Bigg Boss: ಸಂಗೀತ ಮನಸ್ಥಿತಿಯನ್ನು ತಮ್ಮಿಷ್ಟಕ್ಕೆ ಬಳಸಿಕೊಳ್ಳುತ್ತಿದ್ದಾರಾ ವಿನಯ್ ನಮ್ರತಾ? ಸಂಗೀತ ಫ್ಯಾನ್ಸ್ ಬೇಸರ

0 3

Bigg Boss: ಬಿಗ್ ಬಾಸ್ ಶೋ ಶುರುವಾದ ಸಮಯದಿಂದ ಸಂಗೀತ ಅವರು ಕಾರ್ತಿಕ್ ತನಿಷಾ ಜೊತೆಗೆ ತುಂಬಾ ಕ್ಲೋಸ್ ಆಗಿದ್ದರು. ಈ ಮೂವರು ಬೆಸ್ಟ್ ಫ್ರೆಂಡ್ಸ್ ರೀತಿ ಇದ್ದಿದ್ದಂತೂ ನಿಜ. ಆದರೆ ಬರುಬರುತ್ತಾ ಎಲ್ಲವೂ ಬದಲಾಯಿತು. ಅವರೊಡನೆ ಇದ್ದಾಗ ಸಂಗೀತ ತುಂಬಾ ಖುಷಿಯಾಗಿದ್ದರು, ಆದರೆ ಯಾಕೋ ಫ್ರೆಂಡ್ಸ್ ಬಗ್ಗೆ ಹೆಚ್ಚು ಪೊಸೆಸಿವ್ ಆದ ಹಾಗಿತ್ತು, ಮೂವರ ನಡುವೆ ಹೆಚ್ಚಾಗಿ ಜಗಳವೇ ನಡೆಯುತ್ತಿತ್ತು.

ಕಳೆದ ವೀಕೆಂಡ್ ಎಪಿಸೋಡ್ ನಲ್ಲಿ ಇದರ ಬಗ್ಗೆ ಚರ್ಚೆಗಳು ಹೆಚ್ಚಾದ ಕಾರಣ ಸಂಗೀತ ಆ ಗ್ರೂಪ್ ಇಂದಲೇ ಹೊರಬಂದಿದ್ದಾರೆ. ಈಗ ಅವರು ಫ್ರೆಂಡ್ಸ್ ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದರು ಕೂಡ ಮತ್ತೆ ಅವರ ಜೊತೆಗೆ ಹೋಗುತ್ತಿಲ್ಲ. ಈ ವಾರ ಬಿಗ್ ಬಾಸ್ ಕೂಡ ಗ್ರೂಪ್ ಚೇಂಜ್ ಮಾಡಿದ್ದಾರೆ. ವಿನಯ್, ನಮ್ರತಾ, ಸ್ನೇಹಿತ್ ಇರುವ ಗ್ರೂಪ್ ನಲ್ಲಿರುವ ಸಂಗೀತ, ಈಗ ನಮ್ರತಾ ಜೊತೆಯಲ್ಲಿ ತುಂಬಾ ಕ್ಲೋಸ್ ಆಗಿದ್ದಾರೆ.

ಆದರೆ ವಿನಯ್, ನಮ್ರತಾ ಮತ್ತು ಸ್ನೇಹಿತ್ ಮೂವರು ಕೂಡ ಸಂಗೀತ ಅವರ ಮನಸ್ಥಿತಿಯನ್ನು ತಮ್ಮ ಗ್ರೂಪ್ ಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿರುವ ಹಾಗೆ ಕಾಣುತ್ತಿದೆ. ಸಂಗೀತ ಅವರಿಗೆ ಈಗ ಆ ಫ್ರೆಂಡ್ಶಿಪ್ ಮಿಸ್ ಆಗುತ್ತಿದ್ದರು ಅವರು ಹೇಗೋ ಮನಸ್ಸನ್ನು ನಿಯಂತ್ರಣಕ್ಕೆ ತಂದುಕೊಂಡು ಇರುವ ಪ್ರಯತ್ನ ಮಾಡುತ್ತಿದ್ದಾರೆ.. ಆದರೆ ಈ ಮೂವರು ಕೂಡ ಸಂಗೀತ ಅವರ ಮನಸ್ಸಿಗೆ ಆಗಿರುವ ಗಾಯಕ್ಕೆ ಉಪ್ಪು ಸುರಿಯುವ ಕೆಲಸ ಮಾಡುತ್ತಿದ್ದಾರೆ.

ಇದು ಕ್ಲಿಯರ್ ಆಗಿ ಗೊತ್ತಾಗುತ್ತಿದ್ದರು ಕೂಡ ಸಂಗೀತ ಅವರಿಗೆ ಅರ್ಥ ಆಗುತ್ತಿಲ್ಲ.. ನಮ್ರತಾ ಜೊತೆಗೆ ಕ್ಲೋಸ್ ಇರುವಾಗ, ನೀವು ಅವರ ಜೊತೆಗೆ ಇದ್ದಾಗ ನಿಮಗೆ ಸ್ವಾತಂತ್ರ್ಯ ಇರಲಿಲ್ಲ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸಂಗೀತ ಅವರು ತಮಗೆ ಅನ್ನಿಸಿದ್ದನ್ನು ಹೇಳಿದ್ದಾರೆ. ಹಾಗೆಯೇ ಕಾರ್ತಿಕ್ ತಮಗೆ ಸಪೋರ್ಟ್ ಇದ್ದಿದ್ದ ಆ ಸ್ಪೇಸ್ ನ ಮಿಸ್ ಮಾಡ್ತಿದ್ದೀನಿ ಆದರೆ ಮತ್ತೆ ಅಲ್ಲಿಗೆ ಹೋಗೋಕೆ ಇಷ್ಟ ಇಲ್ಲ ಎಂದು ಹೇಳಿದ್ದಾರೆ ಸಂಗೀತ..

ಇತ್ತ ವಿನಯ್ ಜೊತೆಗೆ ಸ್ನೇಹಿತ್, ನೀವು ಸಂಗೀತ ಪಾಲಿಗೆ ವಿಲ್ಲನ್ ಆದಾಗ ಕಾರ್ತಿಕ್ ಅವರಿಗೆ ಹೀರೋ ಆಗಿದ್ದು ಇನ್ನುಮುಂದೆ ಹಾಗೆ ಆಗೋದು ಬೇಡ ಎಂದು ಹೇಳಿದ್ದಾರೆ. ಈ ಮಾತನ್ನೆಲ್ಲ ಕೇಳಿದರೆ ಇವರೆಲ್ಲರೂ ಸಂಗೀತ ಅವರ ಬೇಸರದ ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ. ಒಬ್ಬ ವ್ಯಕ್ತಿಯ ಬಗ್ಗೆ ಮನಸ್ಸಿಗೆ ಬೇಸರ ಇದ್ದಾಗ ಅವರ ಬಗ್ಗೆ ಮತ್ತೊಬ್ಬರು ನೆಗಟಿವ್ ಆಗಿ ಹೇಳಿದರೆ, ಮನಸ್ಸು ಅದನ್ನೇ ನಂಬಿಕೊಳ್ಳುತ್ತದೆ.

ಸಂಗೀತ ಅವರ ವಿಷಯದಲ್ಲಿ ಕೂಡ ಆಗುತ್ತಿರುವುದು ಇದೇ. ಆದರೆ ವಿನಯ್ ಟೀಮ್ ತಮ್ಮ್ ಹಿಂದೆ ಈ ಥರ ಪ್ಲಾನ್ ಮಾಡ್ತಿರೋದು ಸಂಗೀತ ಅವರಿಗೆ ಗೊತ್ತಿಲ್ಲ. ಇದರಿಂದ ಅವರ ಅಭಿಮಾನಿಗಳಿಗೆ ಕೂಡ ಬೇಸರ ಆಗಿದ್ದು, ನಮ್ರತಾ ಸಹವಾಸ ಮಾತ್ರ ಬೇಡ ಎನ್ನುತ್ತಿದ್ದಾರೆ ಸಂಗೀತ ಫ್ಯಾನ್ಸ್

Leave A Reply

Your email address will not be published.