Bigg Boss: ತುಕಾಲಿ ಸಂತೋಷ್ ವಿರುದ್ಧ ತಿರುಗಿ ಬಿದ್ದ ವಿನಯ್! ಅಂತಿಮ ಹಂತದಲ್ಲಿ ಮತ್ತೆ ಜಗಳ ಶುರು!

0 33

Bigg Boss: ಬಿಗ್ ಬಾಸ್ ಮನೆಯಲ್ಲಿ ಈಗ ಅಂತಿಮ ಸಂಚಲನ ನಡೆಯುತ್ತಿದೆ. ಇಂದು ಕೊನೆಯ ದಿವಸ, ನಾಳೆ ಕೊನೆಯ ವಾರದ ಎಲಿಮಿನೇಷನ್ ನಡೆಯಲಿದ್ದು, ಮುಂದಿನ ವಾರ ಫಿನಾಲೆ ವಾರ ಆಗಿರುತ್ತದೆ. ಈ ವಾರ ಸೈಲೆಂಟ್ ಆಗಿಯೇ ಇದ್ದ ವಿನಯ್ ಗೌಡ ಈಗ ತುಕಾಲಿ ಸಂತೋಷ್ ಅವರ ಜೊತೆಗೆ ಜಗಳ ಆಡಿದ್ದಾರೆ. ನಮ್ರತಾ ಅವರು ಕ್ಯಾಪ್ಟನ್ ಆಗಿದ್ದಾಗ ಇನ್ಮೇಲೆ ಅಗ್ರೆಸಿವ್ ಆಗಿರುವುದಿಲ್ಲ ಎಂದು ವಿನಯ್ ಹೇಳಿದ್ದರು.

ಆದರೆ ಈಗ ತುಕಾಲಿ ಸಂತೋಷ್ ಅವರೊಡನೆ ಜಗಳ ಆಡಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿರುವುದು ಸಂಗೀತ ಶೃಂಗೇರಿ ಅವರು. ಫಿನಾಲೆಗೆ ಆಯ್ಕೆ ಆಗಿರುವ ಮೊದಲ ಸ್ಪರ್ಧಿ ಸಂಗೀತ, ಈ ವಾರ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಹಂತ ಹಂತವಾಗಿ ಟಾಸ್ಕ್ ಕೊಡುತ್ತಿದ್ದಾರೆ. ಟಾಸ್ಕ್ ನಲ್ಲಿ ಪಾಲ್ಗೊಳ್ಳಲು ಸ್ಪರ್ಧಿಗಳನ್ನು ಮನೆಯ ಕ್ಯಾಪ್ಟನ್ ಆಯ್ಕೆ ಮಾಡಬೇಕು.

ಮೊದಲ ಕೆಲವು ಟಾಸ್ಕ್ ಗಳಲ್ಲಿ ವೋಟಿಂಗ್ ಮೂಲಕ ಟಾಸ್ಕ್ ಆಡುವ ಸ್ಫರ್ಧಿಗಳನ್ನು ಆಯ್ಕೆ ಮಾಡಿದ್ದರು ಸಂಗೀತ, ಆದರೆ ಇಂದಿನ ಎಪಿಸೋಡ್ ನಲ್ಲಿ ಸಂಗೀತ ಅವರು ಆಡಲು ಅವಕಾಶ ಸಿಗದೆ ಇರುವವರಿಗೆ ಅವಕಾಶ ಸಿಗಬೇಕು ಎಂದು ವಿನಯ್ ಅವರ ಹೆಸರನ್ನು ಹೇಳುತ್ತಾರೆ. ಅದಕ್ಕೆ ತುಕಾಲಿ ಸಂತೋಷ್, ಇಷ್ಟು ಸಲ ವೋಟಿಂಗ್ ಮಾಡ್ತಿದ್ರಿ, ಈಗ ಅವಕಾಶ ಸಿಗದೆ ಇರೋರಿಗೆ ಕೊಡ್ತಿದ್ದೀರಾ, ಈಗಲೂ ವೋಟಿಂಗ್ ಅನ್ನೇ ಮಾಡಿ ಎಂದು ಕಿಡಿಕಾರಿದ್ದಾರೆ..

ಈ ವಿಚಾರಕ್ಕೆ ಸಂಗೀತ ಪರ ನಿಂತಿರುವ ವಿನಯ್, ತುಕಾಲಿ ಸಂತೋಷ್ ಅವರೊಡನೆ ಜಗಳ ಆಡಿದ್ದಾರೆ. ನೀನ್ ಯಾರು ಇದನ್ನೆಲ್ಲಾ ಹೇಳೋಕೆ, ಯಾವ ಕೆಲಸ ಮಾಡಿಕೊಂಡು ಇಷ್ಟು ದಿನದಿಂದ ಈ ಮನೆಯಲ್ಲಿದ್ಯಾ ಅಂತ ಗೊತ್ತಿದೆ.. ಎಂದು ತುಕಾಲಿ ಸಂತೋಷ್ ಅವರ ಜೊತೆಗೆ ಜಗಳ ಆಡಿದ್ದಾರೆ.

Leave A Reply

Your email address will not be published.