Brundavana: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿ ಧಾರವಾಹಿ ಮೂಲಕ ವಿಭಿನ್ನವಾದ ಕಥೆಗಳ ಜೊತೆಗೆ ಜನರಿಗೆ ತುಂಬಾ ಇಷ್ಟವಾಗುತ್ತದೆ. ಸ್ವಂತ ಕಥೆಗಳ ಧಾರವಾಹಿ ಮಾಡುತ್ತಾ, ಹೊಸತನ ಹೊಸಕಥೆಯ ಕಾರಣ ಕಲರ್ಸ್ ಕನ್ನಡ ವಾಹಿನಿ ಜನರಿಗೆ ತುಂಬಾ ಇಷ್ಟವಾಗುತ್ತದೆ. ಇತ್ತೀಚೆಗೆ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಶುರುವಾಗಿರುವ ಹೊಸ ಧಾರವಾಹಿ ಬೃಂದಾವನ.
ಈ ಧಾರವಾಹಿ ಒಂದು ತುಂಬು ಕುಟುಂಬದ ಕಥೆ ಆಗಿದೆ. 32 ಸದಸ್ಯರಿರುವ ಮನೆಯ ಕಥೆ. ಈ ಧಾರವಾಹಿಯಲ್ಲಿ ಹೀರೋ ಆಕಾಶ ಮತ್ತು ಹೀರೋಯಿನ್ ಪುಷ್ಪ ಮದುವೆ ಸಂಭ್ರಮ ಶುರುವಾಗಿದೆ. ಧಾರವಾಹಿ ಶುರುವಾಗಿ 25 ದಿನಗಳ ಸಮಯ ಆಗಿದೆ. ಈಗಾಗಲೇ ನಾಯಕ ಮತ್ತು ನಾಯಕಿಗೆ ಮದುವೆ ಫಿಕ್ಸ್ ಆಗಿದ್ದು, ಶಾಸ್ತ್ರಗಳ ಸಂಭ್ರಮ ಕೂಡ ಜೋರಾಗಿಯೇ ಇದೆ.
ಧಾರವಾಹಿ ಕುತೂಹಲಕಾರಿಯಾಗಿ ಸಾಗುತ್ತಿದೆ ಎನ್ನುವ ವೇಳೆಯಲ್ಲೇ ಬೃಂದಾವನ ಧಾರವಾಹಿ ಬಗ್ಗೆ ಆಶ್ಚರ್ಯ ಎನ್ನಿಸುವಂಥ ಸುದ್ದಿ ಹೊರಬಂದಿತ್ತು. ಅದೇನು ಎಂದರೆ, ಬೃಂದಾವನ ಧಾರವಾಹಿ ಶುರುವಾಗಿ ಸ್ವಲ್ಪ ದಿನದಲ್ಲೇ ಹೀರೋ ಬದಲಾಗುತ್ತಾರೆ ಎಂದು ಸುದ್ದಿಯೊಂದು ವೈರಲ್ ನಿನ್ನೆ ವೈರಲ್ ಆಯಿತು. ಹೌದು, ಮದುವೆ ಸಂಚಿಕೆಗಳು ಮುಗಿದ ಬಳಿಕ ಹೀರೋ ಆಕಾಶ್ ಪಾತ್ರಕ್ಕೆ ಹೊಸ ನಟ ಬರುತ್ತಾರೆ ಎಂದು ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡಿತು.
ಈ ಹಿಂದೆ ಧಾರವಾಹಿಯಲ್ಲಿ ಹೀರೋ ಆಗಿ ನಟಿಸುತ್ತಿದ್ದದ್ದು ಗಾಯಕ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ವಿಶ್ವನಾಥ್ ಹಾವೇರಿ. ಫಾರಿನ್ ನಲ್ಲಿ ಓದುತ್ತಿರುವ ಮನೆಯ ಮೊಮ್ಮಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ ವಿಶ್ವನಾಥ್. ಆದರೆ ಇವರು ಪಾತ್ರಕ್ಕೆ ಸರಿಹೊಂದುತ್ತಿಲ್ಲ, ತುಂಬಾ ಚಿಕ್ಕ ಹುಡುಗನ ಹಾಗೆ ಕಾಣುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಹಾಗಾಗಿ ಹೀರೋ ಚೇಂಜ್ ಆಗುತ್ತಾರೆ ಎಂದು ಕೂಡ ನಿನ್ನೆಯಷ್ಟೇ ಸುದ್ದಿ ಕೇಳಿಬಂದಿತು. ಆದರೆ ನಿನ್ನೆ ಸಂಜೆ ವೇಳೆಗೆ ಕಲರ್ಸ್ ಕನ್ನಡ ಹೊಸ ಪ್ರೋಮೋ ಬಿಡುಗಡೆ ಮಾಡಿದೆ.
ಹೀರೋ ಪಾತ್ರದ ಕಲಾವಿದ ನಿಜಕ್ಕೂ ಬದಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ವರುಣ್ ಆರಾಧ್ಯ ಇದೀಗ ಬೃಂದಾವನ ಧಾರವಾಹಿಗೆ ಹೊಸ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಮದುವೆಯ ದಿನದ ಶಾಸ್ತ್ರಗಳ ಪ್ರೋಮೋದಲ್ಲಿ ವರುಣ್ ಆರಾಧ್ಯ ಆಕಾಶ್ ಆಗಿ ಕಾಣಿಸಿಕೊಂಡಿದ್ದು, ಪ್ರೋಮೋ ನೋಡಿದ ನೆಟ್ಟಿಗರು ಇನ್ಯಾರು ಸಿಗಲಿಲ್ವಾ, ಮೋಸ ಮಾಡೋ ಇಂಥವರನ್ನ ಹೀರೋ ಮಾಡಿದ್ದೀರಾ ಎಂದು ಕಲರ್ಸ್ ಕನ್ನಡ ವಾಹಿನಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ..
ಇತ್ತೀಚಿಗೆ ವರುಣ್ ಆರಾಧ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು, ಪ್ರೀತಿ ಮಾಡುತ್ತಿದ್ದ ವರ್ಷ ಕಾವೇರಿ ಅವರೊಡನೆ ಬ್ರೇಕಪ್ ಮಾಡಿಕೊಂಡ ಕಾರಣಕ್ಕೆ ಇವರ ಮೇಲೆ ಜನರಿಗೆ ಅಸಮಾಧಾನ ಜೊತೆಗೆ ಹುಡುಗಿಗೆ ಮೋಸ ಮಾಡಿದ್ದಾನೆ ಎನ್ನುವ ಭಾವನೆ ಕೂಡ ಇತ್ತು. ಆದರೆ ನಟನೆಯಲ್ಲಿ ಅವಕಾಶ ಸಿಕ್ಕಿದ್ದು, ಕಲರ್ಸ್ ಕನ್ನಡ ವಾಹಿನಿಗೆ ಕ್ಯಾಸ್ಟಿಂಗ್ ಬರಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.