Bigg Boss: ಪ್ರತಾಪ್ ಮೇಲೆ ವಿನಯ್ ಚೀರಾಟ! ಮತ್ತೊಂದು ಕದನ ಶುರು!

0 13

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10 ಇನ್ನೊಂದು ವಾರದಲ್ಲಿ ಮುಗಿಯಬೇಕಿತ್ತು, ಆದರೆ 2 ವಾರಗಳ ಮುಂದಕ್ಕೆ ಹೋಗಿದೆ. ನಿನ್ನೆ ಮೊನ್ನೆ 13ನೇ ವಾರದ ವೀಕೆಂಡ್ ಪಂಚಾಯಿತಿ ಕಾರ್ಯಕ್ರಮ ನಡೆದಿದೆ. ಕಿಚ್ಚ ಸುದೀಪ್ ಅವರು ಖಡಕ್ ಆಗಿ ಮೈಕಲ್ ವಿನಯ್ ಗೆ ವಾರ್ನಿಂಗ್ ನೀಡಿದರು ಎಂದರೆ ತಪ್ಪಲ್ಲ. ಶನಿವಾರದ ಎಪಿಸೋಡ್ ನಲ್ಲಿ ಪ್ರತಾಪ್ ಅವರು ವಿನಯ್ ಗೆ ಹೇಳಿದ ಮಾತುಗಳು ಕೂಡ ಸಿಕ್ಕಾಪಟ್ಟೆ ಹೈಲೈಟ್ ಆಗಿದೆ..

ಶನಿವಾರದ ಸಂಚಿಕೆಯಲ್ಲಿ ಕೆಲವು ಟೈಟಲ್ ಗಳು ಇರುವ ಪುಸ್ತಕವನ್ನು ಇಟ್ಟು, ಯಾರಿಗೆ ಈ ಟೈಟಲ್ ಸೂಟ್ ಆಗುತ್ತದೆಯೋ, ಅವರಿಗೆ ಆ ಬುಕ್ ನ ಕವರ್ ಪೇಜ್ ಕೊಡಬೇಕು. ಆ ವ್ಯಕ್ತಿ ಆ ಟೈಟಲ್ ಬುಕ್ ಬರೆದರೆ ಚೆನ್ನಾಗಿರುತ್ತದೆ ಎಂದು ಹೇಳಲಾಗಿತ್ತು. ಒಬ್ಬೊಬ್ಬರು ಒಂದೊಂದು ಬುಕ್ ಗಳನ್ನು ಸದಸ್ಯರಿಗೆ ಕೊಟ್ಟರು ಸಹ ಇನ್ನು ಕೆಲವು ಬುಕ್ ಗಳು ಉಳಿದಿತ್ತು. ಮತ್ತೊಮ್ಮೆ ಯಾರಾದರೂ ಕೊಡುತ್ತೀರಾ ಎಂದು ಕೇಳಿದಾಗ ಪ್ರತಾಪ್ ಕೊಡುವುದಾಗಿ ಹೇಳಿದರು.

ಇನ್ನೊಬ್ಬರನ್ನು ತುಳಿದು ಬದುಕೋದು ಹೇಗೆ .. ಎಂದು ಟೈಟಲ್ ಇದ್ದ ಪುಸ್ತಕವನ್ನು ತೆಗೆದುಕೊಂಡ ಪ್ರತಾಪ್ ಅದನ್ನು ವಿನಯ್ ಅವರಿಗೆ ಕೊಟ್ಟು, ಒಬ್ಬರನ್ನ ತುಳಿದು ಬದುಕೋದು ಹೇಗೆ ಎಂದು ವಿನಯ್ ಅಣ್ಣನಿಗೆ ಗೊತ್ತು. ಅಣ್ಣ ನೀನೇ ಸರಿ ಅಂತ ಅವರ ಜೊತೆಗೆ ಹೋದೊರೆಲ್ಲಾ ಇವತ್ತು ಮನೆಗೆ ಹೋಗಿದ್ದಾರೆ, ಎಲ್ಲರ ಬೆಡ್ ಶೀಟ್ ಅವರ ಬೆಡ್ ಗೆ ಸೇರಿಕೊಂಡಿದೆ ಎಂದು ಹೇಳುತ್ತಾರೆ ಪ್ರತಾಪ್. ಈ ಮಾತಿನಿಂದ ವಿನಯ್ ಮನಸ್ಸಿಗೆ ನೋವಾಗಿದೆ ಎಂದು ನಿನ್ನೆಯ ಸಂಚಿಕೆಯಲ್ಲಿ ಹೇಳಿಕೊಂಡರು.

ಆದರೆ ಆ ನೋವು ಈಗ ಕೋಪವಾಗಿ ಮುಂದುವರೆದಿದೆ.. ಇಂದಿನ ಸಂಚಿಕೆಯ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿದ್ದು, ಅದರಲ್ಲಿ ವಿನಯ್ ಪ್ರತಾಪ್ ಅವರೊಡನೆ ಜಗಳ ಆಡುತ್ತಿರುವುದನ್ನು ನೋಡಬಹುದು. ನೀನು ಚೀಪ್ ಎಂದು ಹೇಳುತ್ತಿರುವ ವಿನಯ್ ಅವರೊಡನೆ ಪ್ರತಾಪ್ ಅವರು ಕೂಡ ಜೋರಾಗಿಯೇ ಮಾತನಾಡುತ್ತಿದ್ದಾರೆ, ಆ ಥರ ಎಲ್ಲಾ ಮಾತಾಡಬೇಡಿ ಎನ್ನುತ್ತಿದ್ದಾರೆ ಪ್ರತಾಪ್.. ಒಟ್ಟಿನಲ್ಲಿ ಇವರಿಬ್ಬರದ್ದು ಈಗ ಮನೆಯಲ್ಲಿ ಹೊಸ ಜಗಳ ಶುರುವಾಗಿದೆ…

ನೀವು ಅಂದಂಗೆಲ್ಲ ಅನ್ನಿಸಿಕೊಳ್ಳೋಕೆ ಆಗಲ್ಲ ಎಂದು ಪ್ರತಾಪ್ ಹೇಳಿದ್ದು, ಏನೋ ಮಾಡ್ತೀಯಾ ಎಂದು ವಿನಯ್ ಜಗಳಕ್ಕೆ ಹೋಗಿದ್ದಾರೆ. ಈ ಪ್ರೋಮೋ ಈಗ ವೈರಲ್ ಆಗಿದ್ದು, ಜನರು ಪ್ರತಾಪ್ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ.

Leave A Reply

Your email address will not be published.