Chanakya Neeti: ಬದುಕಿನಲ್ಲಿ ಸಂಗಾತಿಯನ್ನು ಆಯ್ಕೆ ಮಾಡುವುದಕ್ಕಿಂತ ಮೊದಲು ಈ ವಿಚಾರಗಳನ್ನು ನೆನಪಿನಲ್ಲಿಡಿ!

0 27

Chanakya Neeti: ಆಚಾರ್ಯ ಚಾಣಕ್ಯರು ಬರೆದಿರುವ ಚಾಣಕ್ಯ ನೀತಿ ಪುಸ್ತಕವು ಅತ್ಯಂತ ಶ್ರೇಷ್ಠವಾದ ಪುಸ್ತಕಗಳಲ್ಲಿ ಒಂದು. ಈ ಒಂದು ಪುಸ್ತಕದಲ್ಲಿ ಇರುವ ವಿಚಾರವನ್ನು ತಿಳಿದುಕೊಂಡು, ಅದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ, ನಮ್ಮ ಬದುಕು ಸುಗಮವಾಗಿ ಸಾಗುತ್ತದೆ. ಒಬ್ಬ ಮನುಷ್ಯನ ಬದುಕಿನಲ್ಲಿ ಬರುವ ಎಲ್ಲಾ ವಿಚಾರವನ್ನು ತಿಳಿಸಲಾಗಿದೆ. ಒಬ್ಬ ವ್ಯಕ್ತಿಯ ಬದುಕಿನಲ್ಲಿ ಬಹಳ ಮುಖ್ಯವಾದ ವಿಚಾರ ಸಂಗಾತಿಯನ್ನು ಆಯ್ಕೆ ಮಾಡುವುದು..

ಸಂಗಾತಿಯು ಇಡೀ ಜೀವನದ ಉದ್ದಕ್ಕೂ ನಿಮ್ಮ ಜೊತೆಯಲ್ಲಿ ಇರುವವರು, ಹಾಗಾಗಿ ಸಂಗಾತಿಯ ಆಯ್ಕೆ ಮಾಡುವಾಗ ಬಹಳ ಹುಷಾರಾಗಿ ಇರಬೇಕು. ಕೆಲವು ವಿಚಾರಗಳನ್ನು ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬೇಕು ನಿಮ್ಮ ಸಂಗಾತಿಯನ್ನ ಆಯ್ಕೆ ಮಾಡುವಾಗ, ಮುಖ್ಯವಾದ ಈ ಮೂರು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ. ಆಗ ನಿಮ್ಮ ಜೀವನ ಚೆನ್ನಾಗಿರುತ್ತದೆ. ಹಾಗಿದ್ದಲ್ಲಿ ಆ ಮೂರು ಮುಖ್ಯವಾದ ಅಂಶಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಒತ್ತಡದ ನಿರ್ಧಾರ ಬೇಡ: ಮದುವೆ, ಸಂಗಾತಿಯ ಆಯ್ಕೆ ಎನ್ನುವುದು ನಮ್ಮ ಬದುಕಿನ ಮುಖ್ಯವಾದ ಘಟ್ಟ. ಹಾಗಾಗಿ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಯಾವುದೇ ಒತ್ತಡದಿಂದ ತೆಗೆದುಕೊಳ್ಳಬೇಡಿ, ಒತ್ತಡಕ್ಕೆ ಬಲವಂತಕ್ಕೆ ನಿರ್ಧಾರ ತೆಗೆದುಕೊಂಡು, ಮುಂದಿನ ಜೀವನ ಹಾಳಾಗಿ ಹೋಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಹಾಗೆಯೇ ಇಂದು ಒತ್ತಡಕ್ಕೆ ಮದುವೆಯಾಗಿ, ನಾಳೆ ಸಂಗಾತಿಯ ಜೊತೆಗೆ ಯಾವಾಗಲೂ ಜಗಳ, ರಾಜಿ ಎನ್ನುವ ಹಾಗೆ ಆಗುತ್ತದೆ. ಹಾಗಾಗಿ ಒತ್ತಡದಲ್ಲಿ ನಿರ್ಧಾರ ತೆಗೆದುಕೊಳ್ಳಬಾರದು.

ಗುಣಗಳ ಬಗ್ಗೆ ತಿಳಿಯಬೇಕು ;- ಮದುವೆ ಅಥವಾ ಸಂಗಾತಿಯ ಆಯ್ಕೆ ಎನ್ನುವ ವಿಷಯಕ್ಕೆ ಬಂದಾಗ, ಎಲ್ಲರೂ ಕೂಡ ಹುಡುಗ/ಹುಡುಗಿ ನೋಡಲು ಸುಂದರವಾಗಿದ್ದಾಳ ಎನ್ನುವುದನ್ನೇ ಹೆಚ್ಚು ಗಮನಿಸುತ್ತಾರೆ. ಆದರೆ ಅದಕ್ಕಿಂತಲೂ ಮುಖ್ಯ ಆಗುವುದು ಅವರ ಗುಣ, ನೋಡಲು ಚೆನ್ನಾಗಿದ್ದು ಚೆನ್ನಾಗಿ ಸಂಸಾರ ಮಾಡಲು ಇರಬೇಕಾದ ಗುಣಗಳೇ ಇಲ್ಲ ಎಂದರೆ, ನಿಮ್ಮ ಬದುಕು ಚೆನ್ನಾಗಿರುವುದಿಲ್ಲ. ಹಾಗಾಗಿ ಸಂಗಾತಿಯನ್ನು ಆಯ್ಕೆ ಮಾಡುವ ಮೊದಲು, ಅವರ ಗುಣಲಕ್ಷಣ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಿ.

ನಡವಳಿಕೆ ಬಗ್ಗೆ ತಿಳಿಯಿರಿ :- ಒಬ್ಬ ವ್ಯಕ್ತಿಯ ಜೊತೆಗೆ ಜೀವನ ಮಾಡಲು ಅವರ ಸೌಂದರ್ಯಕ್ಕಿಂತ ಅವರ ನಡವಳಿಕೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಒಬ್ಬ ವ್ಯಕ್ತಿಯನ್ನು ಸಂಗಾತಿಯಾಗಿ ಆಯ್ಕೆ ಮಾಡುವುದಕ್ಕಿಂತ ಮೊದಲು ಅವರ ನಡವಳಿಕೆ ಹೇಗಿದೆ ಎನ್ನುವುದನ್ನು ಕೂಡ ನೀವು ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕು ಇದೆಲ್ಲವನ್ನು ನೋಡಿಕೊಂಡ ನಂತರ ಅವರನ್ನು ಸಂಗಾತಿಯಾಗಿ ಆಯ್ಕೆ ಮಾಡಬೇಕೋ ಬೇಡವೋ ಎನ್ನುವುದನ್ನು ಡಿಸೈಡ್ ಮಾಡಿ.

Leave A Reply

Your email address will not be published.