Bigg Boss: ಬಿಗ್ ಬಾಸ್ ವಿಜೇತರಿಗೆ 50 ಲಕ್ಷ ಘೋಷಿಸಿದರು ಕೊನೆಗೆ ಕೈಗೆ ಸಿಗುವ ಮೊತ್ತವೆಷ್ಟು ಗೊತ್ತಾ? ಪುಡಿಗಾಸು ಅಷ್ಟೇ!

Written by Pooja Siddaraj

Published on:

Bigg Boss: ಬಿಗ್ ಬಾಸ್ ಇದು ಭಾರತದ ಅತಿದೊಡ್ಡ ರಿಯಾಲಿಟಿ ಶೋ ಎಂದರೆ ತಪ್ಪಲ್ಲ. ಭಾರತದ ವಿವಿಧ ಭಾಷೆಗಳಲ್ಲಿ ಬಿಗ್ ಬಾಸ್ ಶೋ ನಡೆಯುತ್ತದೆ. ಈ ಶೋ ಅನ್ನು ವೀಕ್ಷಿಸಲು ಕೋಟ್ಯಂತರ ಜನ ಕಾಯುತ್ತಿರುತ್ತಾರೆ ಎಂದರೆ ತಪ್ಪಲ್ಲ. ಬಿಗ್ ಬಾಸ್ ಶೋ ಗೆದ್ದವರಿಗೆ 50 ಲಕ್ಷ ಬಹುಮಾನ ಘೋಷಣೆ ಮಾಡಿರುತ್ತಾರೆ. ಆದರೆ ನಿಜಕ್ಕೂ ಸ್ಪರ್ಧಿಗಳ ಕೈಗೆ ಸಿಗುವ ಹಣವೆಷ್ಟು ಗೊತ್ತಾ?

ಬಿಗ್ ಬಾಸ್ ಶೋ ಹಿಂದಿಯಲ್ಲಿ ನಿರೂಪಣೆ ಮಾಡುವುದು ಸಲ್ಮಾನ್ ಖಾನ್ ಅವರು, ಹಿಂದಿಯಲ್ಲಿ ಈಗ 17ನೇ ಸೀಸನ್ ನಡೆಯುತ್ತಿದೆ. ಕನ್ನಡದಲ್ಲಿ 10ನೇ ಸೀಸನ್ ನಡೆಯುತ್ತಿದ್ದು, ಸುದೀಪ್ ಅವರು ನಿರೂಪಣೆ ಮಾಡುತ್ತಿದ್ದಾರೆ. ತೆಲುಗಿನಲ್ಲಿ ನಟ ನಾಗಾರ್ಜುನ, ತಮಿಳಿನಲ್ಲಿ ನಟ ಕಮಲ್ ಹಾಸನ್, ಮಲಯಾಳಂ ನಲ್ಲಿ ನಟ ಮೋಹನ್ ಲಾಲ್ ಅವರು ನಿರೂಪಣೆ ಮಾಡುತ್ತಾರೆ. ಈಗಾಗಲೇ ಹಲವು ಸೀಸನ್ ಗಳು ನಡೆದಿದೆ.

ಬಿಗ್ ಬಾಸ್ ಕನ್ನಡ ಸೀಸನ್ ಬಹಳ ಚೆನ್ನಾಗಿ ಸಾಗುತ್ತಿದ್ದು, ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಶೋ ವಿನ್ನರ್ ಗೆ 50 ಲಕ್ಷ ಎಂದು ಚಾನೆಲ್ ಗಳು ಘೋಷಣೆ ಮಾಡಿರುತ್ತದೆ. ಆದರೆ ನಿಜಕ್ಕೂ ಗೆದ್ದವರಿಗೆ ಅಷ್ಟು ಹಣ ಪೂರ್ತಿಯಾಗಿ ಸಿಗುವುದಿಲ್ಲ ಎನ್ನುವುದು ಗೊತ್ತಿರದ ವಿಚಾರ. ಹೌದು, ಬಿಗ್ ಬಾಸ್ ಗೆದ್ದವರಿಗೆ 50 ಲಕ್ಷ ರೂಪಾಯಿ ಪೂರ್ತಿ ಹಣ ಸಿಗುವುದಿಲ್ಲ ಟ್ಯಾಕ್ಸ್ ಎಲ್ಲವೂ ಕಳೆದು ಅರ್ಧ ಅಥವಾ ಅದಕ್ಕಿಂತ ಕಡಿಮೆ ಹಣ ಸಿಗುತ್ತದೆ.

ಈ ಬಗ್ಗೆ ಬಿಗ್ ಬಾಸ್ ತೆಲುಗು ಸೀಸನ್ 5 ವಿನ್ನರ್ ಸನ್ನಿ ಮಾತನಾಡಿದ್ದಾರೆ, ಬಿಗ್ ಬಾಸ್ ಬಳಿಕ ಅರ್ಧಕ್ಕಿಂತ ಹೆಚ್ಚಿನ ಹಣ ಟ್ಯಾಕ್ಸ್ ರೂಪದಲ್ಲಿ ಸರ್ಕಾರವೇ ತೆಗೆದುಕೊಂಡಿತು, ತಾವು ಗೆದ್ದ ಹಣದಲ್ಲಿ ಸುಮಾರು 27 ಲಕ್ಷ ಟ್ಯಾಕ್ಸ್ ಆಗಿಯೇ ಹೋಗಿದೆ ಕೈಗೆ ಸಿಕ್ಕಿದ್ದು ಅದಕ್ಕಿಂತ ಕಡಿಮೆ ಹಣ. ಬುದ್ಧಿವಂತರು ಚಾರಿಟಿ ಕೊಡುವುದಾಗಿ ಹೇಳಿ ಟ್ಯಾಕ್ಸ್ ಕಡಿಮೆ ಮಾಡಿಕೊಳ್ಳುತ್ತಾರೆ, ತಮಗೆ ಅದೆಲ್ಲಾ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ..

ಹೌದು, 2017ರಲ್ಲಿ ಜಿ.ಎಸ್.ಟಿ ಜಾರಿಗೆ ಬಂದ ಬಳಿಕ ಟ್ಯಾಕ್ಸ್ ರೂಪದಲ್ಲಿ ಹೆಚ್ಚಿನ ಹಣ ಸರ್ಕಾರದ ಪಾಲಿಗೆ ಹೋಗುತ್ತಿದ್ದು. ಸ್ಪರ್ಧಿಗಳಿಗೆ ಸಿಗುತ್ತಿರುವ ಹಣವೇ ಕಡಿಮೆ ಆಗಿದೆ. ಇದರಿಂದ ಬಿಗ್ ಬಾಸ್ ಸ್ಪರ್ಧಿಗಳಿಗೆ ಕೂಡ, ಬೇಸರವಾಗಿದೆ ಎಂದು ಹೇಳಿದರೆ ತಪ್ಪಲ್ಲ.

Leave a Comment