ಕ್ಯಾಲ್ಷಿಯಂ ಕೊರತೆ ನೀಗಿಸಲು ಈ ಪದಾರ್ಥಗಳನ್ನು ಸೇವಿಸಿ!
ದೇಹದಲ್ಲಿ ಮೂಳೆಗಳು ಅನೇಕ ಪಾತ್ರಗಳನ್ನು ನಿರ್ವಹಿಸುತ್ತವೆ.ರಚನೆ , ಆಕಾರ , ಅಂಗಗಳನ್ನು ರಕ್ಷಿಸುವುದು , ಸ್ನಾಯುಗಳನ್ನು ನಿರ್ವಹಿಸುವುದು ಮತ್ತು ಅತಿ ಮುಖ್ಯವಾಗಿ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಸಂಗ್ರಹಿಸುವುದು , ದೇಹದಲ್ಲಿರುವ ಎಲುಬುಗಳ ಕಾರ್ಯವನ್ನು ನಿರ್ವಹಿಸುವುದು .ವಯಸ್ಸಾಗುತ್ತಾ ಬಂದಂತೆ ಎಲುಬುಗಳು ಸಾಂದ್ರತೆಯನ್ನು ಕಳೆದುಕೊಳ್ಳಲು ಆರಂಭಿಸುತ್ತವೆ.
ಬಾಲ್ಯ ಮತ್ತು ಹದಿಹರೆಯದ ಸಮಯದಲ್ಲಿ ಬಲವಾದ ಮತ್ತು ಆರೋಗ್ಯಕರ ಎಲುಬುಗಳು ನಮ್ಮದಾಗಿದ್ದರೂ ಕೂಡ ವಯಸ್ಸು 35 ದಾಟುತ್ತಿದ್ದಂತೆ ನೀವು ಎಲುಬುಗಳ ಆರೋಗ್ಯದ ಬಗ್ಗೆ ಹಾಗೂ ಬಲಪಡಿಸುವುದರ ಬಗ್ಗೆ ಗಮನ ಹರಿಸಲೇಬೇಕಾಗುತ್ತದೆ. ವಯಸ್ಸು 35 ದಾಟಿ 40 ಹತ್ತಿರವಾಗುತ್ತಿದ್ದಂತೆ ಕ್ಯಾಲ್ಸಿಯಂಯುಕ್ತ ಆಹಾರ ಸೇವನೆ ಅತಿ ಅವಶ್ಯಕವಾಗಿರುತ್ತದೆ.
ಹಾಲು , ಮೊಸರು ಮತ್ತು ಚೀಸ್ ನಂತಹ ಹಾಲಿನ ಉತ್ಪನ್ನಗಳಲ್ಲಿ ಕ್ಯಾಲ್ಷಿಯಂ ಅತ್ಯಧಿಕವಾಗಿರುತ್ತದೆ.
ಅಧಿಕ ಕ್ಯಾಲ್ಷಿಯಂ ಹೊಂದಿರುವ ಡೈರಿ ಉತ್ಪನ್ನಗಳ ಜೊತೆಗೆ ಬ್ರೊಕೋಲಿ , ಹಸಿರು ತರಕಾರಿಗಳ ಸೇವನೆಯು ಅವಶ್ಯ.
ಬಾದಾಮ್ ಮತ್ತು ಸೋಯಾ ಮಿಲ್ಕ್ ಗಳನ್ನು ಪ್ರತಿದಿನ ಕುಡಿಯುವುದರಿಂದ ಕ್ಯಾಲ್ಷಿಯಂ ಹೆಚ್ಚಿಸಿಕೊಳ್ಳಬಹುದು.
ಮೀನು ಕೂಡ ಅತ್ಯಧಿಕ ಕ್ಯಾಲ್ಷಿಯಂ ಯುಕ್ತ ಆಹಾರವಾಗಿದೆ. ವಯಸ್ಸು 20 ರಿಂದ 35 ರ ತನಕ ದೇಹ ಸುಮಾರು 1000 ಮಿಲಿಗ್ರಾಂ ದಿನದಿಂದ 2000 ಮಿಲಿಗ್ರಾಂ ವರೆಗೆ ಕ್ಯಾಲ್ಷಿಯಂ ಹೊಂದಿರುತ್ತದೆ. ಆದರೆ ವಯಸ್ಸಾಗುತ್ತಾ ಬಂದಂತೆ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ತಗ್ಗಲು ಪ್ರಾರಂಭವಾಗುತ್ತದೆ. ಹೀಗಾಗಿ ವೈದ್ಯರ ಸಲಹೆ ಪಡೆದು ರಕ್ತ ಪರೀಕ್ಷೆ ಮಾಡಿಸಿ.ನಿಮ್ಮ ದೇಹದಲ್ಲಿ ಕ್ಯಾಲ್ಷಿಯಂ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ. ವಯಸ್ಸಿನ ಪ್ರಕಾರ ನಿಮ್ಮ ದೇಹದಲ್ಲಿ ಇರಬೇಕಾದ ಕ್ಯಾಲ್ಸಿಯಂ ಪ್ರಮಾಣವನ್ನು ಇಲ್ಲಿ ನೀಡಲಾಗಿದೆ.
ವಯಸ್ಸು ↔ಕ್ಯಾಲ್ಷಿಯಂ ಪ್ರಮಾಣ
0-6 ತಿಂಗಳು ↔200mg.
7-12 ತಿಂಗಳು ↔260mg.
1-3 ವರ್ಷ ↔700mg.
4-8 ವರ್ಷ ↔1000mg.
9-13 ವರ್ಷ ↔1300mg.
14-18 ವರ್ಷ ↔ 1300mg.
19-50 ವರ್ಷ ↔1000mg.
51-70 ವರ್ಷ ↔1000mg.
71+ ವರ್ಷ ↔ 1200mg.
ದಿನನಿತ್ಯ ದೈಹಿಕವಾಗಿ ನಿಷ್ಕ್ರಿಯರಾಗಿರುವ ಜನರಲ್ಲಿ ಮೂಳೆ ಶಕ್ತಿ ಹೀನವಾಗಲೂ ಪ್ರಾರಂಭಿಸುತ್ತದೆ.
ಹೀಗಾಗಿ ನಿಮ್ಮ ಮೂಳೆಯ ಬಲವನ್ನು ಹೆಚ್ಚಿಸಲು ದಿನನಿತ್ಯ ವ್ಯಾಯಾಮ ಮಾಡಬೇಕು , ಜಾಗಿಂಗ್ , ಏರೋಬಿಕ್ಸ್ , ನೃತ್ಯ , ಟೆನ್ನಿಸ್ ಮತ್ತು ಬ್ಯಾಸ್ಕೆಟ್ ಬಾಲ್ ಆಟಗಳು ಸಹ ಎಲುಬುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.ನಿಮ್ಮ ವೈದ್ಯರು ನಿಮಗೆ ಯಾವ ವ್ಯಾಯಾಮವನ್ನು ಸೂಚಿಸುತ್ತಾರೋ ಅದನ್ನು ದಿನನಿತ್ಯ ತಪ್ಪದೇ ಮಾಡಲು ಮರೆಯದಿರಿ.
ಸಂಶೋಧನೆಯ ಪ್ರಕಾರ ತಂಬಾಕು ಮೂಳೆಯ ಶಕ್ತಿಯನ್ನು ಕುಂದಿಸುತ್ತದೆ. ಹೀಗಾಗಿ ಧೂಮಪಾನವನ್ನು ಬಿಟ್ಟುಬಿಡಿ.ದಿನನಿತ್ಯ ಕುಡಿಯುವ ಅಭ್ಯಾಸ ಹೊಂದಿರುವುದು ಕೂಡ ಅತ್ಯಂತ ಅಪಾಯ ಏಕೆಂದರೆ ಆಹಾರದ ಮೂಲಕ ಕ್ಯಾಲ್ಷಿಯಂ ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಮದ್ಯಪಾನ ಕುಂದಿಸುತ್ತದೆ ಆದ್ದರಿಂದ ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ಇಂದೇ ಬಿಟ್ಟುಬಿಡಿ.
ನಿಮ್ಮ ದೇಹದ ಮೂಳೆಗಳ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.
ಧನ್ಯವಾದಗಳು.