ಬಿಗ್ ಬಾಸ್ 9 ಗೆದ್ದು ಬೀಗಿದ ರೂಪೇಶ್ ಶೆಟ್ಟಿ: ಸಂಭ್ರಮದಲ್ಲಿ ರೂಪೇಶ್ ಶೆಟ್ಟಿ ಅಭಿಮಾನಿಗಳು
ಬಿಗ್ ಬಾಸ್ ಕನ್ನಡ(Big Boss Kannada) ಸೀಸನ್ ಒಂಬತ್ತರ ವಿನ್ನರ್ ಆಗೋದು ಯಾರು? ಟ್ರೋಫಿ ಹಿಡಿಯೋದು ಯಾರು? ನಿನ್ನೆಯಿಂದಲೂ ಬಿಗ್ ಬಾಸ್ ಶೋ ನೋಡುವ ಪ್ರೇಕ್ಷಕರನ್ನು ಕಾಡುತ್ತಿರುವ ಪ್ರಶ್ನೆಗಳಾಗಿದೆ. ಈ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಬಿಗ್ ಬಾಸ್ ವಿನ್ನರ್ ಯಾರೆನ್ನುವ ಕುರಿತಾಗಿ ಪ್ರಮುಖ ಮಾದ್ಯಮವೊಂದು ಈಗಾಗಲೇ ಸುದ್ದಿ ಪ್ರಕಟ ಮಾಡಿದ್ದು, ಈ ಸುದ್ದಿ ವೈರಲ್ ಆಗುತ್ತಿದೆ. ಹೌದು, ವರದಿಯ ಅನ್ವಯ ಬಿಗ್ ಬಾಸ್ ಫಿನಾಲೆಯ ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ. ವಿನ್ನರ್ ಘೋಷಣೆ ಸಹಾ ಆಗಿದೆ ಎನ್ನುವ ಮಾಹಿತಿಯು ಹೊರ ಬಂದಾಗಿದೆ.
ಟಾಪ್ ಫೈವ್ ಸ್ಪರ್ಧಿಗಳಲ್ಲಿ ನಿನ್ನೆ ದಿವ್ಯ ಉರುಡುಗ (Divya Uruduga) ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಆಗಿದ್ದರು. ಅವರ ನಂತರ ಹೊಸ ಮಾಹಿತಿಗಳ ಗಳ ಪ್ರಕಾರ ರೂಪೇಶ್ ರಾಜಣ್ಣ(Roopesh Rajanna) ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಅವರ ಎಲಿಮಿನೇಷನ್ ನಂತರ ಮನೆಯಲ್ಲಿ ಉಳಿದ ದೀಪಿಕಾ ದಾಸ್(Deepika Das), ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಟಾಪ್ ತ್ರಿ ಸ್ಪರ್ಧಿಗಳಾಗಿ ಹೊರ ಹೊಮ್ಮಿದ್ದರು. ಇವರಲ್ಲಿ ಟ್ರೋಫಿ ಗೆಲ್ಲುವವರು ಯಾರು? ಎನ್ನುವುದು ಈಗ ಹೊರ ಬಂದಿದೆ.
ಹೌದು, ದೀಪಿಕಾ ದಾಸ್ ಅವರು ಟಾಪ್ ತ್ರಿ ಸ್ಪರ್ಧಿಯಾಗಿ ಮನೆಯಿಂದ ಹೊರ ಬಂದಿದ್ದು, ದೀಪಿಕಾ ದಾಸ್ ಅವರಿಗೆ ಸೀಸನ್ ಒಂಬತ್ತರಲ್ಲಿ ಸಹಾ ಟ್ರೋಫಿ ಗೆಲ್ಲುವ ಅದೃಷ್ಟ ಒಲಿದು ಬಂದಿಲ್ಲ. ದೀಪಿಕಾ ದಾಸ್ ಅವರ ಎಲಿಮಿನೇಷನ್ ನಂತರ ಮನೆಯಲ್ಲಿ ಟಾಪ್ ಟು ಸ್ಪರ್ಧಿಗಳಾಗಿ ಹೊರ ಹೊಮ್ಮಿದ್ದು ರೂಪೇಶ್ ಶೆಟ್ಟಿ(Roopesh Shetty) ಮತ್ತು ರಾಕೇಶ್ ಅಡಿಗ (Rakesh Adiga). ಇವರಲ್ಲಿ ಈಗ ರಾಕೇಶ್ ಅಡಿಗ(Rakesh Adiga) ಬಿಗ್ ಬಾಸ್ ಸೀಸನ್ ಒಂಬತ್ತರ ರನ್ನರ್ ಅಪ್ ಆದರೆ, ಬಿಗ್ ಬಾಸ್ ಸೀಸನ್ ಒಂಬತ್ತರ ಟ್ರೋಫಿ ಹಿಡಿದು ರೂಪೇಶ್ ಶೆಟ್ಟಿ (Roopesh Shetty) ಈ ಸೀಸನ್ ನ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.