ಏಲಕ್ಕಿ ಚಹಾ ಹೀಗೆ ಸೇವಿಸಿ ಸಕ್ಕರೆ ಕಾಯಿಲೆಗೆ ಹೇಳಿ ಗುಡ್ ಬೈ !

0
80

Cardamom tea Benifits :ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್ ಚಹಾ ಕುಡಿಯುವುದು ಪ್ರತಿಯೊಬ್ಬರಿಗೂ ರೂಡಿ ಇದೆ. ಆದರೆ ಸೇವಿಸುವ ಚಹಾದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.ಚಹಾಕ್ಕೆ ಏಲಕ್ಕಿಯನ್ನು ಸೇರಿಸಿ ಕುಡಿಯುವುದು.ಇದರಿಂದ ಆರೋಗ್ಯಕ್ಕೆ ಬಹಳ ಉತ್ತಮ ಲಾಭಗಳು ಇವೇ.ಏಲಕ್ಕಿ ಬೆರೆಸಿ ಸೇವಿಸಿದ ಚಹಾದ ಅರೋಗ್ಯ ಲಾಭವೇನು ಹಾಗೂ ಹೇಗೆ ಸೇವಿಸಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ನಿಮ್ಮ ಕನಸಿನಲ್ಲಿ ಈ 5 ವಸ್ತುಗಳನ್ನು ನೋಡಿದರೆ, ನಿಮ್ಮ ಅದೃಷ್ಟವು ಹೊಳೆಯಲಿದೆ ಎಂದು ಅರ್ಥ! ಲಕ್ಷ್ಮಿ ದೇವಿಯ ಆಗಮನದ ಲಕ್ಷಣವಿರಲಿದೆ!

ಏಲಕ್ಕಿ ಆರೋಗ್ಯಕ್ಕೆ ಬಹಳ ಒಳ್ಳೆಯದು.ವಿಶೇಷವಾಗಿ ಏಲಕ್ಕಿ ಅಧಿಕ ರಕ್ತದ ಒತ್ತಡವನ್ನು ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ, ಉಸಿರಾಟದ ತೊಂದರೆ, ಕಬ್ಬಿಣಾಂಶ ಕೊರತೆ, ಅಧಿಕ ಬೊಜ್ಜಿನ ಸಮಸ್ಯೆ, ಆಜೀರ್ಣತೆಗೆ ಬಹಳ ಒಳ್ಳೆಯದು. ಇದರಿಂದ ಹಲವಾರು ರೋಗಗಳಿಗೆ ಪರಿಹಾರ ದೊರೆಯುತ್ತದೆ. ಇಂತಹ ಏಲಕ್ಕಿಯನ್ನು ಚಹಾಕ್ಕೆ ಸೇರಿ ಕುಡಿದರೆ ಜೀರ್ಣ ಶಕ್ತಿಯನ್ನು ಉತ್ತಮಗೋಳಿಸುತ್ತದೆ.

ಆಯುರ್ವೇದದ ಪ್ರಕಾರ ಊಟದ ಬಳಿಕ ಏಲಕ್ಕಿ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ವಿಶೇಷವಾಗಿ ಸಾಂಬಾರು ಪದಾರ್ಥಗಳ ಸೇವನೆಯಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಎದುರು ಆಗುತ್ತದೆ.ಕೆಲವೊಮ್ಮೆ ಊಟದ ನಂತರ ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳುತ್ತದೆ. ಆದ್ದರಿಂದ ಈ ರೀತಿಯ ಸಮಸ್ಯೆ ಎದುರಾದಾಗ ಏಲಕ್ಕಿ ಚಹಾದ ಸೇವನೆ ಮಾಡುವುದು ಉತ್ತಮ.

ಏಲಕ್ಕಿ ಚಹಾ ಹಲ್ಲು ನೋವಿನ ಚಿಕಿತ್ಸೆಯನ್ನು ಒದಗಿಸುತ್ತದೆ. ಏಲಕ್ಕಿಯಲ್ಲಿ ನೈಸರ್ಗಿಕವಾದ ಬ್ಯಾಕ್ಟೀರಿಯಾ ನಿವಾರಕ ಗುಣವಿದೆ ಹಾಗೂ ಈ ಗುಣ ಹಲ್ಲುಗಳ ಸಂಧುಗಳಲ್ಲಿ ಬೆಳೆಯುತ್ತಿರುವ ಬ್ಯಾಕ್ಟೇರಿಯಾಗಳನ್ನು ಕೊಂದು ಸ್ವಚ್ಛತೆಯನ್ನು ಕಾಪಾಡುತ್ತದೆ.ಊಟದ ಬಳಿಕ ಒಂದು ಕಪ್ ಏಲಕ್ಕಿ ಟೀ ಕುಡಿಯುವ ಮೂಲಕ ಉಸಿರಿನ ದುರ್ವಾಸನೆ ಇಲ್ಲವಾಗಿಸಬಹುದು ಹಾಗೂ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು.ಕಟ್ಟಿಕೊಂಡ ಮೂಗನ್ನು ತೆರೆಯುತ್ತದೆ ಹಾಗೂ ಗಂಟಲು ನೋವು ಕೆಮ್ಮು ಕಫ ಕಡಿಮೆಯಾಗುತ್ತದೆ.

ನಿಮ್ಮ ಕನಸಿನಲ್ಲಿ ಈ 5 ವಸ್ತುಗಳನ್ನು ನೋಡಿದರೆ, ನಿಮ್ಮ ಅದೃಷ್ಟವು ಹೊಳೆಯಲಿದೆ ಎಂದು ಅರ್ಥ! ಲಕ್ಷ್ಮಿ ದೇವಿಯ ಆಗಮನದ ಲಕ್ಷಣವಿರಲಿದೆ!

Cardamom tea Benifits :ಅಷ್ಟೇ ಅಲ್ಲದೆ ಏಲಕ್ಕಿ ಚಹಾವನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ದೇಹದಲ್ಲಿ ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಹಸಿರು ಏಲಕ್ಕಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಏಲಕ್ಕಿ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಲು ದಿನಕ್ಕೆ ಒಂದು ಬಾರಿ ಏಲಕ್ಕಿ ಚಹಾ ಸೇವನೆ ಮಾಡುವುದು ಒಳ್ಳೆಯದು. ಇನ್ನು ತುಂಬಾನೇ ತಲೆನೋವಿನ ಸಮಸ್ಯೆ ಬಂದರೆ ತಕ್ಷಣ ಏಲಕ್ಕಿ ಚಹಾ ಸೇವನೆ ಮಾಡಿ. ಅಷ್ಟೇ ಅಲ್ಲದೆ ಏಲಕ್ಕಿ ಚಹಾ ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

LEAVE A REPLY

Please enter your comment!
Please enter your name here