Chandragrahana Horoscope: ವರ್ಷದ ಕೊನೆಯ ಚಂದ್ರಗ್ರಹಣದ ದಿನವೇ ಇದೆ ಗಜಕೇಸರಿ ಯೋಗ, ಈ ರಾಶಿಗಳಿಗೆ ಐಶ್ವರ್ಯದ ಮಳೆ

Written by Pooja Siddaraj

Published on:

Chandragrahana Horoscope: ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸುವುದಕ್ಕೆ ಉಳಿದಿರುವುದು ಕೆಲವೇ ದಿನಗಳು, ಆಕ್ಟೊಬರ್ 28ರಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಅಂದು ರಾತ್ರಿ 11:32 ರಿಂದ ಮಧ್ಯರಾತ್ರಿ 3:36ರವರೆಗು ಚಂದ್ರಗ್ರಹಣ ಗೋಚರವಾಗಲಿದೆ. ಈ ಗ್ರಹಣ 30 ವರ್ಷಗಳ ನಂತರ ಸಂಭವಿಸುತ್ತಿದೆ, ಇದೇ ದಿನ ಗಜಕೇಸರಿ ಯೋಗ ಕೂಡ ರೂಪುಗೊಂಡಿದೆ. ಈ ಎರಡು ಕಾರಣಕ್ಕೆ ಗಜಕೇಸರಿ ಯೋಗ ಸಂಪತ್ತು, ಐಶ್ವರ್ಯ ಪಡೆಯುವ 4 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಗಜಕೇಸರಿ ಯೋಗದ ಪರಿಣಾಮ ಈ ರಾಶಿಯವರಿಗೆ ಉದ್ಯೋಗದಲ್ಲಿ ಇರುವ ಎಲ್ಲಾ ಸಮಸ್ಯೆಗಳು ಮುಕ್ತಾಯವಾಗುತ್ತದೆ. ಈ ವೇಳೆ ನೀವು ಇಷ್ಟಪಟ್ಟ ಹಾಗೆ ಸ್ಥಾನಮಾನ ಮತ್ತು ದುಡ್ಡು ಎರಡು ಕೂಡ ಸಿಗುತ್ತದೆ. ಎಲ್ಲಾ ಕೆಲಸದಲ್ಲೂ ಯಶಸ್ಸು ಸಾಧಿಸುತ್ತೀರಿ.

ಮಿಥುನ ರಾಶಿ :- ಈ ಹಿಂದೆ ಇದ್ದ ಆರೋಗ್ಯ ಸಮಸ್ಯೆಗಳಿಂದ ನಿಮಗೆ ಮುಕ್ತಿ ಸಿಗುತ್ತದೆ. ಹಾಗೆಯೇ ನಿಮ್ಮ ಮಾನಸಿಕ ಒತ್ತಡ ಕೂಡ ದೂರವಾಗುತ್ತದೆ. ಮನೆಯ ಖರ್ಚಿನ ಜೊತೆಗೆ ಹಣವನ್ನು ಉಳಿಸುತ್ತೀರಿ. ಈ ವೇಳೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿಯಾಗುತ್ತದೆ.

ಕನ್ಯಾ ರಾಶಿ :- ಈ ವೇಳೆ ಅದೃಷ್ಟ ನಿಮಗೆ ಸಾಥ್ ನೀಡುತ್ತದೆ. ಹೊಸ ಕೆಲಸ ಬೇಕು ಎಂದುಕೊಂಡಿದ್ದ ನಿಮ್ಮ ಆಸೆ ಈಡೇರುತ್ತದೆ. ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತದೆ. ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ.

ಕುಂಭ ರಾಶಿ :- ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಎಲ್ಲಾ ವಿಚಾರದಲ್ಲಿ ಕೂಡ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ನಿಮ್ಮ ಬದುಕಿನಲ್ಲಿ ಖುಷಿ ಮತ್ತು ಸಮೃದ್ಧಿ ತುಂಬಿರುತ್ತದೆ. ನಿಮ್ಮ ಉದ್ಯೋಗ ಮತ್ತು ಬ್ಯುಸಿನೆಸ್ ಎರಡರಲ್ಲೂ ಒಳ್ಳೆಯ ಯಶಸ್ಸು ಪಡೆಯುತ್ತೀರಿ..

Leave a Comment