Brundavana: ಬೃಂದಾವನ ಧಾರವಾಹಿ ನಾಯಕಿ ಪುಷ್ಪ ನಿಜಕ್ಕೂ ಯಾರು? ಇವರು ಏನು ಓದಿದ್ದಾರೆ ಗೊತ್ತಾ?

Written by Pooja Siddaraj

Published on:

Brundavana: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿ ಧಾರವಾಹಿ ಮೂಲಕ ವಿಭಿನ್ನವಾದ ಕಥೆಗಳ ಜೊತೆಗೆ ಜನರಿಗೆ ತುಂಬಾ ಇಷ್ಟವಾಗುತ್ತದೆ. ಸ್ವಂತ ಕಥೆಗಳ ಧಾರವಾಹಿ ಮಾಡುತ್ತಾ, ಹೊಸತನ ಹೊಸಕಥೆಯ ಕಾರಣ ಕಲರ್ಸ್ ಕನ್ನಡ ವಾಹಿನಿ ಜನರಿಗೆ ತುಂಬಾ ಇಷ್ಟವಾಗುತ್ತದೆ. ಇತ್ತೀಚೆಗೆ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಶುರುವಾಗಿರುವ ಹೊಸ ಧಾರವಾಹಿ ಬೃಂದಾವನ.

ಈ ಧಾರವಾಹಿ ಒಂದು ತುಂಬು ಕುಟುಂಬದ ಕಥೆ ಆಗಿದೆ. 32 ಸದಸ್ಯರಿರುವ ಮನೆಯ ಕಥೆ. ಈ ಧಾರವಾಹಿಯಲ್ಲಿ ಹೀರೋ ಆಕಾಶ ಮತ್ತು ಹೀರೋಯಿನ್ ಪುಷ್ಪ ಮದುವೆ ಸಂಭ್ರಮ ಜೋರಾಗಿಯೇ ನಡೆದಿದೆ. ಹೀರೋ ಆಕಾಶ್ ನೋಡಿದ್ದ ಫೋಟೋ ಬೇರೆ ಹುಡುಗಿಯದ್ದು, ಆದರೆ ಮದುವೆ ಆಗಿರುವ ಪುಷ್ಪ ಬೇರೆ ಹುಡುಗಿಯೇ ಆಗಿದ್ದಾಳೆ. ಈ ವಿಚಾರವನ್ನು ಆಕಾಶ್ ಮನೆಯಲ್ಲಿ ಯಾರಿಗೂ ಹೇಳಿಲ್ಲ.

ಇತ್ತ ಆಕಾಶ್ ಫೋಟೋ ನೋಡಿಯೇ ಪ್ರೀತಿಸಲು ಶುರು ಮಾಡಿದ್ದ ಪುಷ್ಪ, ಸಂತೋಷದಿಂದ ಮದುವೆಯಾಗಿದ್ದಾಳೆ. ಕಥೆ ಈ ರೀತಿ ಸಾಗುತ್ತಿದೆ. ಈ ಧಾರವಾಹಿಯಲ್ಲಿ ಪುಷ್ಪ ಪಾತ್ರದಲ್ಲಿ ನಟಿಸುತ್ತಿರುವ ನಟಿ ನಿಜಕ್ಕೂ ಯಾರು? ಅವರ ಹೆಸರೇನು ಗೊತ್ತಾ? ಪುಷ್ಪ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಇಷ್ಟ ಆಗಿರುವ ಇವರ ಹೆಸರು ಅಮೂಲ್ಯ ಭಾರದ್ವಾಜ್. ಇವರಿಗೆ ಇದು ಎರಡನೇ ಧಾರವಾಹಿ.

ಮೊದಲಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲೇ ದಾಸಪುರಂಧರ ಧಾರವಾಹಿಯಲ್ಲಿ ಸರಸ್ವತಿ ಪಾತ್ರದಲ್ಲಿ ನಟಿಸಿದ್ದರು. ಈಗ ಬೃಂದಾವನ ಧಾರವಾಹಿಯ ಪುಷ್ಪ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಮೂಲ್ಯ ಮೂಲತಃ ಮೈಸೂರಿನ ಹುಡುಗಿ ಎನ್ನಲಾಗಿದೆ. ಬಿಕಾಂ ಓದಿದ್ದಾರೆ, ಆದರೆ ನಟನೆಯ ಮೇಲೆ ಆಸಕ್ತಿ ಇದ್ದ ಕಾರಣ ಇಂದು ನಟನೆಯಲ್ಲೇ ತೊಡಗಿಕೊಂಡಿದ್ದಾರೆ. ಅಮೂಲ್ಯ ಅವರು ಆಡಿಷನ್ ಗಾಗಿ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದರಂತೆ.

ಹಲವು ಸಾರಿ ಆಡಿಷನ್ ಗಳಲ್ಲಿ ರಿಜೆಕ್ಟ್ ಕೂಡ ಆಗಿದ್ದಾರೆ. ಮೊದಲಿಗೆ ಆಡಿಷನ್ ನಲ್ಲಿ ಸೆಲೆಕ್ಟ್ ಆಗಿ ಅವಕಾಶ ಸಿಕ್ಕಿದ್ದು ಕಲರ್ಸ್ ಕನ್ನಡದ ಶಾಂತಂ ಪಾಪಂ ಧಾರವಾಹಿಯಲ್ಲಿ, ಇದರಲ್ಲಿ ಮೂರು ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಇವರಿಗೆ ದಾಸ ಪುರಂಧರ ಧಾರವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈಗ ಬೃಂದಾವನ ಧಾರವಾಹಿಯಲ್ಲಿ ಪುಷ್ಪ ಆಗಿ ನಟಿಸುತ್ತಿದ್ದಾರೆ.

Leave a Comment