Chanakya Neeti: ಈ ವಿಷಯಗಳನ್ನು ನೆನಪಲ್ಲಿ ಇಟ್ಟುಕೊಂಡರೆ, ನಿಮ್ಮ ಅಕೌಂಟ್ ಇಂದ ಹಣ ಖಾಲಿ ಆಗೋದೇ ಇಲ್ಲ!

Written by Pooja Siddaraj

Published on:

Chanakya Neeti: ಆಚಾರ್ಯ ಚಾಣಕ್ಯರನ್ನು ಚಾಣಾಕ್ಷ ಎಂದು ಕರೆಯುತ್ತಾರೆ. ಅದೆಷ್ಟೋ ವರ್ಷಗಳ ಹಿಂದೆಯೇ ಇವರು ಬರೆದಿರುವ ಚಾಣಕ್ಯ ನೀತಿ ಪುಸ್ತಕದಲ್ಲಿ ಒಬ್ಬ ಮನುಷ್ಯ ಜೀವಿಸುವುದಕ್ಕೆ ಆಗತ್ಯವಿರುವ ಎಲ್ಲಾ ವಿಚಾರಗಳನ್ನು ಕೂಡ ತಿಳಿಸಲಾಗಿದೆ. ಈ ಪುಸ್ತಕದಲ್ಲಿರುವ ವಿಚಾರಗಳನ್ನು ಬದುಕಿಗೆ ಅಳವಡಿಸಿಕೊಂಡರೆ, ನಿಮ್ಮ ಜೀವನ ಅದ್ಭುತವಾಗಿ ಇರುವುದು ಖಂಡಿತ. ಚಾಣಕ್ಯ ನೀತಿಯಲ್ಲಿ ಒಬ್ಬ ವ್ಯಕ್ತಿ ಹಣವನ್ನು ಹೇಗೆ ಹೂಡಿಕೆ ಮಾಡಬೇಕು, ಹೇಗೆ ಖರ್ಚು ಮಾಡಬೇಕು ಎನ್ನುವುದನ್ನು ತಿಳಿಸಲಾಗಿದೆ. ಅವುಗಳನ್ನು ತಿಳಿದುಕೊಂಡರೆ ಸಾಕು, ಹಣ ಎನ್ನುವುದು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ. ಹಾಗಿದ್ದರೆ ಏನು ಮಾಡಬೇಕು ಎಂದು ತಿಳಿಸುತ್ತೇವೆ ನೋಡಿ..

ಹಣ ಖರ್ಚು ಮಾಡುವ ನಿಯಮಗಳು :- ಚಾಣಕ್ಯರು ಹೇಳಿರುವ ಪ್ರಕಾರ, ಒಬ್ಬ ವ್ಯಕ್ತಿ ಹಿತಮಿತವಾಗಿ ಬ್ಯಾಲೆನ್ಸ್ಡ್ ಆಗಿ ಖರ್ಚು ಮಾಡಬೇಕು. ಅವಶ್ಯಕತೆ ಸಂದರ್ಭ ಬಂದಾಗ ಹಣ ಖರ್ಚು ಮಾಡಬೇಕು. ಆದರೆ ತನ್ನ ಐಶ್ವರ್ಯವನ್ನು ಕೂಡ ರಕ್ಷಿಸಿಕೊಳ್ಳಬೇಕು. ಹಾಗೆಯೇ ಹಣವನ್ನು ಅವಶ್ಯಕತೆ ಇದ್ದಾಗ ಬಳಸದೇ ಹೋದರೆ ಅದು ಅಪ್ರಯೋಜಕ ಎಂದು ಚಾಣಕ್ಯರು ಹೇಳುತ್ತಾರೆ.

ಹಣ ಬಳಕೆ ಈ ರೀತಿ ಮಾಡಿ :- ನಿಮ್ಮಲ್ಲಿರುವ ಹಣವನ್ನು ಖರ್ಚು ಮಾಡಲು, ಆ ಹಣವನ್ನು ಸರಿಯಾದ ಕಡೆ ಹೂಡಿಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ದಾನ, ದಕ್ಷಿಣೆ, ಹೋಮ, ಹವನ, ಹಾಗೂ ಇನ್ನಿತರ ದೇವರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಒಳ್ಳೆಯದು ಎಂದು ಚಾಣಕ್ಯರು ಹೇಳಿದ್ದಾರೆ. ಅವಶ್ಯಕತೆ ಇಲ್ಲದೆ ಹಣವನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ, ಹಾಗೆಯೇ ದೇವರ ವಿಚಾರದಲ್ಲಿ ಹೂಡಿಕೆ ಮಾಡುವುದರಿಂದ ಅದೃಷ್ಟ ನಿಮ್ಮದಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.

ಚಾಣಕ್ಯನೀತಿಯಲ್ಲಿ ಆಚಾರ್ಯ ಚಾಣಕ್ಯರು ನೀರಿನ ಜೊತೆಗೆ ಹಣವನ್ನು ಹೋಲಿಸಿದ್ದಾರೆ. ಒಂದು ಕೆರೆಯಲ್ಲಿ ನೀರಿದ್ದು, ಆ ನೀರನ್ನು ತುಂಬಾ ದಿನಗಳ ಕಾಲ ಬಳಸದೇ ಇದ್ದರೆ, ಆ ನೀರಿಗೆ ಪಾಚಿ ಬರುತ್ತದೆ, ಕುಡಿಯುವ ಅಥವಾ ಇನ್ನಿತರ ಕೆಲಸಕ್ಕೆ ಬಳಕೆ ಮಾಡುವ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಅದೇ ರೀತಿ ಹಣವನ್ನು ಇಟ್ಟುಕೊಂಡು ಅದು ಬೇಕಾದ ಸಮಯಕ್ಕೆ ಬಳಕೆ ಮಾಡಲು ಆಗದೆ ಹೋದರೆ ಅದು ಪಾಚಿಗೆ ಸಮ ಎಂದು ಚಾಣಕ್ಯರು ಹೇಳಿದ್ದಾರೆ.

Leave a Comment