Brundavana: ಬೃಂದಾವನ ಧಾರಾವಾಹಿಯ ಘಾಟಿ ಅತ್ತಿಗೆ ಗಿರಿಜಾ ನಿಜಕ್ಕೂ ಯಾರು ಗೊತ್ತಾ?

Written by Pooja Siddaraj

Published on:

Brundavana: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿ ಧಾರವಾಹಿ ಮೂಲಕ ವಿಭಿನ್ನವಾದ ಕಥೆಗಳ ಜೊತೆಗೆ ಜನರಿಗೆ ತುಂಬಾ ಇಷ್ಟವಾಗುತ್ತದೆ. ಸ್ವಂತ ಕಥೆಗಳ ಧಾರವಾಹಿ ಮಾಡುತ್ತಾ, ಹೊಸತನ ಹೊಸಕಥೆಯ ಕಾರಣ ಕಲರ್ಸ್ ಕನ್ನಡ ವಾಹಿನಿ ಜನರಿಗೆ ತುಂಬಾ ಇಷ್ಟವಾಗುತ್ತದೆ. ಇತ್ತೀಚೆಗೆ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಶುರುವಾಗಿರುವ ಹೊಸ ಧಾರವಾಹಿ ಬೃಂದಾವನ.

ಈ ಧಾರವಾಹಿ ಒಂದು ತುಂಬು ಕುಟುಂಬದ ಕಥೆ ಆಗಿದೆ. 32 ಸದಸ್ಯರಿರುವ ಮನೆಯ ಕಥೆ. ಈ ಧಾರವಾಹಿಯಲ್ಲಿ ಹೀರೋ ಆಕಾಶ ಮತ್ತು ಹೀರೋಯಿನ್ ಪುಷ್ಪ ಮದುವೆ ಸಂಭ್ರಮ ಶುರುವಾಗಿದೆ. ಧಾರವಾಹಿ ಶುರುವಾಗಿ 25 ದಿನಗಳ ಸಮಯ ಆಗಿದೆ. ಈಗಾಗಲೇ ನಾಯಕ ಮತ್ತು ನಾಯಕಿಗೆ ಮದುವೆ ಫಿಕ್ಸ್ ಆಗಿದ್ದು, ಶಾಸ್ತ್ರಗಳ ಸಂಭ್ರಮ ಕೂಡ ಜೋರಾಗಿಯೇ ಇದೆ. ಆದರೆ ಧಾರವಾಹಿ ಶುರುವಾದ ಕೆಲವೇ ದಿನಗಳಲ್ಲಿ ಹೀರೋ ಚೇಂಜ್ ಆಗಿದ್ದಾರೆ.

ಹೀರೋ ಆಕಾಶ ಪಾತ್ರದಲ್ಲಿ ಬಿಗ್ ಬಾಸ್ ಮೂಲಕ ಫೇಮಸ್ ಆಗಿದ್ದ 21 ವರ್ಷದ ಗಾಯಕ ವಿಶ್ವನಾಥ್ ಹಾವೇರಿ ನಟಿಸುತ್ತಿದ್ದರು. ಆದರೆ ಈಗ ಇವರ ಪಾತ್ರಕ್ಕೆ ಸೋಷಿಯಲ್ ಮೀಡಿಯಾ ಇಂದ ಫೇಮಸ್ ಆಗಿರುವ ವರುಣ್ ಆರಾಧ್ಯ ಬಂದಿದ್ದಾರೆ. ಜನರಿಗೆ ಇದು ಇಷ್ಟವಾಗದೆ ಟ್ರೋಲ್ ಮಾಡಲಾಗುತ್ತಿದೆ. ಇದೆಲ್ಲದರ ಜೊತೆಗೆ ನಾಯಕಿ ಪುಷ್ಪಾ ಅತ್ತಿಗೆ ಗಿರಿಜಾ ಪಾತ್ರದ ಬಗ್ಗೆ ಕೂಡ ಚರ್ಚೆಯಾಗುತ್ತಿದೆ.

ಗಿರಿಜಾ ಪಾತ್ರ ಹಣಕ್ಕೆ ಆಸೆಪಡುವ ಪಾತ್ರ ಆಗಿದೆ, ಹಣಕ್ಕಾಗಿ ಏನನ್ನು ಬೇಕಾದರು ಮಾಡುವ ಪಾತ್ರ, ಹಣಕ್ಕಾಗಿ ನಾದಿನಿಯನ್ನು ಯಾರ ಜೊತೆಗೆ ಬೇಕಾದರೂ ಮದುವೆ ಮಾಡಲು ಸಿದ್ಧವಿರುತ್ತಾಳೆ ಪುಷ್ಪ. ಇಂಥ ಪಾತ್ರದಲ್ಲಿ ನಟಿಸುತ್ತಿರುವವರು ನಟಿ ಅನುಪಲ್ಲವಿ ಗೌಡ, ಧಾರವಾಹಿಯಲ್ಲಿ ಹಣಕ್ಕಾಗಿ ಯಾವ ಹಂತಕ್ಕೆ ಬೇಕಾದರು ಈ ಪಾತ್ರದಲ್ಲಿ ನಟಿಸುತ್ತಿರುವವರು, ನಿಜ ಜೀವನದಲ್ಲೂ ಹೀಗೇನಾ? ಇದಕ್ಕೆ ಅನುಪಲ್ಲವಿ ಅವರೇ ಉತ್ತರ ಕೊಟ್ಟಿದ್ದಾರೆ..

ಅನಿಪಲ್ಲವಿ ಅವರಿಗೆ ಇದು ಮೊದಲ ಧಾರವಾಹಿ ಅಲ್ಲ, ಪರ್ವ, ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ನಟಿಸಿದ್ದಾರೆ. ಜೊತೆಗೆ ಒಂದೆರಡು ಸಿನಿಮಾಗಳಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲ, ರಂಗಭೂಮಿಯಲ್ಲಿ ಕೆಲವು ವರ್ಷಗಳ ನಟನೆಯ ಅನುಭವ ಹೊಂದಿದ್ದಾರೆ. ಹಾಗೆಯೇ ಇವರು ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಕೂಡ ಹೌದು. ಒಂದು ರೀತಿ ಮಲ್ಟಿ ಟ್ಯಾಲೆಂಟೆಡ್ ಎಂದು ಹೇಳಬಹುದು.

ಅನುಪಲ್ಲವಿ ಅವರಿಗೆ ಈ ಧಾರವಾಹಿ ಹೆಚ್ಜು ಗುರುತಿಸುವಿಕೆಯನ್ನು ತಂದುಕೊಟ್ಟಿದೆ. ಬೃಂದಾವನ ಧಾರವಾಹಿ ನೋಡಿದ ವೀಕ್ಷಕರು ನೀವು ನಿಜ ಜೀವನದಲ್ಲೂ ಇಷ್ಟೇ ಘಾಟಿ ಆಗಿರ್ತಿರಾ ಎಂದು ಪ್ರಶ್ನೆ ಮಾಡಿದ್ದಾರಂತೆ. ಜನರು ಈ ರೀತಿ ಕೇಳಿದರೆ ತಮ್ಮ ಪಾತ್ರ ಅವರಿಗೆ ಚೆನ್ನಾಗಿ ರೀಚ್ ಆಗಿದೆ ಎನ್ನುವ ಭಾವನೆ ಅನುಪಲ್ಲವಿ ಅವರದ್ದು..

Leave a Comment