Bigg Boss: 4ನೇ ಸ್ಥಾನಕ್ಕೆ ಮನೆಯಿಂದ ಹೊರಬಂದ ವಿನಯ್ ಗೌಡ! ಅಭಿಮಾನಿಗಳಿಗೆ ನಿರಾಸೆ!

0 17

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10 ನೇ ಗ್ರ್ಯಾಂಡ್ ಫಿನಾಲೆ ನಿನ್ನೆಯಷ್ಟೇ ಶುರುವಾಗಿದೆ. ಫಿನಾಲೆ ವೀಕ್ ನಲ್ಲಿ 6 ಜನ ಸ್ಪರ್ಧಿಗಳಿದ್ದರು, ವಿನಯ್, ಕಾರ್ತಿಕ್, ತುಕಾಲಿ ಸಂತೋಷ್, ಸಂಗೀತ, ವರ್ತೂರ್ ಸಂತೋಷ್ ಹಾಗೂ ಪ್ರತಾಪ್ ಇದ್ದರು. ನಿನ್ನೆ ನಡೆದ ಗ್ರ್ಯಾಂಡ್ ಫಿನಾಲೆ ಶನಿವಾರದ ಸಂಚಿಕೆಯಲ್ಲಿ ಸುದೀಪ್ ಅವರು ಅದ್ಭುತವಾಗಿ ಕಾರ್ಯಕ್ರಮ ನಡೆಸಿಕೊಟ್ಟು, ಒಬ್ಬರನ್ನು ಎಲಿಮಿನೇಟ್ ಮಾಡಿದರು.

ತುಕಾಲಿ ಸಂತೋಷ್ ಅವರು 6ನೇ ಸ್ತಾನದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇನ್ನುಳಿದ ಎಲಿಮಿನೇಷನ್ ಗಳು ಇಂದಿನ ಎಪಿಸೋಡ್ ನಲ್ಲಿ ನಡೆಯಲಿದ್ದು, ಕೆಲವು ಫೇಕ್ ಸುದ್ದಿಗಳು ನಿನ್ನೆಯಿಂದ ಕೇಳಿಬರುತ್ತಲೇ ಇದೆ. ನಿನ್ನೆಯ ಸಂಚಿಕೆಯಲ್ಲಿ ಸುದೀಪ್ ಅವರು ಒಂದಷ್ಟು ವಿಚಾರಗಳನ್ನು ಚರ್ಚೆ ಮಾಡಿದರು, ಇದೀಗ ಇಂದಿನ ಸಂಚಿಕೆಯ ಗ್ರ್ಯಾಂಡ್ ಫಿನಾಲೆ ಶುರುವಾಗಿದೆ.

ಈಗಾಗಲೇ ಎರಡು ಎಲಿಮಿನೇಷನ್ ನಡೆದಿದೆ ಎಂದು ಸುದ್ದಿ ತಿಳಿದುಬಂದಿದ್ದು, ಮೂಲ ಮಾಹಿತಿಗಳ ಪ್ರಕಾರ ವರ್ತೂರ್ ಸಂತೋಷ್ ಅವರು ಟಾಪ್ 5ನೇ ಸ್ಪರ್ಧಿಯಾಗಿ ಹೊರಬಂದಿದ್ದಾರೆ. ವರ್ತೂರ್ ಸಂತೋಷ್ ಅವರ ಸಾಮರ್ಥ್ಯ ಇನ್ನು ಹೆಚ್ಚಾಗಿತ್ತು, ಇಷ್ಟು ಬೇಗ ಅವರು ಹೊರಬಂದಿರುವುದು ವೀಕ್ಷಕರಿಗೆ ಶಾಕ್ ನೀಡಿದೆ. ಇನ್ನು 4ನೇ ಸ್ಥಾನದಲ್ಲಿ ವಿನಯ್ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಹೌದು, ವಿನಯ್ ಗೌಡ ಅವರು ಬಿಗ್ ಬಾಸ್ ಮನೆಯ ಆನೆ ಎಂದೇ ಹೆಸರು ಮಾಡಿದ್ದರು. ಹೆಚ್ಚಾಗಿ ಅಗ್ರೆಶನ್ ಇಂದಲೇ ಹೆಸರು ಮಾಡಿದ್ದ ವಿನಯ್ ಅವರು ಟಾಸ್ಕ್ ಗಳಲ್ಲಿ 100%ಕೊಟ್ಟಿದ್ದರು. ಫಿನಾಲೆಯಲ್ಲಿ ಟಾಪ್ 2 ನಲ್ಲಿ ಇರುತ್ತಾರೆ ಎಂದು ಅಭಿಮಾನಿಗಳು ಕೂಡ ನಿರೀಕ್ಷೆ ಮಾಡಲಾಗಿತ್ತು, ಆದರೆ ವಿನಯ್ ಅವರು 4ನೇ ಸ್ಥಾನಕ್ಕೆ ಎಲಿಮಿನೇಟ್ ಆಗಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗೆ ಭಾರಿ ಬೇಸರ ಆಗಿದೆ.

ಈಗ ಟಾಪ್ 3ನಲ್ಲಿ ಪ್ರತಾಪ್, ಸಂಗೀತ ಹಾಗೂ ಕಾರ್ತಿಕ್ ಇದ್ದು, ಈ ಮೂವರಲ್ಲಿ ಯಾರು ವಿನ್ನರ್ ಆಗುತ್ತಾರೆ ಎಂದು ಕಾದು ನೋಡಬೇಕಿದೆ. ಇಂದು ರಾತ್ರಿ ವಿನ್ನರ್ ಯಾರು ಎನ್ನುವ ವಿಚಾರ ಗೊತ್ತಾಗಲಿದೆ.

Leave A Reply

Your email address will not be published.