Chandra Grahana: ಇಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ, ಈ ಶರದ್ ಪೂರ್ಣಿಮೆಯ ದಿನ ಗಜಕೇಸರಿ ಯೋಗ ಕೂಡ ರೂಪುಗೊಳ್ಳುತ್ತಿದೆ. ಗ್ರಹಣದ ವೇಳೆ ಕೆಲವು ವಸ್ತುಗಳನ್ನು ದಾನ ಮಾಡಿದರೆ, ಒಳ್ಳೆಯದು ಎನ್ನುತ್ತಾರೆ. ಇಂದು ಚಂದ್ರಗ್ರಹಣ ಆಗಿರುವ ಕಾರಣ. ಚಂದ್ರನಿಗೆ ಇಷ್ಟ ಆಗುವ ವಸ್ತುಗಳನ್ನು ದಾನ ಮಾಡಿದರೆ ನಿಮಗೆ ಬದುಕಿನಲ್ಲಿ ಶಾಂತಿ, ನೆಮ್ಮದಿ, ಐಶ್ವರ್ಯ, ಹಣ, ಐಶ್ವರ್ಯ ಎಲ್ಲವೂ ಲಭಿಸುತ್ತದೆ. ಆ ವಸ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಹಾಲು :- ಚಂದ್ರನಿಗೆ ಸಂಬಂಧಿಸಿದ ವಸ್ತುಗಳಲ್ಲಿ ಹಾಲು ಒಂದು ವಸ್ತು, ಚಂದ್ರಗ್ರಹಣದ ದಿನ ಹಾಲು ದಾನ ಮಾಡಿದರೆ ನಿಮ್ಮ ಜಾತಕದಲ್ಲಿ ಚಂದ್ರನ ಸ್ಥಾನ ಬಲವಾಗುತ್ತದೆ. ಚಂದ್ರನ ಕೃಪೆ ಮಾತ್ರವಲ್ಲದೆ ಲಕ್ಷ್ಮೀದೇವಿಯ ಕೃಪೆ ಕೂಡ ನಿಮಗೆ ಪ್ರಾಪ್ತಿಯಾಗುತ್ತದೆ.
ಅಕ್ಕಿ :- ಚಂದ್ರನಿಗೆ ಸಂಬಂಧಿಸಿದ ಮತ್ತೊಂದು ವಸ್ತು ಅಕ್ಕಿ, ಅಕ್ಕಿ ಅಥವಾ ಅಕ್ಕಿಯಿಂದ ತಯಾರಿಸಿದ ಪದಾರ್ಥವನ್ನು ದಾನ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸದಾ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.
ಬೆಳ್ಳಿ :- ಚಂದ್ರನಿಗೆ ಸಂಬಂಧಪಟ್ಟ ವಸ್ತುಗಳಲ್ಲಿ ಬೆಳ್ಳಿ ಕೂಡ ಒಂದು. ಈ ದಿನ ನಿಮ್ಮಿಂದ ಸಾಧ್ಯವಾದಲ್ಲಿ ಬೆಳ್ಳಿ ದಾನ ಮಾಡಿ, ಇದರಿಂದ ನಿಮ್ಮ ಬದುಕಿಗೆ ಶಕ್ತಿ, ತೀಕ್ಷ್ಣತೆ, ಬುದ್ಧಿ, ಐಶ್ವರ್ಯ, ಸಮೃದ್ಧಿ ಎಲ್ಲವನ್ನು ಪಡೆಯುತ್ತೀರಿ..
ಸಕ್ಕರೆ :- ಸಕ್ಕರೆಯನ್ನು ಚಂದ್ರಗ್ರಹಣ ಮುಗಿದ ನಂತರ ದಾನ ಮಾಡಬಹುದು. ಸಕ್ಕರೆ ದಾನ ಮಾಡಿದರೆ ಇಷ್ಟ ದೇವತೆಗಳು ಸಂತೋಷದಿಂದ ನಿಮಗೆ ಆಶೀರ್ವಾದ ಮಾಡುತ್ತಾರೆ. ಬದುಕಲ್ಲಿ ನೀವು ಬಯಸುವ ಎಲ್ಲವೂ ನಡೆಯುತ್ತದೆ, ಬದುಕಲ್ಲಿ ಸಂತೋಷ ಸಮೃದ್ಧಿ ಇರುತ್ತದೆ.