Bollywood Actress: ಚಿತ್ರರಂಗದ ಕಲಾವಿದರು ಎಂದಮೇಲೆ ಅವರ ಬಗ್ಗೆ ಹಲವು ವಿಚಾರಗಳು ಚರ್ಚೆ ಆಗುತ್ತಲೇ ಇರುತ್ತದೆ. ಅವರ ಕೆರಿಯರ್ ಮಾತ್ರವಲ್ಲ ಅವರ ಲವ್ ಲೈಫ್, ಫ್ಯಾಮಿಲಿ ಲೈಫ್ ಇದೆಲ್ಲವೂ ಸುದ್ದಿಯಾಗುತ್ತದೆ. ಯಾವುದಾದರೂ ಒಂದು ವಿಚಾರ ದೊಡ್ಡದು ಎನ್ನಿಸಿದರೆ ತಕ್ಷಣವೇ ಅಂಥ ವಿಚಾರಗಳು ವೈರಲ್ ಆಗೋದು ಗ್ಯಾರಂಟಿ. ಇದೀಗ ಇಂಥದ್ದೇ ಕಾರಣಕ್ಕೆ ಬಾಲಿವುಡ್ ನಟಿ ಅದಿತಿ ರಾವ್ ಹೈದಾರಿ ಸುದ್ದಿಯಲ್ಲಿದ್ದಾರೆ.
ಅದಿತಿ ರಾವ್ ಹೈದಾರಿ ಅವರಿಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಆಗಿದೆ ಎನ್ನುವುದು ಹಲವರಿಗೆ ಗೊತ್ತಿರದ ವಿಷಯ. ಇಂದು ಅದಿತಿ ಅವರ ಹುಟ್ಟುಹಬ್ಬ, 1986ರ ಆಕ್ಟೊಬರ್ 28ರಂದು ಜನಿಸಿದರು ಅದಿತಿ. ಇವರು ಹುಟ್ಟಿದ್ದು ಹೈದರಾಬಾದ್ ನಲ್ಲಿ. ಅದಿತಿ ಅವರ ತಂದೆ ಮುಸ್ಲಿಂ ಹಾಗೂ ತಾಯಿ ಹಿಂದೂ. ಇವರ ತಂದೆ ಕಡೆ ಮೊಹಮ್ಮದ್ ಸಲೇಹ್, ಅಕ್ಬರ್ ಹೈದಾರಿ ಕುಟುಂಬ, ತಾಯಿ ಕಡೆ ರಾಮೇಶ್ವರ್ ರಾವ್ ಕುಟುಂಬ ಆಗಿದೆ.
ಅದಿತಿ ರಾವ್ ಹೈದಾರಿ ಅವರ ತಾಯಿ ವಿದ್ಯಾ ರಾವ್ ಅವರು ಶಾಸ್ತ್ರೀಯ ಸಂಗೀತಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ಚಿಕ್ಕಪ್ಪ ಅಸ್ಸಾಂ ರಾಜ್ಯದ ರಾಜ್ಯಪಾಲರು ಆಗಿದ್ದರು. ಅದಿತಿ ಅವರದ್ದು ರಾಜಮನೆತನದ ಕುಟುಂಬ. ಇವರಿಗೂ ಚಿಕ್ಕ ವಯಸ್ಸಿನಲ್ಲೇ ನೃತ್ಯದ ಬಗ್ಗೆ ಆಸಕ್ತಿ ಇದ್ದು, 11ನೇ ವಯಸ್ಸಿನಿಂದಲು ಅದಿತಿ ಅವರು ನೃತ್ಯ ಕಲಿಯುತ್ತಿದ್ದಾರೆ. ಇಂದು ಬಾಲಿವುಡ್ ನ ಹೆಸರಾಂತ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಅದಿತಿ ರಾವ್ ಹೈದಾರಿ ಅವರು 17ನೇ ವಯಸ್ಸಿನಲ್ಲಿ ಲಾಯರ್ ಆಗಿದ್ದ ಸತ್ಯದೀಪ್ ಮಿಶ್ರಾ ಅವರನ್ನು ಪ್ರೀತಿಸುತ್ತಿದ್ದರು. 21ನೇ ವಯಸ್ಸಿನಲ್ಲಿ ಸತ್ಯದೀಪ್ ಅವರೊಡನೆ ಮದುವೆ ಕೂಡ ಆಯಿತು, ಆದರೆ ಈ ದಾಂಪತ್ಯ ಜೀವನ ಹೆಚ್ಚು ಸಮಯ ಉಳಿಯಲಿಲ್ಲ. ಮದುವೆಯಾದ 4 ವರ್ಷಕ್ಕೆ, ಅದಿತಿ ಅವರಿಗೆ 25 ವರ್ಷವಿದ್ದಾಗ, ಸತ್ಯದೀಪ್ ಅವರಿಗೆ ವಿಚ್ಛೇದನ ನೀಡಿದರು. ಬಳಿಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು..

ಪ್ರಸ್ತುತ ತಮಿಳು, ತೆಲುಗು ಮತ್ತು ಹಿಂದಿ ಮೂರು ಭಾಷೆಯ ಸಿನಿಮಾಗಳಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ನಟಿಸುತ್ತಿರುವ ಅದಿತಿ ಅವರು ಮದುವೆ ಮತ್ತು ವಿಚ್ಛೇದನದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ ಇವರು ದಕ್ಷಿಣ ಭಾರತದ ಖ್ಯಾತ ನಟ ಸಿದ್ಧಾರ್ಥ್ ಅವರೊಡನೆ ಲಿವಿನ್ ರಿಲೇಶನ್ಶಿಪ್ ನಲ್ಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇವರಿಬ್ಬರು ತಮ್ಮ ರಿಲೇಶನ್ಶಿಪ್ ಅನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ..