ನಿಮ್ಮ ಬುದ್ಧಿಶಕ್ತಿಗೆ ಸವಾಲ್: 29 ಸೆಕೆಂಡ್ ನಲ್ಲಿ 8 ವ್ಯತ್ಯಾಸ ಗುರ್ತಿಸಿ, 99% ಜನ ಫೇಲಾದ ಸವಾಲ್ ಇದು

0
39

ಪ್ರಪಂಚದ ಎಲ್ಲಾ ಒಗಟುಗಳ ನಡುವೆ ಒಂದೇ ರೀತಿ ಕಾಣುವ ಎರಡು ಚಿತ್ರಗಳಲ್ಲಿನ ವ್ಯತ್ಯಾಸವನ್ನು ಕಂಡುಹಿಡಿಯುವ ಪರೀಕ್ಷೆಗಿಂತ ಹೆಚ್ಚು ಮೋಜಿನ ಆಟ ಮತ್ತು ಮಾನಸಿಕವಾಗಿ ಉತ್ತೇಜನ ನೀಡುವ ಚಟುವಟಿಕೆ ಬೇರೆ ಯಾವುದೂ ಇಲ್ಲ. ಇದು ಎರಡು ಒಂದೇ ರೀತಿಯ ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಕಂಡುಹಿಡಿಯುವ ಚಟುವಟಿಕೆಯನ್ನು ಒಳಗೊಂಡಿರುತ್ತದೆ. ಆದರೆ ಅನೇಕ ಬಾರಿ ಉತ್ತರವನ್ನು ಹೇಳಲು ಸಮಯದ ಮಿತಿಯನ್ನು ನಿಗದಿಪಡಿಸಲಾಗಿರುತ್ತದೆ. ಒಗಟುಗಳು ಮೆದುಳಿಗೆ ಕಸರತ್ತನ್ನು ನೀಡಿದರೆ, ವ್ಯತ್ಯಾಸ ಕಂಡು ಹಿಡಿಯುವ ಪರೀಕ್ಷೆಯು ವ್ಯಕ್ತಿಯೊಬ್ಬರ ಬುದ್ಧಿವಂತಿಕೆ ಮತ್ತು ವೀಕ್ಷಣೆ ಕೌಶಲ್ಯಗಳನ್ನು ಅಳೆಯುವ ಪರಿಣಾಮಕಾರಿ ವಿಧಾನಗಳಾಗಿವೆ.

ಆಧುನಿಕ ಡಿಜಿಟಲ್ ಯುಗದಲ್ಲಿ ಜನರು ವಿಷಯದ ಕಡಿಮೆ ಗಮನ ನೀಡುತ್ತಾರೆ. ಹೆಚ್ಚು ಹೊತ್ತು ಫೋಕಸ್ ಮಾಡುವ ಕಡೆಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಬದಲಾಗಿ ಬಹಳ ಕಡಿಮೆ ಸಮಯದಲ್ಲಿ ವ್ಯತ್ಯಾಸಗಳನ್ನು ಕಂಡುಹಿಡಿಯಲು ತೊಡಗಿಕೊಳ್ಳುತ್ತಿರುವುದರಿಂದ ಅದು ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು ಬುದ್ಧಿಶಕ್ತಿಯನ್ನು ಚುರುಕಾಗಿ ಮಾಡಲು ನೆರವಾಗುತ್ತಿದೆ. ಅಲ್ಲದೇ ಇದು ಸಂಪೂರ್ಣ ವಿನೋದ ಸಹಾ ಆಗಿದೆ. ನಾವು ಇಂದು ನಿಮಗಾಗಿ ಅಂತಹ ಒಂದು ವ್ಯತ್ಯಾಸ ಪರೀಕ್ಷೆಯನ್ನು ತಂದಿದ್ದೇವೆ. ನೀವು 29 ಸೆಕೆಂಡುಗಳಲ್ಲಿ ಒಂದೇ ರೀತಿ ಕಾಣುವ ಈ ಎರಡು ಚಿತ್ರಗಳಲ್ಲಿ ಅಡಗಿರುವ ಎಂಟು ವ್ಯತ್ಯಾಸಗಳನ್ನು ಕಂಡುಹಿಡಿಯಬೇಕು. ನಿಗಧಿತ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡರೆ ನೀವು ಇದರಲ್ಲಿ ಸೋತಂತೆ.

ಇಲ್ಲಿ ಬಹುತೇಕ ಒಂದೇ ರೀತಿಯಲ್ಲಿ ಕಾಣುವ ಬಾಯಲ್ಲಿ ನೀರು ಉರಿಸುವಂತಹ ಡೋನಟ್ ಗಳ ಚಿತ್ರವಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ಒಂದೇ ರೀತಿ ಕಾಣುವ ಈ ಚಿತ್ರದಲ್ಲಿ ಎಂಟು ವ್ಯತ್ಯಾಸಗಳನ್ನು ಗುರ್ತಿಸಬಹುದಾಗಿದೆ. 29 ಸೆಕೆಂಡುಗಳಲ್ಲಿ ನೀವು ಅದನ್ನು ಗುರುತಿಸಬೇಕು. 90% ಜನರು ಈ ಟಾಸ್ಕ್ ನಲ್ಲಿ ಸೋತಿದ್ದಾರೆ. ಈಗ ನಿಮ್ಮ ಸರತಿ. ನಿಮ್ಮ ಬುದ್ಧಿಮತ್ತೆಯನ್ನು ಹಾಗೂ ವೀಕ್ಷಣೆಯ ಕೌಶಲ್ಯವನ್ನು ಪರೀಕ್ಷಿಸಿಕೊಳ್ಳಲು ಈ ಚಿತ್ರದಲ್ಲಿರುವ ಎಂಟು ವ್ಯತ್ಯಾಸಗಳನ್ನು ಕಂಡುಹಿಡಿಯಬಹುದಾಗಿದೆ. ಇನ್ಯಾಕೆ ತಡ ವ್ಯತ್ಯಾಸ ಗುರುತಿಸಿ.

ಒಂದು ವೇಳೆ ನಿಗಧಿತ ಸಮಯದಲ್ಲಿ ಎಲ್ಲಾ ಎಂಟು ವ್ಯತ್ಯಾಸಗಳನ್ನು ಕಂಡುಹಿಡಿಯಲು ನೀವು ವಿಫಲರಾಗಿದ್ದಾರೆ, ಮೇಲಿನ ಚಿತ್ರದಲ್ಲಿ ನಿಮಗೆ ಉತ್ತರಗಳನ್ನು ಕೂಡಾ ನೀಡಲಾಗಿದೆ. ಈಗಾಗಲೇ ನೀವು ವ್ಯತ್ಯಾಸಗಳನ್ನು ಗುರುತಿಸಿದ್ದರೆ ಅದು ಸರಿಯೋ ಅಥವಾ ತಪ್ಪೋ ಎಂದು ಮೇಲಿನ ಚಿತ್ರದ ಮೂಲಕ ತಿಳಿದುಕೊಳ್ಳಬಹುದು. ಒಂದು ವೇಳೆ ಯಾವ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗದೇ ಇದ್ದಲ್ಲಿ ಉತ್ತರದ ಚಿತ್ರವನ್ನು ನೋಡಿ ವ್ಯತ್ಯಾಸಗಳು ಏನೆನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ..

LEAVE A REPLY

Please enter your comment!
Please enter your name here