ಈ 3 ರಾಶಿಯವರು ಕಾಲಿಗೆ ಕಪ್ಪು ದಾರ ಕಟ್ಟಿದರೆ ಕಷ್ಟಗಳ ಮೇಲೆ ಕಷ್ಟ ತಪ್ಪಿದ್ದಲ್ಲ!

0
441

Black Thread tips:ಈ 3 ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕೈಗೆ, ಕಾಲಿಗೆ ಕಟ್ಟಿಕೊಳ್ಳಬಾರದು. ಈಗಿನ ಕಾಲದಲ್ಲಿ ಯುವಕ ಮತ್ತು ಯುವತಿಯರು ತಮ್ಮ ಕಾಲು ಮತ್ತು ಕೈಗಳಿಗೆ ಕಪ್ಪು ದಾರವನ್ನು ಧರಿಸುತ್ತಾರೆ. ಇನ್ನು ಕೆಲವರು ಕಪ್ಪು ದಾರವನ್ನು ಅನಿವಾರ್ಯ ಕಾರಣದಿಂದ ಕಟ್ಟಿಕೊಂಡರೆ ಇನ್ನು ಕೆಲವರು ಈ ಕಪ್ಪು ದಾರವನ್ನು ಹುಡುಗಾಟಿಕೆಗಾಗಿ ಕಟ್ಟಿಕೊಳ್ಳುತ್ತಾರೆ. ಇವರು ತಮ್ಮ ರಾಶಿಗೆ ಅನುಗುಣವಾಗಿ ಕಪ್ಪು ದಾರವನ್ನು ಕೈಗೆ ಅಥವಾ ಕಾಲಿಗೆ ಕಟ್ಟಿಕೊಳ್ಳುತ್ತಾರೆ.

ವಾರದಲ್ಲಿ ಒಂದೆರಡು ಸಲ ಹಾಗಲಕಾಯಿಯನ್ನು ತಿಂದರೆ ಏನಾಗುತ್ತೆ ಗೊತ್ತಾ?

ಇನ್ನು ಕೆಲವು ರಾಶಿಯವರಿಗೆ ಈ ದಾರವನ್ನು ಕಟ್ಟಿಕೊಂಡರೆ ಒಳ್ಳೆಯದಾಗುವುದಿಲ್ಲ. ಈ ಕೆಲವು ರಾಶಿಯವರು ಕಪ್ಪು ದಾರವನ್ನು ಕಟ್ಟಿಕೊಂಡರೆ ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಮತ್ತು ಅವರ ಜೀವನದಲ್ಲಿ ಬೆಳಕು ಬರುವುದಿಲ್ಲ.ಆ ಮೂರು ರಾಶಿಗಳು ಯಾವುದು ಎಂದರೆ,

ಮೇಷ ರಾಶಿ: ಈ ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು. ಈ ರಾಶಿಯವರ ಅಧಿಪತಿ ಆಂಜನೇಯ ಸ್ವಾಮಿ. ಇನ್ನು ಆಂಜನೇಯಸ್ವಾಮಿಗೆ ಕೆಂಪು ಬಣ್ಣದ ದಾರ ತುಂಬಾ ಇಷ್ಟ.ಅದರಿಂದ ನೀವು ಕಪ್ಪು ಬಣ್ಣದ ದಾರದ ಬದಲು ಕೆಂಪು ಬಣ್ಣದ ದಾರವನ್ನು ಕಟ್ಟಿಕೊಂಡರೆ ಆಂಜನೇಯ ಸ್ವಾಮಿಯ ಆಶೀರ್ವಾದ ನಿಮಗೆ ದೊರೆಯಲಿದೆ. ಇನ್ನು ಮಹಿಳೆಯರು ಕಪ್ಪು ದಾರವನ್ನು ಕಾಲಿಗೆ ಕಟ್ಟಿಕೊಳ್ಳುತ್ತಾರೆ. ಆದರೆ ಈ ರಾಶಿಯ ಮಹಿಳೆಯರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ನಿಮ್ಮ ಕಾಲಿಗೆ ಕಟ್ಟಿ ಕೊಳ್ಳಬೇಡಿ. ಯಾಕೆಂದರೆ ಅದು ನಿಮಗೆ ಅಶುಭ.

ವೃಶ್ಚಿಕ ರಾಶಿ : ಈ ರಾಶಿಯವರ ಮೇಲೆ ಆಂಜನೇಯ ಸ್ವಾಮಿಯ ಅಧಿಪತ್ಯ ಇದೆ. ಹಾಗಾಗಿ ಈ ರಾಶಿಯವರು ಕೂಡ ಕೆಂಪು ದಾರವನ್ನು ಕಟ್ಟಿಕೊಂಡರೆ ತುಂಬಾ ಒಳ್ಳೆಯದು. ಇನ್ನು ಕಪ್ಪು ದಾರವನ್ನು ಈ ರಾಶಿಯವರು ಕಟ್ಟಿಕೊಂಡರೆ ಮಾಡುವ ಕೆಲಸದಲ್ಲಿ ನೀವು ಅಂದುಕೊಂಡಂತಹ ಲಾಭ ನಿಮ್ಮದಾಗುವುದಿಲ್ಲ.ಸಮಾಜದಲ್ಲಿ ಯಾವುದೇ ರೀತಿಯ ಗೌರವ ಸಿಗುವುದಿಲ್ಲ ಹಾಗೂ ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ.

ವಾರದಲ್ಲಿ ಒಂದೆರಡು ಸಲ ಹಾಗಲಕಾಯಿಯನ್ನು ತಿಂದರೆ ಏನಾಗುತ್ತೆ ಗೊತ್ತಾ?

ಕಟಕ ರಾಶಿ : ಈ ರಾಶಿಯವರು ಕೂಡ ಜೀವನದಲ್ಲಿ ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕೈಗೆ ಅಥವಾ ಕಾಲಿಗೆ ಕಟ್ಟಿಕೊಳ್ಳಬಾರದು. ಇನ್ನು ಈ ರಾಶಿಯವರು ಕಪ್ಪು ದಾರವನ್ನು ಕಟ್ಟಿಕೊಂಡರೆ ಕೆಟ್ಟಶಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರಲಿದೆ. ತುಂಬಾ ಕಷ್ಟಗಳು ಎದುರಾಗುತ್ತವೆ.ಹಾಗಾಗಿ ಕಪ್ಪು ದಾರವನ್ನು ಕಟ್ಟಿಕೊಳ್ಳಬೇಡಿ. ಕಪ್ಪು ದಾರವನ್ನು ಕಟ್ಟಿಕೊಂಡರೆ ಜೀವನದಲ್ಲಿ ಅನೇಕ ರೀತಿಯ ಸಮಸ್ಸೆಯನ್ನು ಎದುರಿಸಬೇಕಾಗುತ್ತದೆ. ಕೆಂಪು ದಾರವನ್ನು ಕಟ್ಟಿಕೊಂಡರೆ ಶುಭವಾಗಲಿದೆ.

Black Thread tips

LEAVE A REPLY

Please enter your comment!
Please enter your name here