Chandra Chakori: ಚಂದ್ರ ಚಕೋರಿ ಸಿನಿಮಾ ನಟಿ ಪ್ರಿಯಾ ಈಗ ಹೇಗಿದ್ದಾರೆ ಗೊತ್ತಾ?

0 1

Chandra Chakori: ನಟ ಶ್ರೀಮುರಳಿ ಅವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಚಂದ್ರ ಚಕೋರಿ. ಈ ಸಿನಿಮಾವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ನಿರ್ಮಾಣ ಮಾಡಿದ್ದರು. ಎಸ್.ನಾರಾಯಣ್ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಮುರಳಿ ಅವರಿಗೆ ನಾಯಕಿಯರಾಗಿ ಇಬ್ಬರು ಕಲಾವಿದೆಯರು ನಟಿಸಿದ್ದರು. ಒಬ್ಬರು ನಾಜ್ ಮತ್ತೊಬ್ಬರು ಪ್ರಿಯಾ ಪೇರಿರ. ಈಗ ಪ್ರಿಯಾ ಅವರು ಹೇಗಿದ್ದಾರೆ ಗೊತ್ತಾ?

ಚಂದ್ರ ಚಕೋರಿ ಸಿನಿಮಾ ಶ್ರೀಮುರಳಿ ನಾಜ್, ಹಾಗೂ ಪ್ರಿಯಾ ಮೂವರಿಗೂ ಮೊದಲ ಸಿನಿಮಾ ಆಗಿತ್ತು. ಬಿಡುಗಡೆಯಾದ ನಂತರ ಈ ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿತ್ತು ಅಂದ್ರೆ ಸುಮಾರು 500 ದಿನಗಳ ಸೂಪರ್ ಹಿಟ್ ಪ್ರದರ್ಶನ ಕಂಡಿತ್ತು. ಇಂದಿಗೂ ಕನ್ನಡದ ಆಲ್ ಟೈಮ್ ಬ್ಲಾಕ್ ಬಸ್ಟರ್ ಸಿನಿಮಾ ಲಿಸ್ಟ್ ಗೆ ಸೇರುತ್ತದೆ ಚಂದ್ರ ಚಕೋರಿ.

ಈ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಆಗಿದ್ದವು, ಈಗಲೂ ಸಹ ಜನರ ಮೆಚ್ಚಿನ ಆಲ್ಬಮ್ ಗಳಲ್ಲಿ ಚಂದ್ರ ಚಕೋರಿ ಕೂಡ ಒಂದು. ಇಬ್ಬರು ನಾಯಕಿಯರ ಪೈಕಿ ಪ್ರಿಯಾ ಅವರ ಸುಧಾ ಪಾತ್ರ ಜನರಿಗೆ ತುಂಬಾ ಹತ್ತಿರವಾಗಿತ್ತು. ಈ ಪಾತ್ರದಲ್ಲಿ ನಟಿಸಿದ್ದ ಪ್ರಿಯಾ ಅವರಿಗೆ ಇದು ಮೊದಲ ಚಿತ್ರ, ಜೊತೆಗೆ ಕೊನೆಯ ಚಿತ್ರವು ಹೌದು. ಚಂದ್ರ ಚಕೋರಿ ನಂತರ ಇವರು ಇನ್ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

ಚಂದ್ರ ಚಕೋರಿ ಸಿನಿಮಾ ಬಂದು 20 ವರ್ಷ ಆಗಿದೆ. ಬಹಳ ಗ್ಯಾಪ್ ನಂತರ ಪ್ರಿಯಾ ಅವರು ಶ್ರೀಮುರಳಿ ಅವರ ವೀಕೆಂಡ್ ವಿತ್ ರಮೇಶ್ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದದು. ಅದು ಬಿಟ್ಟರೆ ಇತ್ತೀಚೆಗೆ ಒಂದು ಇಂಟರ್ವ್ಯೂನಲ್ಲಿ ಮತ್ತೆ ಅವಕಾಶ ಸಿಕ್ಕರೆ ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆ ಇದೆ ಎಂದು ಕೂಡ ಹೇಳಿದ್ದರು. ಮದುವೆಯಾದ ನಂತರ ವಿದೇಶಕ್ಕೆ ಹೋದ ಪ್ರಿಯಾ ಅವರು ಪತಿಯ ಜೊತೆಗೆ ಅಲ್ಲೇ ಸೆಟ್ಲ್ ಆಗಿದ್ದಾರೆ.. ಅವರು ಕೂಡ ಉದ್ಯಮಿ ಆಗಿದ್ದಾರೆ.

Leave A Reply

Your email address will not be published.