BPL Ration Card: ಈ ಮಾನದಂಡಗಳನ್ನು ಪಾಲಿಸದವರ ರೇಷನ್ ಕಾರ್ಡ್ ಕ್ಯಾನ್ಸಲ್, ಸರ್ಕಾರಕ್ಕೆ ಮೋಸ ಮಾಡೋಕಾಗಲ್ಲ!

Written by Pooja Siddaraj

Published on:

BPL Ration Card: ರೇಷನ್ ಕಾರ್ಡ್ ಎನ್ನುವುದು ನಮ್ಮ ದೇಶದ ಜನರಿಗೆ ಬಹಳ ಮುಖ್ಯವಾದ ಗುರುತು ಎಂದರೆ ತಪ್ಪಲ್ಲ. ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದ ಸಾಕಷ್ಟು ಸೌಲಭ್ಯಗಳು ಸಿಗುತ್ತದೆ. ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಬಿಪಿಎಲ್ ಕಾರ್ಡ್ ಇಂದ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಸರ್ಕಾರ ಬಿಪಿಎಲ್ ಹೊಂದಿರುವವರಿಗೆ ಉಚಿತವಾಗಿ ರೇಶನ್ ಕೊಡುತ್ತದೆ, ಆರೋಗ್ಯ ಸೌಲಭ್ಯವಿದೆ, ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುತ್ತದೆ, ಸಬ್ಸಿಡಿ ಸಾಲ ಸಿಗುತ್ತದೆ, ಇನ್ನು ಹಲವು ಯೋಜನೆಗಳು, ಸೌಲಭ್ಯಗಳು ಬಿಪಿಎಲ್ ರೇಷನ್ ಕಾರ್ಡ್ ದಾರರಿಗೆ ಲಭ್ಯವಿದೆ. ಸರ್ಕಾರ ಕಷ್ಟದಲ್ಲಿರುವ ಜನರಿಗೆ ಈ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಹಲವು ಜನರು ಈ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ..

ಹೌದು, ಬದವರಿಗೆ ಎಂದು ಸರ್ಕಾರ ಕೊಡುತ್ತಿರುವ ಸೌಲಭ್ಯವನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಇದೀಗ ಸರ್ಕಾರವು ಅಂಥವರಿಗೆ ಕೆಲವು ಮಾನದಂಡಗಳನ್ನು ಜಾರಿಗೆ ತಂದಿದೆ. ಅದೆಲ್ಲವು ಸರಿ ಜೆದ್ದರೆ ಮಾತ್ರ ರೇಶನ್ ಕಾರ್ಡ್ ಬಳಸಬಹುದು, ಇಲ್ಲದೆ ಹೋದರೆ ನಿಮ್ಮ ರೇಶನ್ ಕಾರ್ಡ್ ಅನ್ನು ಸರ್ಕಾರ ವಾಪಸ್ ಪಡೆಯುತ್ತದೆ, ಇದು ಇತ್ತೀಚೆಗೆ ಸರ್ಕಾರ ಜಾರಿಗೆ ತಂದಿರುವ ಹೊಸ ನಿರ್ಧಾರ ಆಗಿದೆ.

4 ಮಾನದಂಡಗಳು ಯಾವುವು ಎಂದು ನೋಡುವುದಾದರೆ..
*ಬಿಪಿಎಲ್ ರೇಷನ್ ಕಾರ್ಡ್ ಇರುವವರ ಬಳಿ 400 ಚದರ ಮೀಟರ್ ಗಿಂತ ಹೆಚ್ಚು ವಿಸ್ತೀರ್ಣ ಇರುವ ಸ್ವಂತ ಮನೆ ಇರಬಾರದು. ಅಂಥವರಿಗೆ ಬಿಪಿಎಲ್ ಕಾರ್ಡ್ ಸಿಗುವ ಹಾಗಿಲ್ಲ.
*ಒಂದು ವೇಳೆ ಶಸ್ತ್ರಾಸ್ತ್ರಗಳನ್ನು ಹೊಂದಿರುವವರ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ, ಅದು ಕೂಡ ತಪ್ಪು.. ಅಂಥವರು ಕೂಡ ರೇಷನ್ ಕಾರ್ಡ್ ಹೊಂದಲು ಅರ್ಹತೆ ಪಡೆಯುವುದಿಲ್ಲ.

*ಸ್ವಂತ ಟ್ರ್ಯಾಕ್ಟರ್ ಮತ್ತು ಕಾರ್ ಹೊಂದಿರುವವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಲು ಅರ್ಹರಲ್ಲ.
*ಹಳ್ಳಿಗಳಲ್ಲಿ ವಾಸ ಮಾಡುವವರ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಜಾಸ್ತಿ ಇದ್ದರೆ, ಸಿಟಿಯಲ್ಲಿ ವಾಸ ಮಾಡುವ ಕುಟುಂಬದವರ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಜಾಸ್ತಿ ಇದ್ದರೆ, ಬಿಪಿಎಲ್ ಕಾರ್ಡ್ ಗೆ ಅರ್ಹತೆ ಹೊಂದುವುದಿಲ್ಲ.
ಈ ನಾಲ್ಕು ಮಾನದಂಡಗಳು ಸರಿ ಹೋಗಿಲ್ಲ ಎಂದರೆ, ಅಂಥವರ ರೇಷನ್ ಕಾರ್ಡ್ ಅನ್ನು ವಾಪಸ್ ಪಡೆದುಕೊಳ್ಳಲಾಗುತ್ತದೆ.

Leave a Comment