Bollywood Actress: ರಶ್ಮಿಕಾ ನಂತರ ಮತ್ತೊಬ್ಬ ನಟಿಯ ಡೀಪ್ ಫೇಕ್ ವಿಡಿಯೋ ವೈರಲ್!

Written by Pooja Siddaraj

Published on:

Bollywood Actress: ಭಾರತದಲ್ಲಿ ಈಗ ಡೀಪ್ ಫೇಕ್ ವಿಡಿಯೋಗಳು ಹೆಚ್ಚಿಗೆ ಸದ್ದು ಮಾಡುತ್ತಿದೆ. ಇದು ಒಂದು ರೀತಿ ತೊಂದರೆಯನ್ನೇ ಉಂಟು ಮಾಡುತ್ತದೆ ಎಂದರೆ ತಪ್ಪಲ್ಲ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಬೇರೆ ನಟಿಯೊಬ್ಬರ ವಿಡಿಯೋಗೆ ರಶ್ಮಿಕಾ ಅವರ ಮುಖವನ್ನು ಮಾರ್ಫ್ ಮಾಡಲಾಗಿತ್ತು. ಆ ವಿಡಿಯೋ ಭಾರಿ ಸಂಚಲನವನ್ನು ಸೃಷ್ಟಿಸಿತ್ತು.

ರಶ್ಮಿಕಾ ಅವರ ವಿಡಿಯೋ ಎಲ್ಲರಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಿಂದ ತೊಂದರೆಗಳೇ ಹೆಚ್ಚು ಎಂದು ಎಂದು ದೊಡ್ಡ ಕಲಾವಿದರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇವರ ನಂತರ ನಟಿ ಕತ್ರಿನಾ ಕೈಫ್ ಅವರ ವಿಡಿಯೋ ಡೀಪ್ ಫೇಕ್ ವಿಡಿಯೋ ಸಹ ವೈರಲ್ ಆಗಿತ್ತು. ಈ ಇಬ್ಬರು ನಟಿಯರ ಬಳಿಕ ಬಾಲಿವುಡ್ ನ ಮತ್ತೊಬ್ಬ ನಟಿ ಕಾಜೋಲ್ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದೆ.

ನಟಿ ಕಾಜೋಲ್ ಅವರು ಕ್ಯಾಮೆರಾ ಎದುರಲ್ಲೇ ಬಟ್ಟೆ ಬದಲಾಯಿಸುವ ವಿಡಿಯೋ ವೈರಲ್ ಆಗಿದ್ದು, ಎಲ್ಲರಿಗೂ ಒಂದು ರೀತಿ ಶಾಕ್ ನೀಡಿದೆ ಎಂದರೆ ಸುಳ್ಳಲ್ಲ. ಈ ವಿಡಿಯೋ ನಿಜಕ್ಕೂ ನಟಿ ಕಾಜೋಲ್ ಅವರದ್ದಲ್ಲ, ಬದಲಾಗಿ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ರೋಸಿ ಬ್ರೀನ್ ಅವರ ವಿಡಿಯೋ ಇದಾಗಿದ್ದು, ಜೂನ್ ನಲ್ಲಿ ಟಿಕ್ ಟಾಕ್ ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ಆಗಿದೆ.

ಗೆಟ್ ರೆಡಿ ವಿತ್ ಮಿ ಚಾಲೆಂಜ್ ನ ವಿಡಿಯೋ ಇದಾಗಿದ್ದು, ಇದರಲ್ಲಿ ರೋಸಿ ಅವರ ಬಾಡಿಗೆ ನಟಿ ಕಾಜೋಲ್ ಅವರ ಮುಖವನ್ನು ಎಡಿಟ್ ಮಾಡಲಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಇದು ಡೀಪ್ ಫೇಕ್ ವಿಡಿಯೋ ಎಂದು ಕಂಡು ಹಿಡಿಯುವುದು ಕೂಡ ಕಷ್ಟವೇ, ಇಂಥ ವಿಡಿಯೋ ವೈರಲ್ ಆದ ನಂತರ ಯಾವ ಕಲಾವಿದರಿಗೂ ಕೂಡ ಇಲ್ಲಿ ಸೇಫ್ಟಿ ಇಲ್ಲ ಎಂದು ಅನ್ನಿಸುವುದಕ್ಕೆ ಶುರುವಾಗಿದೆ.

ಇನ್ನು ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಕೂಡ ಡೀಪ್ ಫೇಕ್ ವಿಡಿಯೋ ಬಗ್ಗೆ ಪ್ರತಿಕ್ರಿಯೇ ನೀಡಿದ್ದು, ಡೀಪ್ ಫೇಕ್ ವಿಡಿಯೋಗಳು ಡೇಂಜರಸ್ ಆಗುತ್ತಿದೆ, ನಾನು ಗರ್ಬಾ ಮಾಡುತ್ತಿರುವ ವಿಡಿಯೋವನ್ನು ನಾನು ನೋಡಿದ್ದೆ, ಫೇಕ್ ವಿಡಿಯೋ ಎಂದು ಗೊತ್ತಾಗುವುದು ಇಲ್ಲ. ಭಾರತದಲ್ಲಿ ಇದು ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ ಮೋದಿ ಅವರು.

Leave a Comment