Brundavana: ಬೃಂದಾವನ ಧಾರವಾಹಿ ಸೀರಿಯಲ್ ಹೀರೋ ಚೇಂಜ್? ಶುರುವಾದ ಕೆಲವೇ ದಿನಗಳಲ್ಲಿ ಬಿಗ್ ಟ್ವಿಸ್ಟ್!

Written by Pooja Siddaraj

Published on:

Brundavana: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿ ಧಾರವಾಹಿ ಮೂಲಕ ವಿಭಿನ್ನವಾದ ಕಥೆಗಳ ಜೊತೆಗೆ ಜನರಿಗೆ ತುಂಬಾ ಇಷ್ಟವಾಗುತ್ತದೆ. ಸ್ವಂತ ಕಥೆಗಳ ಧಾರವಾಹಿ ಮಾಡುತ್ತಾ, ಹೊಸತನ ಹೊಸಕಥೆಯ ಕಾರಣ ಕಲರ್ಸ್ ಕನ್ನಡ ವಾಹಿನಿ ಜನರಿಗೆ ತುಂಬಾ ಇಷ್ಟವಾಗುತ್ತದೆ. ಇತ್ತೀಚೆಗೆ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಶುರುವಾಗಿರುವ ಹೊಸ ಧಾರವಾಹಿ ಬೃಂದಾವನ.

ಈ ಧಾರವಾಹಿ ಒಂದು ತುಂಬು ಕುಟುಂಬದ ಕಥೆ ಆಗಿದೆ. 32 ಸದಸ್ಯರಿರುವ ಮನೆಯ ಕಥೆ. ಈ ಧಾರವಾಹಿಯಲ್ಲಿ ಹೀರೋ ಆಕಾಶ ಮತ್ತು ಹೀರೋಯಿನ್ ಪುಷ್ಪ ಮದುವೆ ಸಂಭ್ರಮ ಶುರುವಾಗಿದೆ. ಧಾರವಾಹಿ ಶುರುವಾಗಿ 25 ದಿನಗಳ ಸಮಯ ಆಗಿದೆ. ಈಗಾಗಲೇ ನಾಯಕ ಮತ್ತು ನಾಯಕಿಗೆ ಮದುವೆ ಫಿಕ್ಸ್ ಆಗಿದ್ದು, ಶಾಸ್ತ್ರಗಳ ಸಂಭ್ರಮ ಕೂಡ ಜೋರಾಗಿಯೇ ಇದೆ.

ಧಾರವಾಹಿ ಕುತೂಹಲಕಾರಿಯಾಗಿ ಸಾಗುತ್ತಿದೆ ಎನ್ನುವ ವೇಳೆಯಲ್ಲೇ ಬೃಂದಾವನ ಧಾರವಾಹಿ ಬಗ್ಗೆ ಇದೀಗ ಒಂದು ಆಶ್ಚರ್ಯ ಎನ್ನಿಸುವಂಥ ಸುದ್ದಿ ಹೊರಬಂದಿದೆ. ಅದೇನು ಎಂದರೆ, ಬೃಂದಾವನ ಧಾರವಾಹಿ ಶುರುವಾಗಿ ಸ್ವಲ್ಪ ದಿನದಲ್ಲೇ ಇದೀಗ ಹೀರೋ ಬದಲಾಗುತ್ತಾರೆ ಎಂದು ಸುದ್ದಿಯೊಂದು ವೈರಲ್ ಆಗಿದೆ. ಹೌದು, ಮದುವೆ ಸಂಚಿಕೆಗಳು ಮುಗಿದ ಬಳಿಕ ಹೀರೋ ಆಕಾಶ್ ಪಾತ್ರಕ್ಕೆ ಹೊಸ ನಟ ಬರುತ್ತಾರೆ ಎಂದು ಹೇಳಲಾಗುತ್ತಿದೆ.

ಧಾರವಾಹಿಯಲ್ಲಿ ಹೀರೋ ಆಗಿ ನಟಿಸುತ್ತಿರುವುದು ಗಾಯಕ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವಿಶ್ವನಾಥ್ ಹಾವೇರಿ. ಫಾರಿನ್ ನಲ್ಲಿ ಓದುತ್ತಿರುವ ಮನೆಯ ಮೊಮ್ಮಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ ವಿಶ್ವನಾಥ್. ಆದರೆ ಇವರು ಪಾತ್ರಕ್ಕೆ ಸರಿಹೊಂದುತ್ತಿಲ್ಲ, ತುಂಬಾ ಚಿಕ್ಕ ಹುಡುಗನ ಹಾಗೆ ಕಾಣುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಹಾಗಾಗಿ ಹೀರೋ ಚೇಂಜ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ..

ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಮಾತುಕತೆಯ ಪ್ರಕಾರ ಆಕಾಶ್ ಪುಷ್ಪ ಮದುವೆಯಾದ ನಂತರ ನಾಯಕ ಆಕಾಶ್ ಪಾತ್ರಕ್ಕೆ ಹೊಸಬರು ಬೇರೆ ಯಾರಾದರೂ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಾಹಿನಿ ಇಂದ ಅಥವಾ ಧಾರವಾಹಿ ತಂಡದಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ. ನಿಜಕ್ಕೂ ಹೀರೋ ಬದಲಾಗುತ್ತಾರಾ ಎಂದು ಕಾದು ನೋಡಬೇಕಿದೆ..

Leave a Comment