Bigg Boss: ಬಿಗ್ ಬಾಸ್ ಮನೆಯಲ್ಲಿ ನಾಲ್ಕು ವಾರಗಳ ಸಮಯವನ್ನು ಸ್ಪರ್ಧಿಗಳು ಕಳೆದಿದ್ದಾರೆ. ಇದೀಗ ಐದನೇ ವಾರಕ್ಕೂ ಕಾಲಿಟ್ಟಿದ್ದಾರೆ. ಈ ಸೀಸನ್ ನಲ್ಲಿ ಅತಿ ಹೆಚ್ಚಾಗಿ ಸುದ್ದಿ ಆಗಿರುವುದು ವಿನಯ್ ಮತ್ತು ಸಂಗೀತ ನಡುವಿನ ಜಗಳ ಎಂದರೆ ತಪ್ಪಲ್ಲ. ಇವರಿಬ್ಬರ ಜಗಳ ಸಿಕ್ಕಾಪಟ್ಟೆ ಹೈಲೈಟ್ ಸಹ ಆಗಿತ್ತು. ಆದರೆ ವಿನಯ್ ಸಂಗೀತ ನಡುವೆ ಇಷ್ಟು ದ್ವೇಷ ಬೆಳೆಯೋದಕ್ಕೆ ಕಾರಣ ಏನು ಗೊತ್ತಾ?
ವಿನಯ್ ಮತ್ತು ಸಂಗೀತ ಹೊಸದಾಗಿ ಪರಿಚಯವಾಗಿ ಜಗಳ ಆಡುತ್ತಿಲ್ಲ, ಇವರಿಬ್ಬರು ಜೊತೆಯಾಗಿ ಒಂದೇ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದರು. ಹರ ಹರ ಮಹಾದೇವ ಧಾರವಾಹಿಯಲ್ಲಿ ವಿನಯ್ ಶಿವನ ಪಾತ್ರದಲ್ಲಿ ನಟಿಸಿದರೆ, ಸಂಗೀತ ಸತಿ ಪಾತ್ರದಲ್ಲಿ ನಟಿಸಿದ್ದರು. ಸಂಗೀತ ಅವರಿಗೆ ಹೆಸರು ಬಂದಿದ್ದೆ ಈ ಧಾರಾವಾಹಿಯ ಪಾತ್ರದಿಂದ ಎಂದರೆ ತಪ್ಪಲ್ಲ. ಇವರಿಬ್ಬರದ್ದು ಬಹಳ ಹಳೆಯ ಪರಿಚಯ.
ವಿನಯ್ ಸಂಗೀತ ನಡುವೆ ಮೊದಲಿಂದಲು ಜಗಳ ಇತ್ತ, ಇಬ್ಬರ ನಡುವೆ ಸ್ನೇಹ ಇರಲಿಲ್ವಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಅದಕ್ಕೆ ಉತ್ತರ ಸಿಕ್ಕಿದ್ದು, ಮಾಹಿತಿಯ ಪ್ರಕಾರ ವಿನಯ್ ಮತ್ತು ಸಂಗೀತ ನಡುವೆ ದೊಡ್ಡದೇನು ಇಲ್ಲ, ಸಣ್ಣಪುಟ್ಟ ಮನಸ್ತಾಪಗಳು ಇದ್ದವು ಎಂದು ಮಾಹಿತಿ ಸಿಕ್ಕಿದೆ. ಆದರೆ ಇವರಿಬ್ಬರ ಜಗಳ ಇಷ್ಟು ದೊಡ್ಡದಾಗಿ, ದ್ವೇಷವಾಗಿ ಮಾರ್ಪಾಡಾಗಿರುವುದು ಬಿಗ್ ಬಾಸ್ ಮನೆಯಲ್ಲೇ..
ವೈಯಕ್ತಿಕ ದ್ವೇಷ ಮತ್ತು ಜಗಳಗಳ ಕಾರಣಕ್ಕೆ ವಿನಯ್ ಸಂಗೀತ ಅವರಿಂದ ಟಾಸ್ಕ್ ಕೂಡ ರದ್ದಾಗಿತ್ತು. ಅಷ್ಟರ ಮಟ್ಟಿಗೆ, ಇಬ್ಬರ ನಡುವೆ ವಾದ ವಿವಾದಗಳು ನಡೆಯುತ್ತದೆ. ಕಾರ್ತಿಕ್ ಸಂಗೀತ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಮೊದಲನೇ ವಾರ ಓಪನ್ ನಾಮಿನೇಷನ್ ನಡೆದಾಗ ವಿನಯ್ ಸಂಗೀತ ಅವರನ್ನು ನಾಮಿನೇಟ್ ಮಾಡಿದ್ದರು. ಆ ಒಂದು ಕಾರಣದಿಂದ ಇಬ್ಬರ ನಡುವೆ ಶುರುವಾದ ಜಗಳ ದ್ವೇಷವಾಗಿದೆ.
ನಾಲ್ಕನೇ ವಾರ ಅತಿಯಾಗಿ ನಡೆದ ಜಗಳಕ್ಕೆ ಸುದೀಪ್ ಅವರು ಕೂಡ ವಿನಯ್ ಅವರಿಗೆ ಚುರುಕಾಗಿ ಬಿಸಿ ಮುಟ್ಟಿಸಿದ್ದರು. ಈಗ ವಿನಯ್ ಅವರು ಸುದೀಪ್ ಅವರ ಮಾತಿನಿಂದ ಬುದ್ಧಿ ಕಲಿತಿದ್ದಾರ ಎನ್ನುವುದು ಗೊತ್ತಿಲ್ಲ. ಮುಂದಿನ ಸಂಚಿಕೆಗಳಲ್ಲಿ ಯಾವ ರೀತಿ ಇಬ್ಬರು ಇರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.