Bigg Boss: ಬಿಗ್ ಬಾಸ್ ಮನೆಗೆ ಬರುತ್ತಿದ್ದ ವಿನಯ್ ಗೆ ಠಕ್ಕರ್ ಕೊಟ್ಟ ಅವಿನಾಶ್!

Written by Pooja Siddaraj

Published on:

Bigg Boss: ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ನಿನ್ನೆಯವರೆಗೂ ಎಲ್ಲಾ ಸ್ಪರ್ಧಿಗಳು ಮನೆ ಚಿಕ್ಕದಾಗುತ್ತಿದೆ ಎಂದುಕೊಂಡಿದ್ದರು. ಆದರೆ ನಿನ್ನೆ ಇಬ್ಬರು ಹೊಸ ಸ್ಪರ್ಧಿಗಳು ಮನೆಗೆ ಕಾಲಿಟ್ಟು ಹೊಸ ಕಾಂಪಿಟೇಶನ್ ತಂದಿದ್ದಾರೆ. ಹೊಸದಾಗಿ ಬಂದಿರುವವರು ಮಾಡೆಲ್ ಪವಿ ಪೂವಪ್ಪ ಮತ್ತು ನಟ ಅವಿನಾಶ್ ಶೆಟ್ಟಿ.

ಇವರಿಬ್ಬರು ನಿನ್ನೆ ಬಿಗ್ ಮನೆಗೆ ಬರುತ್ತಿದ್ದ ಹಾಗೆಯೇ ತುಕಾಲಿ ಸಂತೋಷ್ ಮತ್ತು ಸಿರಿ ಇಬ್ಬರನ್ನು ಸೇವ್ ಮಾಡಿದ್ದಾರೆ. ಇನ್ನು ಬರುತ್ತಿದ್ದ ಹಾಗೆಯೇ ವಿನಯ್ ಗೆ ಠಕ್ಕರ್ ಕೊಟ್ಟಿದ್ದಾರೆ ಅವಿನಾಶ್. ಆನೆಯನ್ನ ಪಳಗಿಸೋಕೆ ಮಾವುತ ಬೇಕು ಅಂತ ಅಂದ್ರು, ಅದಕ್ಕೆ ಬಂದಿದ್ದೀನಿ ಎಂದು ಹೇಳಿದ್ದಾರೆ. ಅವಿನಾಶ್ ಹೇಳಿದ ಮಾತಿಗೆ ವಿನಯ್ ಎಲ್ಲರ ಎದುರು ನಕ್ಕರು ಕೂಡ..

ಆದರೆ ವಿನಯ್ ಅವದ ಈಗೋ ಗೆ ಹರ್ಟ್ ಆಗಿದೆ. ಮೈಕಲ್ ಜೊತೆ ಮಾತನಾಡುವಾಗ, ವಿನಯ್ ಆನೆಯನ್ನ 2 ಮೀಟರ್ ದೂರದಲ್ಲಿ ನಿಂತು ಪಳಗಿಸಬೇಕು, ಹತ್ರಕ್ಕೆ ಬಂದ್ರೆ ಆನೆ ತುಳಿದುಬಿಡುತ್ತೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಹೊಸ ಸ್ಪರ್ಧಿಗಳು ಬಿಗ್ ಮನೆಗೆ ಬಂದು ಹೊಸ ಹವಾ ಹಲ್ ಚಲ್ ಎಬ್ಬಿಸುತ್ತಿರೋದಂತೂ ನಿಜ. ಇದರಿಂದ ಮನೆಯಲ್ಲಿ ಬೇರೆ ಯಾವ ರೀತಿಯ ಬದಲಾವಣೆ ಎನ್ನುವ ಕುತೂಹಲ ಜನರಲ್ಲಿದೆ..

ಇನ್ನು ಈ ವಾರದ ಟಾಸ್ಕ್ ಗಳಲ್ಲಿ ಕೂಡ ವಿಭಿನ್ನತೆ ಇದ್ದು, ಮನೆಯ ಸದಸ್ಯರನ್ನು ಎರಡು ಗುಂಪುಗಳಾಗಿ ಮಾಡಿ ಟಾಸ್ಕ್ ಕೊಡುತ್ತಿದ್ದಾರೆ ಬಿಗ್ ಬಾಸ್. ಈ ವಾರ ಮತ್ತೊಮ್ಮೆ ಬಿಗ್ ಬಾಸ್ ಮನೆ ರಣರಂಗ ಆಗುತ್ತಾ ಎಂದು ಕಾದು ನೋಡಬೇಕಿದೆ.

Leave a Comment