ಆಪಲ್ ಹಣ್ಣಿಗಿಂತ ಹೆಚ್ಚು ಪೋಷಕಾಂಶ ಈ ಹಣ್ಣಿನಲ್ಲಿ ಮತ್ತು ಹಣ್ಣಿನ ಎಲೆಯಲ್ಲಿದೆ ಈ ಸೀಸನ್ ನಲ್ಲಿ ಮಾತ್ರ ಸಿಗುವ ಸಂಜೀವಿನಿ!

Health & Fitness

ಇದು ಎಲಚಿ ಹಣ್ಣು ಅಥವಾ ಬೋರೆ ಹಣ್ಣು ಅಥವಾ ಬಾರೆ ಹಣ್ಣು ಎಂದು ಕರೆಯುತ್ತಾರೆ.
ರಾಮಾಯಣದಲ್ಲಿ ಶಬರಿಯು ರಾಮನಿಗೆ ಕೊಟ್ಟದ್ದು ಈ ಹಣ್ಣನ್ನು.ಈ ಬಾರೆ ಹಣ್ಣಿನ ಬೇರು , ಎಲೆ , ಕಾಂಡದ ತೊಗಟೆ , ಹಣ್ಣು , ಬೀಜ , ಬೀಜದ ತಿರುಳು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ.

ನಮ್ಮ ಭೂಮಿಯಲ್ಲಿ ಎಷ್ಟೋ ಗಿಡ ಮರಗಳಿವೆ ,ಅವುಗಳ ಹೂ ಮತ್ತು ಹಣ್ಣಿಗಿಂತ ಅವುಗಳ ಎಲೆಗಳಲ್ಲಿ ಹೆಚ್ಚು ಔಷಧಿ ಗುಣಗಳಿವೆ,ಇನ್ನು ಬಾರೆಹಣ್ಣಿನ ಜೊತೆಗೆ ಅದರ ಎಲೆಗಳಲ್ಲೂ ಸಹ ಅಷ್ಟೇ ಔಷಧಿ ಗುಣಗಳಿವೆ.ಬಾರೆ ಹಣ್ಣಿನ ಗಿಡ ಸಾಮಾನ್ಯವಾಗಿ ಎಲ್ಲೆಂದರಲ್ಲಿ ಬೆಳೆದಿರುತ್ತದೆ.

ಬೋರೆ ಹಣ್ಣಿನ ಪ್ರಯೋಜನಗಳು

  • ರಕ್ತಸಂಚಾರ ಹೆಚ್ಚಳಕ್ಕೆ ಸಹಕಾರಿ

ಪೊಟ್ಯಾಶಿಯಂ , ಫಾಸ್ಪರಸ್ ಮ್ಯಾಂಗನೀಸ್ , ಕಬ್ಬಿಣ ಮತ್ತು ಝಿಂಕ್ ನಂತಹ ಖನಿಜ ಪದಾರ್ಥ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ.ಈ ಸಂಯೋಜನೆಯು ಹೃದಯದ ಆರೋಗ್ಯ ಹೆಚ್ಚಳಕ್ಕೆ ಅನುವು ಮಾಡಿಕೊಡುತ್ತದೆ.ಇದರಲ್ಲಿನ ಕಬ್ಬಿಣಾಂಶವು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ತನ್ಮೂಲಕ ರಕ್ತಹೀನತೆ ಸಮಸ್ಯೆಯಿಂದ ಕಾಪಾಡುತ್ತದೆ.ಇವೆಲ್ಲವೂ ಸಹ ದೇಹದಲ್ಲಿ ರಕ್ತ ಸಂಚಾರಕ್ಕೆ ಸಹಕರಿಸುತ್ತದೆ.

  • ಚರ್ಮದ ಆರೋಗ್ಯ ಉತ್ತಮ

ವಿಟಮಿನ್ ಸಿ ಮತ್ತು ಅನೇಕ ಆ್ಯಂಟಿ ಆಕ್ಸಿಡೆಂಟ್ ಗಳನ್ನು ಬೋರೆಹಣ್ಣು ಹೊಂದಿದ್ದು , ಆ್ಯಂಟಿ ಏಜಿಂಗ್ ಪರಿಣಾಮವನ್ನು ಇದರ ಸೇವನೆ ಒದಗಿಸುತ್ತದೆ.

  • ಮೂಳೆಗಳ ಆರೋಗ್ಯ ಕ್ಕೆ ಉತ್ತಮ

ಕ್ಯಾಲ್ಸಿಯಂ , ಫಾಸ್ಪರಸ್ ಅನ್ನು ಬೋರೆಹಣ್ಣು ಹೊಂದಿದ್ದು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

  • ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಕಾರಿ

ನಾರಿನಾಂಶವನ್ನು ಇದು ಹೊಂದಿದೆ,ಇದು ಮೆಟಬಾಲಿಸಂ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ.ಮಲಬದ್ಧತೆಯಂತಹ ಸಮಸ್ಯೆಯನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ.

  • ನಿದ್ರಾಹೀನತೆ ಸಮಸ್ಯೆ ನಿವಾರಣೆಗೆ ಸಹಕಾರಿ

ಈ ಹಣ್ಣು ಆ್ಯಂಟಿ ಆಕ್ಸಿಡೆಂಟ್ , ಫೈಟೊಕೆಮಿಕಲ್ ಗಳನ್ನು , ಪಾಲಿಸ್ಯಾಕರೈಡ್ ಗಳನ್ನು ಸೆಪೊನಿನ್ ಗಳನ್ನು ಹೊಂದಿದ್ದು ನಿದ್ರಾಹೀನತೆಯನ್ನು ಕಡಿಮೆ ಮಾಡಿ ಒಳ್ಳೆಯ ನಿದ್ರೆಗೆ ಸಹಕರಿಸುತ್ತದೆ.ನೈಸರ್ಗಿಕ ವಾಗಿಯೇ ನಿದ್ರೆ ಅನುವು ಮಾಡಿಕೊಡುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಬಾರೆ ಹಣ್ಣಿನ 4 ರಿಂದ 5 ಎಲೆಗಳನ್ನು ತಿನ್ನುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು,ಅದು ಕೂಡ ಒಂದು ರೂಪಾಯಿ ಖರ್ಚಿಲ್ಲದೆ.

ಹೃದಯ ಆರೋಗ್ಯಕ್ಕೆ ಒಳ್ಳೆಯದು. ಹೃದಯಕ್ಕೆ ಈ ಎಲೆ ತುಂಬಾ ಉತ್ತಮವಾದದ್ದು ,ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಎನ್ನುವುದು ಸಾಮಾನ್ಯವಾಗಿದೆ.

ಹಾರ್ಟ್ ಅಟ್ಯಾಕ್ ಅನ್ನೋದು ಇದ್ದಕ್ಕಿದ್ದ ಹಾಗೆ ಬರುವುದಿಲ್ಲ ಇದಕ್ಕೆ ಮುಖ್ಯ ಕಾರಣ ನಾವು ಅನುಸರಿಸುವ ಆಹಾರ ಕ್ರಮ.

ಹೆಚ್ಚಿನ ಆಯಿಲಿ ಫುಡ್ ತಿಂದು ಕೊಲೆಸ್ಟ್ರಾಲ್ ಹೆಚ್ಚಿಸಿಕೊಂಡಿರುವುದು ಆದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ.ಕೇವಲ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ 4 ರಿಂದ 5 ಬಾರೆ ಎಲೆಗಳನ್ನು ತಿನ್ನಿ.ಇದು ನಿಮ್ಮ ಕೊಲೆಸ್ಟ್ರಾಲ್ ಲೆವೆಲ್ ಕಡಿಮೆಯಾಗುತ್ತದೆ ಹಾಗೂ ರಕ್ತ ಸಂಚಾರ ಸುಗಮವಾಗುತ್ತದೆ.ಹಾರ್ಟ್ ಅಟ್ಯಾಕ್ ಆಗುವುದನ್ನು ಇದು ತಪ್ಪಿಸುತ್ತದೆ.

ಬಾರೆ ಎಲೆಗಳನ್ನು ತಿನ್ನುವುದರಿಂದ ನಿಮ್ಮ ಜೀರ್ಣ ಕ್ರಿಯೆ ಸರಿಯಾಗಿ ನಡೆಯುತ್ತದೆ.ನಿಮ್ಮ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ದೂರವಾಗುತ್ತವೆ.ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾಗಿ ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ.

ಕೆಲವರಿಗೆ ಸರಿಯಾಗಿ ನಿದ್ದೆ ಬರುವುದಿಲ್ಲ ಹಾಗೂ ನಿದ್ದೆ ಸರಿಯಾಗಿ ಆಗದೇ ಡಿಪ್ರೆಷನ್ , ಸ್ಟ್ರೆಸ್ ಹೆಚ್ಚಾಗಿ ಯಾವುದೇ ಕೆಲಸದಲ್ಲಿ ಆಸಕ್ತಿ ಇಲ್ಲದೇ ಇರುವುದು , ಮೈಯಲ್ಲಿ ಶಕ್ತಿ ಕಡಿಮೆಯಾಗುವುದು
ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತ ಇರುತ್ತದೆ.

ನಿದ್ದೆಯ ಸಮಸ್ಯೆ ಇರುವವರು ಅಂತವರು ರಾತ್ರಿ ಮಲಗುವ ಮುಂಚೆ 2 ರಿಂದ 3 ಬಾರೆ ಎಲೆಗಳನ್ನು ತಿನ್ನುವುದರಿಂದ ರಾತ್ರಿ ಒಳ್ಳೆಯ ನಿದ್ದೆ ಬರುತ್ತದೆ.

ಬಾರೆ ಎಲೆಗಳನ್ನು ತಿನ್ನುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.
ಇದರಿಂದ ಶೀತ, ಕೆಮ್ಮು , ನೆಗಡಿ ಸಮಸ್ಯೆ ದೂರ ಆಗುತ್ತದೆ.

ಪದೇ ಪದೇ ಕೆಮ್ಮಿನಿಂದ ಬಳಲುತ್ತಿರುವವರಿಗೆ ಈ ಎಲೆ ತಿನ್ನುವುದರಿಂದ ಈ ಸಮಸ್ಯೆ ಬೇಗ ನಿವಾರಣೆಯಾಗುತ್ತದೆ.

ಧನ್ಯವಾದಗಳು.

Leave a Reply

Your email address will not be published.