Bigg Boss: ಬಿಗ್ ಬಾಸ್ ಮನೆಯೊಳಗೆ ಆನೆ ಮಾವುತನ ಕಾಳಗದಲ್ಲಿ ಆಸ್ಪತ್ರೆ ಪಾಲಾದ ಕಾರ್ತಿಕ್!

0 15

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಗಳ 10 ವಾರದ ಆಟ ಮುಗಿದು ಈಗ 11ನೇ ವಾರದ ಆಟ ಶುರುವಾಗಿದೆ. ಈ ವಾರದ ಟಾಸ್ಕ್ ಗಾಗಿ ಮನೆ ಮಂದಿಯನ್ನು 2 ತಂಡಗಳಾಗಿ ವಿಂಗಡಿಸಿದ್ದಾರೆ ಬಿಗ್ ಬಾಸ್. ಒಂದು ತಂಡದ ನಾಯಕಿ ಸಂಗೀತ ಆದರೆ, ಇನ್ನೊಂದು ತಂಡದ ನಾಯಕಿ ತನಿಷಾ. ಇವರಿಬ್ಬರು ತಮ್ಮ ತಂಡಕ್ಕೆ ಸದಸ್ಯರನ್ನು ಖರೀದಿ ಮಾಡಬೇಕಿತ್ತು. ಇಬ್ಬರು ಕೂಡ ತಲಾ 4 ಸದಸ್ಯರನ್ನು ಖರೀದಿ ಮಾಡಿದರು..

ಸಂಗೀತ ತಂಡದಲ್ಲಿ ಮೈಕಲ್, ಅವಿ, ಪ್ರತಾಪ್ ಹಾಗೂ ನಮ್ರತಾ ಇದ್ದಾರೆ, ತನಿಷಾ ತಂಡದಲ್ಲಿ ವಿನಯ್, ಕಾರ್ತಿಕ್, ವರ್ತೂರ್ ಸಂತೋಷ್ ಮತ್ತು ತುಕಾಲಿ ಸಂತೋಷ್ ಇದ್ದಾರೆ. ಈ ಎರಡು ತಂಡಕ್ಕೆ ಬಿಗ್ ಬಾಸ್ ನಿನ್ನೆ ಒಂದು ಟಾಸ್ಕ್ ನೀಡಿದ್ದರು, ಎಪಿಸೋಡ್ ನಲ್ಲಿ ಆ ಟಾಸ್ಕ್ ಇನ್ನು ಮುಗಿದಿಲ್ಲ ಆದರೆ ಮಾಹಿತಿಗಳ ಪ್ರಕಾರ ತನಿಷಾ ಅವರ ತಂಡ ಈ ಟಾಸ್ಕ್ ನಲ್ಲಿ ಗೆದ್ದಿದೆ.

ಇನ್ನು ಎರಡನೆಯ ಟಾಸ್ಕ್ ಬಟ್ಟೆ ಒಗೆಯುವ ಟಾಸ್ಕ್ ಆಗಿದ್ದು, ಈ ಟಾಸ್ಕ್ ವೇಳೆ ಎರಡು ತಂಡಗಳ ನಡುವೆ ಭಾರಿ ಜಗಳ ನಡೆದಿದೆ. ಅದರಲ್ಲು ವಿನಯ್ ಮತ್ತು ಅವಿ ನಡುವೆ ಜೋರಾಗಿಯೇ ಜಗಳ ನಡೆದಿದ್ದು, ಈ ಜಗಳದ ನಡುವೆ ಕಾರ್ತಿಕ್ ಅವರಿಗೆ ಇಂಜೂರಿ ಆಗಿ ಆಸ್ಪತ್ರೆ ಸೇರಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ಟಾಸ್ಕ್ ನ ಪ್ರೋಮೋ ನೋಡಿದರೆ ಭಾರಿ ಜಗಳವೇ ನಡೆದಿದೆ ಎನ್ನುವುದು ಗೊತ್ತಾಗುತ್ತಿದೆ.

ಇನ್ನು ಈ ಟಾಸ್ಕ್ ಮುಂದುವರೆಸಲು ಸಾಧ್ಯವಿಲ್ಲ ಎಂದು ಖುದ್ದು ಬಿಗ್ ಬಾಸ್ ಟಾಸ್ಕ್ ಅನ್ನು ರದ್ದು ಮಾಡಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆ ಪದೇ ಪದೇ ರಣರಂಗ ಆಗುತ್ತಿದ್ದು, ಈ ಘಟನೆಗಳ ಬಗ್ಗೆ ಸುದೀಪ್ ಅವರು ವೀಕೆಂಡ್ ನಲ್ಲಿ ಏನು ಮಾತನಾಡುತ್ತಾರೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.