Chaitra Achar: ನೀರಿನಲ್ಲಿ ಚೈತ್ರ ಆಚಾರ್ ಹೊಸ ಫೋಟೋಶೂಟ್! ನೆಟ್ಟಿಗರು ಫಿದಾ

0 1

Chaitra Achar: ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ ಮೂಲಕ ಬಹಳ ಜನಪ್ರಿಯತೆ ಪಡೆದುಕೊಂಡಿರುವವರು ನಟಿ ಚೈತ್ರ ಜೆ ಆಚಾರ್. ಉತ್ತಮ ಅಭಿನಯದ ಕಾರಣಕ್ಕೆ ಎಲ್ಲರಿಗೂ ಇಷ್ಟ ಆಗುವ ಚೈತ್ರಾ ಜೆ ಆಚರ್ ಅವರು ಗಾಯಕಿಯಾಗಿ ಕೂಡ ಹೆಚ್ಚು ಗುರುತಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಚೈತ್ರಾ ಅವರು ಇದೀಗ ಹೊಸ ಫೋಟೋಶೂಟ್ ಮೂಲಕ ವೈರಲ್ ಆಗಿದ್ದಾರೆ.

ಚೈತ್ರಾ ಅವರು ಹುಟ್ಟಿ ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲಿ. ಚಿಕ್ಕನಿಂದಲೇ ಇವರಿಗೆ ಸಂಗೀತದಲ್ಲಿ ಆಸಕ್ತಿ ಇತ್ತು, ಆಗಿನಿಂದಲು ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. ಗಾಯಕಿಯಾಗಿ ಗುರುತಿಸಿಕೊಂಡು, ಮಾಯಾಬಜಾರ್, ಗರುಡ ಗಮನ ವೃಷಭ ವಾಹನ ಹಾಗೂ ಇನ್ನು ಕೆಲವು ಸಿನಿಮಾಗಳಿಗೆ ಹಾಡನ್ನು ಹಾಡಿದ್ದಾರೆ. ಗಾಯಕಿಯಾಗಿಯೂ ಅವಾರ್ಡ್ ಪಡೆದಿದ್ದಾರೆ.

ಈ ನಟಿ ನಟನೆಗೆ ಎಂಟ್ರಿ ಕೊಟ್ಟಿದ್ದು, ರಾಜ್ ಬಿ ಶೆಟ್ಟಿ ಅವರ ಮಹಿರಾ ಸಿನಿಮಾ ಮೂಲಕ. ಗಿಲ್ಕಿ, ತಲೆದಂಡ, ಟೊಬಿ, ಗಿಲ್ಕಿ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಆದರೆ ಇವರಿಗೆ ಹೆಚ್ಚು ಜನಪ್ರಿಯತೆ ನೀಡಿದ್ದು, ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಎಂದರೆ ತಪ್ಪಲ್ಲ. ಈ ಸಿನಿಮಾ ಮೂಲಕ ಇವರಿಗೆ ಹೆಚ್ಚಿನ ಜನಪ್ರಿಯತೆ ಸಿಕ್ಕಿದೆ. ಹಾಗೆಯೇ ಚೈತ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.

ಆಗಾಗ ಫೋಟೋಶೂಟ್ ಗಳ ಮೂಲಕ ಗಮನ ಸೆಳೆಯುವ ಚೈತ್ರಾ ಜೆ ಆಚಾರ್ ಅವರು ಇದೀಗ ನೀರಿನಲ್ಲಿ ವಾಟರ್ ಬೇಬಿ ಲುಕ್ ನಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದು ಈ ಫೋಟೋಸ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಾಟ್ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

Leave A Reply

Your email address will not be published.