BKK OTT: ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್2 ಶೀಘ್ರದಲ್ಲೇ ಶುರು? ಹೊಸ ಅಪ್ಡೇಟ್ ಇಲ್ಲಿದೆ

0 11

BBK OTT: ಬಿಗ್ ಬಾಸ್ ಶೋ ಎಂದರೆ ಎಲ್ಲರಲ್ಲೂ ವಿಶೇಷ ಆಸಕ್ತಿ. ಕನ್ನಡದಲ್ಲಿ ಈಗಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 10 ಮುಗಿದಿದೆ. ಬಿಬಿಕೆ10 ಮುಗಿದು 1 ವಾರ ಆಗುತ್ತಿದ್ದ ಹಾಗೆ ಹೊಸ ಚರ್ಚೆ ಶುರುವಾಗಿದ್ದು, ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 2 ಶುರುವಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹಾಗಿದ್ದರೆ ಓಟಿಟಿ ಸೀಸನ್ ಯಾವೆಲ್ಲಾ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಹೋಗ್ತಾರೆ ಎನ್ನುವ ಚರ್ಚೆ ಕೂಡ ಶುರುವಾಗಿದೆ..

ಕಳೆದ ವರ್ಷ ಓಟಿಟಿ ಸೀಸನ್ ಮೊದಲು ನಡೆದಿತ್ತು, ರೂಪೇಶ್ ಶೆಟ್ಟಿ, ಸಾನ್ಯ ಅಯ್ಯರ್, ಆರ್ಯವರ್ಧನ್ ಗುರುಜಿ, ಚೈತ್ರ ಹಳ್ಳಿಕೇರಿ, ರಾಕೇಶ್ ಅಡಿಗ, ಸೋನು ಶ್ರೀನಿವಾಸ್ ಗೌಡ ಇವರೆಲ್ಲರೂ ಓಟಿಟಿ ಸೀಸನ್ ನಲ್ಲಿದ್ದರು. ಇವರ ಪೈಕಿ 5 ಸ್ಪರ್ಧಿಗಳು ಟಿವಿ ಸೀಸನ್ ಗೆ ಆಯ್ಕೆಯಾಗಿ, ಅವರಲ್ಲಿ ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ ಆಗಿದ್ದರು.

ಆದರೆ ಈ ಬಾರಿ ಮೊದಲು ಟಿವಿ ಸೀಸನ್ ಶುರುವಾಗಿ, ಮುಕ್ತಾಯವಾಗಿದೆ. ಈಗ ಓಟಿಟಿ ಸೀಸನ್ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ಈ ಬಗ್ಗೆ ಜಿಯೋ ಸಿನಿಮಾ ಇಂದ, ಕಲರ್ಸ್ ಕನ್ನಡ ವಾಹಿನಿ ಇಂದ ಅಥವಾ ಕಿಚ್ಚ ಸುದೀಪ್ ಅವರಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸಧ್ಯಕ್ಕೆ ಎಲ್ಲವು ಮಾತುಕತೆಯ ಹಂತದಲ್ಲಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

ಸಧ್ಯಕ್ಕೆ ಕಿಚ್ಚ ಸುದೀಪ್ ಅವರು ತಮ್ಮ ಮುಂದಿನ ಸಿನಿಮಾ, ಮ್ಯಾಕ್ಸ್ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಓಟಿಟಿ ಸೀಸನ್ ಶುರುವಾಗಬೇಕು ಎಂದರೆ ಪ್ರತಿ ವೀಕೆಂಡ್ ನಲ್ಲಿ ಸುದೀಪ್ ಅವರ ಡೇಟ್ಸ್ ಸಿಗಬೇಕು. ಹಾಗಾಗಿ ಓಟಿಟಿ ಸೀಸನ್ ಬಗ್ಗೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ. ಆದರೆ ವೀಕ್ಷಕರಂತೂ ಇಂಥ ಮನರಂಜನೆ ಕೊಡುಗ ಶೋ ಮತ್ತೆ ಶುರುವಾದರೆ ಸಾಕು ಎಂದು ಕಾಯುತ್ತಿದ್ದಾರೆ.

Leave A Reply

Your email address will not be published.