Bigg Boss: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಶುರುವಾಗಿದೆ ವಿನಯ್ ಸಂಗೀತ ವಾರ್!

0 2

Bigg Boss: ಬಿಗ್ ಬಾಸ್ ಮನೆಯ ವಾಸದಲ್ಲಿ ಈಗ ಸೆಕೆಂಡ್ ಹಾಫ್ ಶುರುವಾಗಿದೆ. 50 ದಿನಗಳ ಜರ್ನಿ ಮುಗಿಸಿದ ಬಳಿಕ ಮನೆಯಲ್ಲಿ ಕಾಂಪಿಟೇಶನ್ ಇನ್ನಷ್ಟು ಜೋರಾಗಿದೆ. ಟಾಸ್ಕ್ ಗಳು ಕೂಡ ಅಷ್ಟೇ ವಿಭಿನ್ನವಾಗಿ ಸಾಗುತ್ತಿದೆ. ಆದರ್ಶ್ ಜೊತೆಗೆ ಜಗಳ ಮತ್ತು ಕದನಗಳು ಕೂಡ ಜೋರಾಗಿಯೇ ನಡೆಯುತ್ತಿದೆ. ಇದರ ಜೊತೆಗೆ ಈಗ ಮತ್ತೆ ಹಳೆಯ ಶತ್ರುಗಳ ನಡುವೆ ವಾರ್ ಕೂಡ ಶುರುವಾಗಿದೆ..

ಹೌದು ಬಿಗ್ ಬಾಸ್ ಜರ್ನಿ ಶುರು ಆದಾಗಿನಿಂದ ಸಂಗೀತ ಮತ್ತು ವಿನಯ್ ನಡುವೆ ಭಿನ್ನಾಭಿಪ್ರಾಯಗಳು ಇದ್ದವು, ಇಬ್ಬರು ಸಣ್ಣಪುಟ್ಟ ಮಾತುಗಳಿಗೆ ಜಗಳವಾಡುತ್ತಿದ್ದರು, ಹಲವು ಸಾರಿ ಈ ವಿಚಾರ ಕಿಚ್ಚನ ಪಂಚಾಯಿತಿಗೆ ಬಂದಿದೆ. ಆದರೆ ಕಳೆದ ಎರಡು ವಾರಗಳ ಹಿಂದೆ ಸಂಗೀತ ವಿನಯ್ ಟೀಮ್ ನಲ್ಲೇ ಇದ್ದರು, ಆಗ ಇಬ್ಬರು ಒಳ್ಳೆಯ ಸ್ನೇಹಿತರ ಹಾಗೆ ಇದ್ದರು. ಆದರೆ ಈಗ ಮತ್ತೆ ಬದಲಾಗಿದೆ.
ಸಂಗೀತ ಮತ್ತೆ ಕಾರ್ತಿಕ್ ಜೊತೆಗಿದ್ದಾರೆ.

ವಿನಯ್ ಜೊತೆಗೆ ಮನಸ್ತಾಪ ಮತ್ತೆ ಶುರುವಾಗಿದೆ. ಇಂದಿನ ಪ್ರೊಮೋದಲ್ಲಿ ಮತ್ತೆ ಇವರ ನಡುವೆ ಜಗಳ ಶುರುವಾಗಿದೆ. ಬಿಗ್ ಬಾಸ್ ಇಂದು ಒಂದು ಟಾಸ್ಕ್ ನೀಡಿದ್ದು, ಕಪ್ಪು ಮತ್ತು ಬಿಳಿ ಎರಡು ಬಣ್ಣದ ಗುಲಾಬಿಗಳನ್ನು ಇಟ್ಟು, ಮನೆಯಲ್ಲಿ ಪಾಸಿಟಿವ್ ಅನ್ನಿಸಿದವರಿಗೆ ಬಿಳಿ ಬಣ್ಣದ ಗುಲಾಬಿ, ನೆಗಟಿವ್ ಅನ್ನಿಸಿದವರಿಗೆ ಕಪ್ಪು ಬಣ್ಣದ ಗುಲಾಬಿ ಕೊಡಬೇಕು ಎಂದು ಹೇಳುತ್ತಾರೆ. ಆಗ ಸಂಗೀತ ಕಪ್ಪು ಬಣ್ಣದ ಗುಲಾಬಿಯನ್ನು ವಿನಯ್ ಅವರಿಗೆ ಕೊಟ್ಟು ಮನೆಯಲ್ಲಿ ನೆಗಟಿವಿಟಿಗೆ ನೀವೇ ಬೇರು ಎಂದು ಹೇಳುತ್ತಾರೆ..

ಇನ್ನು ವಿನಯ್ ಕೂಡ ಸಂಗೀತ ಅವರಿಗೆ ಕಪ್ಪು ಬಣ್ಣದ ಗುಲಾಬಿ ಕೊಟ್ಟು, ನೆಗಟಿವಿಟಿಗೆ ಬೇರು ನಾನು ಅಂದ್ರೆ ಆ ಬೇರು ಬೆಳೆಯೋಕೆ ಒಂದು ಬೀಜ ಬೇಕಲ್ಲ, ಆ ಬೀಜಾನೆ ಸಂಗೀತ.. ಇಲ್ದೆ ಇರೋ ಕಾರಣಕ್ಕೆ ಅವರು ಮೂಗು ತೋರಿಸಿ ಅದನ್ನೊಂದು movement ಮಾಡಿದವರು ಎನ್ನುತ್ತಾರೆ. ಅದಕ್ಕೆ ಸಂಗೀತ, ಇವತ್ತಿಗೂ ಅದಕ್ಕೆ ನಾನು ಸ್ಟ್ಯಾಂಡ್ ತಗೋತೀನಿ ಎಂದು ಹೇಳುತ್ತಾರೆ. ಅದಕ್ಕೆ ವಿನಯ್ ‘Will you please shutup” ಎನ್ನುತ್ತಾರೆ. ಅದಕ್ಕೆ ಸಂಗೀತ “mind your tongu” ಎಂದಿದ್ದಾರೆ. ಒಟ್ಟಿನಲ್ಲಿ ಇಂದಿನ ಸಂಚಿಕೆಯಲ್ಲು ಇವರ ಜಗಳ ಮುಂದುವರಿಯಲಿದೆ.

Leave A Reply

Your email address will not be published.