Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ವಿನಯ್ ಗೌಡ ಅವರು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಮೂರು ವಾರಗಳಿಂದ ರೂಡ್ ಅನ್ನಿಸುತ್ತಿದ್ದು, 4ನೇ ವಾರ ಇದು ಇನ್ನಷ್ಟು ಜಾಸ್ತಿಯಾಗಿದೆ. ಕಳೆದ ಎಪಿಸೋಡ್ ಗಳಿಂದ ವಿನಯ್ ಅವರ ವರ್ತನೆ ಅತಿಯಾಗಿದ್ದು, ಜನರಿಗೂ ಇಷ್ಟವಾಗಿಲ್ಲ. ಇದರ ನಡುವೆ ವಿನಯ್ ಹೇಳಿರುವ ಒಂದು ಮಾತು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಮೂರನೇ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಎಲ್ಲಾ ಸ್ಪರ್ಧಿಗಳಿಗೆ ವೀಕ್ಷಕರಿಂದ ಬಂದಿರುವ ಒಂದು ಗಿಫ್ಟ್ ಮತ್ತು ಲೆಟರ್ ಕೊಟ್ಟರು. ಅದರಲ್ಲಿ ವಿನಯ್ ಅವರಿಗೆ ಆನೆಯನ್ನು ಗಿಫ್ಟ್ ಆಗಿ ಕೊಡಲಾಗಿತ್ತು, ಹಾಗೆಯೇ ವಿನಯ್ ಅವರಿಗೆ ಸರಿಸಾಟಿ ಯಾರು ಇಲ್ಲ ಎನ್ನುವ ಹಾಗೆ ಬಿಂಬಿಸಲಾಯಿತು. ವಿನಯ್ ಅವರು ಕೂಡ ಆ ಮನೆಯಲ್ಲಿ ತಮಗೆ ಕಾಂಪಿಟೇಶನ್ ಎನ್ನುವ ಹಾಗೆ ಯಾರು ಇಲ್ಲ ಎಂದು ಹೇಳಿದ್ದರು.
ಆದರೆ ಇದು ಮನೆಯವರಿಗೆ ಸರಿ ಎನ್ನಿಸಲಿಲ್ಲ, ಕಾರ್ತಿಕ್, ನಮ್ರತಾ ಎಲ್ಲರೂ ನಾವು ಟಫ್ ಕಾಂಪಿಟೇಶನ್ ಎಂದು ಹೇಳಿದ್ದರು. ಇತ್ತ ಹೊರಗಿರುವ ವೀಕ್ಷಕರಿಗೆ ಕೂಡ ವಿನಯ್ ಅವರ ವರ್ತನೆ ಇಷ್ಟವಿರಲಿಲ್ಲ. ಅಂದು ಸಿಕ್ಕ ಬಿಲ್ಡಪ್ ನಲ್ಲೇ ನಾಲ್ಕನೇ ವಾರ ವಿನಯ್ ಅವರ ಕೋಪ, ದರ್ಪ ಇದೆಲ್ಲವೂ ಇನ್ನಷ್ಟು ಹೆಚ್ಚಾದ ಹಾಗೆ ಕಾಣುತ್ತಿದೆ. ಮನೆಯ ಬೇರೆ ಸ್ಪರ್ಧಿಗಳ ಮೇಲೆ ಬೇಕೆಂದೇ ರೇಗುವುದು, ಹರ್ಟ್ ಆಗುವ ಹಾಗೆ ಮಾತನಾಡುವುದು ಮಾಡುತ್ತಿದ್ದಾರೆ.
ಅಸರ ನಡುವೆಯೇ ಈಗ ಬಿಗ್ ಬಾಸ್ ಮನೆಯಲ್ಲಿ 4ನೇ ವಾರದ ಹಳ್ಳಿ ಜೀವನದ ಟಾಸ್ಕ್ ಶುರುವಾಗಿದ್ದು, ಜಗಳ ಕದನ ಎಲ್ಲವೂ ಜಾಸ್ತಿಯಾಗಿದೆ. ಟಾಸ್ಕ್ ನಲ್ಲಿ ಸಂಗೀತ ಒಂದು ಮನೆಯ ಮುಖ್ಯಸ್ಥೆಯಾದರೆ, ವಿನಯ್ ಮತ್ತೊಂದು ಮನೆಯ ಮುಖ್ಯಸ್ಥೆ ಆಗಿದ್ದಾರೆ. ಇವರಿಗೆ ಕೊಡುತ್ತಿರುವ ಟಾಸ್ಕ್ ಇಂದ ಮನೆಯಲ್ಲಿ ಹೆಚ್ಚು ಜಗಳಗಳು ನಡೆದಿದೆ. ಇದರ ನಡುವೆಯೇ ವಿನಯ್ ಅವರು ಹೇಳಿರುವ ಒಂದು ಮಾತು ಭಾರಿ ಚರ್ಚೆಗೆ ಕಾರಣವಾಗಿದೆ.
ತಮ್ಮ ಗ್ಯಾಂಗ್ ಜೊತೆಗೆ ಕೂತು ಮಾತನಾಡುವಾಗ, ಈ ಮನೆಗೆ ಬರುವಾಗ ಮಾಡಿರೋ ಅಗ್ರಿಮೆಂಟ್ ನಲ್ಲಿ, ಯಾರಿಗಾದರು ಹೊಡೆದರೆ ಮನೆಯಿಂದ ಹೊರಗಡೆ ಹೋಗ್ತೀನಿ ಅಂತ ಸೈನ್ ಮಾಡಿದ್ದೀನಿ, ಒಂದು ವೇಳೆ ಮನೆಯಿಂದ ಹೊರಗಡೆ ಹೋಗೋ ದಿನ ಬಂದ್ರೆ ಒಬ್ಬರಿಗೆ ಹೊಡೆದೆ ಹೋಗೋದು, ಎಂಥ ಏಟು ಅಂದ್ರೆ ಲೈಫ್ ಅಲ್ಲಿ ಮರಿಬಾರದು ಎಂದು ಹೇಳಿದ್ದಾರೆ. ಇದೀಗ ಈ ಮಾತು ಭಾರಿ ಚರ್ಚೆಗೆ ಕಾರಣವಾಗಿದೆ.
ವಿನಯ್ ಈ ಮಾತನ್ನು ಹೇಳಿದಾಗ ನಮ್ರತಾ ಕೂಡ ಅಲ್ಲೇ ಇದ್ದರು, ಹೊಡೆಯೋದು ಯಾರಿಗೆ ಅಂತ ನನಗೆ ಗೊತ್ತು ಎನ್ನುತ್ತಾರೆ ನಮ್ರತಾ. ಇದೀಗ ವಿನಯ್ ಅವರು ಹೇಳಿದ ಈ ಮಾತುಗಳು ಚರ್ಚೆಗೆ ಕಾರಣವಾಗಿದ್ದು, ಈತ ರೌಡಿಸಂ ಮಾಡೋಕೆ ಮನೆಗೆ ಬಂದಿದ್ದಾನಾ ಎಂದು ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ.