾ ವೀಕೆಂಡ್ ಎಪಿಸೋಡ್ ನಲ್ಲಿ ಕ್ಲಾರಿಟಿ ಸಿಗುತ್ತಾ?

ನಾಲ್ಕನೇ ವಾರದ ಟಾಸ್ಕ್ ನಡೆಯುವಾಗ, ಆ ದಿನದ ಟಾಸ್ಕ್ ಮುಗಿದು ವಿನಯ್, ನಮ್ರತಾ, ಸ್ನೇಹಿತ್, ತುಕಾಲಿ ಸಂತೋಷ್ ಎಲ್ಲರೂ ಮಾತನಾಡುವಾಗ ಒಂದು ವಿಚಾರ ಚರ್ಚೆಗೆ ಬರುತ್ತದೆ. ಅದೇನು ಎಂದರೆ, ಈಗ ಎಲ್ಲಾ ಹೆಣ್ಣುಮಕ್ಕಳು ಸೀರೆ ಹಾಕೊಂಡು ಬಂದ್ರೆ ಹೇಗಿರುತ್ತೆ ಅನ್ನೋ ಮಾತು ಬಂದಾಗ, ವಿನಯ್ ಅದು ಹೇಗಿರುತ್ತೋ ಆದರೆ ಒಬ್ಬ ವ್ಯಕ್ತಿ ಮಾತ್ರ ಬಹಳ ಕೆಟ್ಟದಾಗಿ ನೋಡ್ತಾನೆ.

ಅದು ಎಷ್ಟು ಕೆಟ್ಟದಾಗಿ ನೋಡ್ತಾನೆ ಅಂತ ನಾನು ತೋರಿಸ್ತೀನಿ ಎಂದು ಹೇಳುವ ವಿನಯ್, ಒಂದು ಸೀನ್ ಇಲ್ಲೇ ನಡೀತು, ಒಬ್ಬರು ಏನೋ ಸರಿ ಮಾಡಿಕೊಳ್ತಾ ಇದ್ರು, ಆಗ ನಾನು ಪಕ್ಕಕ್ಕೆ ತಿರುಗಿದೆ ಆಗ ಇಲ್ಲಿ ಇದ್ದವರು ಹೀಗೆ ನೋಡ್ತಿದ್ರು ಎಂದು ಒಂದು ರೀತಿಯಲ್ಲಿ ನೋಡಿ ತೋರಿಸುತ್ತಾರೆ. ಆಮೇಲೆ ಅದು ಅಸಹ್ಯಕರವಾಗಿತ್ತು ಎಂದು ಹೇಳುತ್ತಾರೆ ವಿನಯ್. ಆಗ ಸ್ನೇಹಿತ್ ಈ ಥರ ಮಾಡೋದಕ್ಕೆ ದೀದಿ ಅಂತ ಎಲ್ಲರನ್ನು ಕರೀಬೇಕಾ ಎಂದು ಹೇಳುತ್ತಾರೆ.

ಮನೆಯ ಇನ್ನು ಒಂದಿಬ್ಬರು ಇದೆಲ್ಲಾ ಅಸಹ್ಯ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಪ್ರತಾಪ್ ಅವರ ಬಗ್ಗೆ ಹೆಣ್ಣುಮಕ್ಕಳನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾನೆ ಎನ್ನುವ ಆರೋಪ ಮಾಡಿದ್ದಾರೆ ವಿನಯ್. ಪ್ರತಾಪ್ ತಮ್ಮ ಪಾಡಿಗೆ ತಾವು ಆಟ ಆಡುತ್ತಾ, ಹೆಣ್ಣುಮಕ್ಕಳ ಜೊತೆಗೂ ಚೆನ್ನಾಗಿಯೇ ಇದ್ದಾರೆ, ಗೌರವ ಕೊಡುತ್ತಿದ್ದಾರೆ. ಹೆಣ್ಣುಮಕ್ಕಳು ಕೂಡ ಪ್ರತಾಪ್ ದೃಷ್ಠಿ ಸರಿಇಲ್ಲ ಎಂದು ಈವರೆಗೂ ಆರೋಪ ಮಾಡಿಲ್ಲ. ಆದರೆ ವಿನಯ್ ಆರೋಪ ಮಾಡುತ್ತಿದ್ದಾರೆ.

ಎಲ್ಲಾ ವಿಚಾರದಲ್ಲೂ ಪ್ರತಾಪ್ ಅವರನ್ನೇ ಟಾರ್ಗೆಟ್ ಮಾಡಿಕೊಂಡು ಅವರೊಡನೆ ಕೆಟ್ಟದಾಗಿಯೂ ಮಾತನಾಡುತ್ತಾರೆ. ಮುಚ್ಕೊಂಡು ಬಾ, ಡಾಕ್ಟರ್ ಹತ್ರ ತಲೆ ತೋರಿಸ್ಕೊ ಎಂದೆಲ್ಲ ವಿನಯ್ ಪ್ರತಾಪ್ ಅವರ ಬಗ್ಗೆ ಹೇಳುತ್ತಿದ್ದು. ಇದೆಲ್ಲವೂ ಅತಿರೇಕಕ್ಕೆ ಹೋಗುತ್ತಿದೆ ಎನ್ನುವುದು ವೀಕ್ಷಕರ ಅಭಿಪ್ರಾಯ, ಇದಕ್ಕೆಲ್ಲಾ ಕಿಚ್ಚನ ಪಂಚಾಯಿತಿಯಲ್ಲಿ ಕ್ಲಾರಿಟಿ ಸಿಗುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Leave a Comment