Celebrity Photo: ಫೋಟೋದಲ್ಲಿ ಕಾಣುತ್ತಿರುವ ಈ ಕ್ಯೂಟ್ ಚೈಲ್ಡ್ ಹುಡ್ ಫೋಟೋ ಯಾರದ್ದು ಗೊತ್ತಾ?

Written by Pooja Siddaraj

Published on:

Celebrity Photo: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಹಲವು ವಿಚಾರಗಳು ವೈರಲ್ ಆಗುತ್ತದೆ. ಅದರಲ್ಲೂ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ವಿಷಯಗಳು ಬಹಳ ಬೇಗ ವೈರಲ್ ಆಗುತ್ತದೆ ಎಂದೇ ಹೇಳಬಹುದು. ಕೆಲವೊಮ್ಮೆ ಸೆಲೆಬ್ರಿಟಿಗಳ ಚೈಲ್ಡ್ ಹುಡ್ ಫೋಟೋ ವೈರಲ್ ಆಗಿ, ಅವರು ಯಾರು ಎಂದು ಕಂಡುಹಿಡಿಯುವ ಕೆಲಸ ಕೂಡ ನಡೆಯುತ್ತದೆ. ಅದೇ ಥರ ಈಗ ಒಬ್ಬ ಸೆಲೆಬ್ರಿಟಿಯ ಚೈಲ್ಡ್ ಹುಡ್ ಫೋಟೋ ವೈರಲ್ ಆಗಿದೆ.

ಈ ಕ್ಯೂಟ್ ಆದ ಫೋಟೋದಲ್ಲಿ ಕೆಂಪು ಬಣ್ಣದ ಡ್ರೆಸ್ ಧರಿಸಿ ಮುದ್ದಾಗಿ ಕಾಣುತ್ತಿರುವ ಈ ಪುಟ್ಟ ಹುಡುಗಿ ಇಂದು ಸ್ಟಾರ್ ನಟಿ. ಫೋಟೋದಲ್ಲಿ ನೋಡಿದರೆ, ಆ ನಗು, ಮುಗ್ಧತೆ ಎಂಥವರಿಗೂ ಇಷ್ಟ ಆಗುತ್ತದೆ. ಈ ಮುದ್ದು ಹುಡುಗಿ ತೆಲುಗು, ತಮಿಳು, ಹಿಂದಿ ಎಲ್ಲಾ ಭಾಷೆಗಳ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ ಟಾಪ್ ನಟಿಯಾಗಿ ಗುರುತಿಸಿಕೊಂಡವರು. ಆ ಪುಟ್ಟ ಹುಡುಗಿ ಯಾರು ಅಂತ ಗೊತ್ತಾಯ್ತಾ?

ಈ ಹುಡುಗಿ ಮತ್ಯಾರು ಅಲ್ಲ, ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಮಗಧೀರ ಸಿನಿಮಾ ಮೂಲಕ ಸ್ಟಾರ್ ಆಗಿದ್ದ ಕಾಜಲ್ ಅಗರ್ವಾಲ್. ಕಾಜಲ್ ಅಗರ್ವಾಲ್ ಅವರ ಚೈಲ್ಡ್ ಹುಡ್ ಫೋಟೋ ಇದಾಗಿದೆ, ಕೆಲ ವರ್ಷಗಳ ಹಿಂದೆ ಸ್ವತಃ ಕಾಜಲ್ ಅಗರ್ವಾಲ್ ಅವರೇ ಈ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಫೋಟೋ ಇದೀಗ ವೈರಲ್ ಆಗಿದೆ.

ಕಾಜಲ್ ಅಗರ್ವಾಲ್ ಅವರು ಮೊದಲಿಗೆ ನಟಿಸಿದ್ದು ಬಾಲನಟಿಯಾಗಿ, ಮೊದಲ ಸಿನಿಮಾದಲ್ಲೇ ಬಾಲಿವುಡ್ ನ ಲೆಜೆಂಡ್ ಅಮಿತಾಭ್ ಬಚ್ಚನ್, ಐಶ್ವರ್ಯ ರೈ ಮತ್ತು ವಿವೇಕ್ ಒಬೆರಾಯ್ ಅವರಂತಹ ದೊಡ್ಡ ದೊಡ್ಡ ಸ್ಟಾರ್ ಕಲಾವಿದರೇ ಇರುವ ಕ್ಯೂ ಹೋ ಗಯಾ ನಾ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿಸಿದ ಕೆಲ ವರ್ಷಗಳ ಬಳಿಕ ರಾಜಮೌಳಿ ಅವರ ಮಗಧೀರ ಸಿನಿಮಾದಲ್ಲಿ ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು. ಆಗಿನ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರು ಕಾಜಲ್ ಅಗರ್ವಾಲ್.

ತೆಲುಗಿನಲ್ಲಿ ಜ್ಯೂನಿಯರ್ ಎನ್.ಟಿ.ಆರ್, ರಾಮ್ ಚರಣ್, ಅಲ್ಲು ಅರ್ಜುನ್, ತಮಿಳು ನಟರಾದ ಸೂರ್ಯ, ವಿಜಯ್ ಸೇರಿದಂತೆ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ್ದಾರೆ. ಬಾಲಿವುಡ್ ನಲ್ಲಿ ಸ್ಪೆಷಲ್ 26 ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಕಾಜಲ್ ಅಗರ್ವಾಲ್ ಅವರು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿಲ್ಲ. ಈವರೆಗೂ ಸುಮಾರು 50 ಸಿನಿಮಾಗಳಲ್ಲಿ ನಟಿಸಿದ್ದಾರೆ ಕಾಜಲ್ ಅಗರ್ವಾಲ್.

IMG 20231016 162813
Source:Google

ಇನ್ನು ಕಾಜಲ್ ಅಗರ್ವಾಲ್ ಅವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ, ಇವರು ಲಾಕ್ ಡೌನ್ ಸಮಯದಲ್ಲಿ ಉದ್ಯಮಿ ಗೌತಮ್ ಕಿಚ್ಳು ಅವರೊಡನೆ ಮದುವೆಯಾದರು. ಹಾಗೆಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಕಾಜಲ್ ಅಗರ್ವಾಲ್. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಾಜಲ್ ಅಗರ್ವಾಲ್ ಅವರು ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

Leave a Comment