Bigg Boss: ಕಿಚ್ಚನ ಚಪ್ಪಾಳೆಯನ್ನೇ ಅನುಮಾನಿಸಿದ ನಮ್ರತಾ ವಿನಯ್, ನೆಟ್ಟಿಗರು ಗರಂ!

Written by Pooja Siddaraj

Published on:

Bigg Boss: ಬಿಗ್ ಬಾಸ್ ಶೋನಲ್ಲಿ ವೀಕೆಂಡ್ ಎಪಿಸೋಡ್ ಗಳಲ್ಲಿ ಸುದೀಪ್ ಅವರ ಬರುವಿಕೆಗಾಗಿಯೇ ವೀಕ್ಷಕರು ಕಾಯುತ್ತಿರುತ್ತಾರೆ. ಪ್ರತಿ ವಾರ ಸುದೀಪ್ ಅವರು ಬಂದು ಮನೆಯವರ ಸರಿತಪ್ಪುಗಳನ್ನು ತಿದ್ದಿ ಹೇಳುತ್ತಾರೆ. ಇದರಿಂದ ಮನೆಯ ಸದಸ್ಯರಿಗೆ ತಿದ್ದಿಕೊಳ್ಳುವ ಅವಕಾಶ ಸಿಗುತ್ತದೆ. ಆದರೆ ಇದೀಗ ಮೊದಲ ಸಾರಿ ಸುದೀಪ್ ಅವರ ನಿರ್ಧಾರದ ಬಗ್ಗೆಯೇ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ನಲ್ಲಿ ಇಡೀ ವಾರ ಉತ್ತಮ ಪ್ರದರ್ಶನ ನೀಡಿರುವ ಸದಸ್ಯನಿಗೆ ಸುದೀಪ್ ಅವರು ಕಿಚ್ಚನ ಚಪ್ಪಾಳೆ ಕೊಡುತ್ತಾರೆ. ಇದು ಎಲ್ಲಾ ಸ್ಪರ್ಧಿಗಳಿಗೆ ನಾವು ಕಿಚ್ಚನ ಚಪ್ಪಾಳೆ ಪಡೆಯಬೇಕು ಎಂದು ಸ್ಪೂರ್ತಿಯಾಗುತ್ತದೆ. ಜೊತೆಗೆ ಚಪ್ಪಾಳೆ ಪಡೆದ ಸ್ಪರ್ಧಿಗೆ ಹೆಮ್ಮೆ ಅನ್ನಿಸುತ್ತದೆ. ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಕೆಟ್ಟದ್ದು ಒಳ್ಳೆಯದು ಎಲ್ಲವೂ ನಡೆದಿತ್ತು.. ಅದರ ಸರಿತಪ್ಪುಗಳನ್ನು ಸುದೀಪ್ ಅವರು ತಿಳಿಸಿ ಹೇಳಿದ್ದರು..

ಹಾಗೆಯೇ ಪ್ರತಿ ವಾರದ ಹಾಗೆ ಈ ವಾರ ಕೂಡ ಕಾರ್ತಿಕ್ ಅವರ ಪರ್ಫಾರ್ಮೆನ್ಸ್ ಗೆ ಕಿಚ್ಚನ ಚಪ್ಪಾಳೆ ನೀಡಿದರು. ಆದರೆ ಸುದೀಪ್ ಅವರ ಈ ನಿರ್ಧಾರ ಸರಿ ಇದ್ಯಾ ಎಂದು ನಮ್ರತಾ ಮತ್ತು ವಿನಯ್ ಮಾತನಾಡುತ್ತಾ ಪ್ರಶ್ನೆ ಮಾಡಿದ್ದಾರೆ. ಅವನಿಗೆ ಅರ್ಹತೆ ಇದೆ ಅಂತ ಸಿಕ್ತಾ ಇಲ್ಲ ಕೊಡಬೇಕು ಅಂತ ಕೊಟ್ಟಿದ್ದ ಎಂದು ಹೇಳಿದ್ದಾರೆ ನಮ್ರತಾ ಗೌಡ.

ಇನ್ನು ವಿನಯ್ ಅವನು ಚೆನ್ನಾಗಿ ಆಡಿರೋದಕ್ಕೆ ಚಪ್ಪಾಳೆ ಸಿಕ್ಕಿಲ್ಲ, ನಾನು ಚೆನ್ನಾಗಿ ಆಡದೆ ಇದ್ದಿದ್ದಕ್ಕೆ ಸಿಕ್ಕಿದ್ದು ಎಂದು ಹೇಳಿದ್ದಾರೆ. ಈ ರೀತಿಯಾಗಿ ಇವರಿಬ್ಬರು ಕಿಚ್ಚನ ಚಪ್ಪಾಳೆಯನ್ನೇ ಪ್ರಶ್ನೆ ಮಾಡಿದ್ದು, ಸುದೀಪ್ ಅವರು ಇವರ ಗ್ಯಾಂಗ್ ನ ವಹಿಸಿಕೊಂಡು ಮಾತನಾಡಿದ್ದಕ್ಕೆ ಈ ಮಾತನ್ನ ಅವರು ಕೇಳಿಸಿಕೊಳ್ಳಬೇಕಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು.

Leave a Comment