Bigg Boss: ಬಿಗ್ ಬಾಸ್ ಮನೆಯೊಳಗೆ ನಡೆದ ಈ ಘಟನೆ ನೋಡಿ ಹೊರಗಿನ ಜನರು ಶಾಕ್! ಎಲ್ಲಾ ಉಲ್ಟಾ ಪಲ್ಟಾ!

Written by Pooja Siddaraj

Published on:

Bigg Boss: ಈ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 10 ಅಗ್ರೆಸಿವ್ ನೆಸ್ ಹಾಗೂ ಕೋಪ, ಜಗಳ, ವಿವಾದ ಇಂಥ ಕಾರಣಕ್ಕೆ ಹೆಚ್ಚು ಸುದ್ದಿಯಾಯಿತು. ಈ ಸೀಸನ್ ನಲ್ಲಿ ಜಗಳಕ್ಕೆ ಅತಿ ಹೆಚ್ಚು ಸುದ್ದಿಯಾದವರು ವಿನಯ್ ಹಾಗೂ ಸಂಗೀತ. ಇವರಿಬ್ಬರು ಜೊತೆಯಾಗಿ ಒಂದು ಸೀರಿಯಲ್ ನಲ್ಲಿ ನಟಿಸಿದ್ದರು ಸಹ, ಯಾವಾಗಲೂ ಜಗಳ ಆಡುತ್ತಲೇ ಇದ್ದರು.

ಅವಮಾನ ಮಾಡುತ್ತ, ಹೀಯಾಳಿಸುತ್ತಲೇ ಇದ್ದರು. ಇತ್ತ ಕಾರ್ತಿಕ್ ಹಾಗೂ ಸಂಗೀತ ತುಂಬಾ ಅನ್ಯೋನ್ಯವಾಗಿ ಸ್ನೇಹಿತರಾಗಿ ಇರುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿ ಹೋಗಿದೆ, ಕಾರ್ತಿಕ್ ಸಂಗೀತ ನಡುವೆ ಹಲವು ಕಾರಣಕ್ಕೆ ವೈಮನಸ್ಸು ಮೂಡಿ, ಇಬ್ಬರು ಕೂಡ ಮೊದಲಿನ ಹಾಗಿಲ್ಲ, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿಲ್ಲ, ಇವರಿಬ್ಬರ ನಡುವೆಯೇ ಜಗಳಗಳು ಜಾಸ್ತಿಯಾಗಿದೆ. ಆದರೆ ಇನ್ನೊಂದು ಕಡೆ ಸಂಗೀತ ವಿನಯ್ ಚೆನ್ನಾಗಿದ್ದಾರೆ.

ಸಂಗೀತ ಹಾಗೂ ವಿನಯ್ ನಡುವೆ ಈಗ ಮೊದಲಿನ ಜಗಳಗಳು ನಡೆಯುತ್ತಿಲ್ಲ, ಇಬ್ಬರು ಆರಾಮಾಗಿಯೇ ಇದ್ದಾರೆ. ಚೆನ್ನಾಗಿಯೇ ಮಾತನಾಡುತ್ತಿದ್ದಾರೆ. ಇತ್ತ ಪ್ರತಾಪ್ ಹಾಗೂ ವಿನಯ್ ನಡುವೆ ಕೂಡ ಜಗಳ ನಡೆದಿತ್ತು, ಅದು ಕೂಡ ಕಡಿಮೆಯಾಗಿ, ಪ್ರತಾಪ್ ವಿನಯ್ ಕೂಡ ಚೆನ್ನಾಗಿಯೇ ಮಾತನಾಡುತ್ತಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಪ್ರತಾಪ್ ಮತ್ತು ವಿನಯ್ ಸ್ವಿಮಿಂಗ್ ಪೂಲ್ ಹತ್ತಿರ ಮಲಗಿ ಮಾತನಾಡುತ್ತಿದ್ದರು.

ಅಲ್ಲೇ ಸಂಗೀತ ಕೂಡ ಇದ್ದರು, ಈ ಮೂವರು ಇಷ್ಟು ಚೆನ್ನಾಗಿ ಮಾತನಾಡುತ್ತಾ ಇರೋದು ನೋಡಿ ಒಳಗಿರುವ ಮನೆಯ ಸದಸ್ಯರು ಹಾಗೂ ಹಾಗೂ ಹೊರಗಿರುವ ವೀಕ್ಷಕರು ಎಲ್ಲರೂ ಕೂಡ ಶಾಕ್ ಆಗಿದ್ದಾರೆ. ಇದೆಂಥ ಬದಲಾವಣೆ ಇವರೆಲ್ಲಾ ಹೀಗೆ ಚೆನ್ನಾಗಿದ್ದರೆ, ನೋಡೋಕು ಚೆನ್ನಾಗಿರುತ್ತೆ ಎನ್ನುತ್ತಿದ್ದಾರೆ ವೀಕ್ಷಕರು..

Leave a Comment