Charitriya Ganesh: ಸೀರೆಯಲ್ಲಿ ಗೋಲ್ಡನ್ ಸ್ಟಾರ್ ಮಗಳು ಮಿಂಚಿಂಗ್! ಫೋಟೋಸ್ ವೈರಲ್

0 13

Charitriya Ganesh: ಸ್ಯಾಂಡಲ್ ವುಡ್ ನ ಚಿನ್ನದ ಹುಡುಗ ಎಂದರೆ ಅದು ಗೋಲ್ಡನ್ ಸ್ಟಾರ್ ಗಣೇಶ್. ನಟ ಗಣೇಶ್ ಅವರು ಬಹಳ ಕಷ್ಟಪಟ್ಟು ಇಂದು ಈ ಯಶಸ್ಸು ನೋಡುತ್ತಿದ್ದಾರೆ. ನಟ ಗಣೇಶ್ ಅವರು ನೆಲಮಂಗಲದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವದು. ನಟನಾಗುವ ಕನಸು ಹೊತ್ತು ಬೆಂಗಳೂರಿಗೆ ಬಂದರು. ಬೆಂಗಳೂರಿಗೆ ಬಂದ ನಂತರ ಅವರು ಪಟ್ಟ ಕಷ್ಟಗಳು ಒಂದೆರಡಲ್ಲ.

ಎಲ್ಲಾ ಕಷ್ಟಗಳು, ನೋವು, ಅವಮಾನ ಎಲ್ಲವನ್ನು ಸಹಿಸಿಕೊಂಡು ಮೊದಲಿಗೆ ಸೀರಿಯಲ್ ಗಳಲ್ಲಿ ನಟನೆ ಶುರು ಮಾಡಿ ನಂತರ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಲು ಶುರು ಮಾಡಿದರು. ನಂತರ ಚೆಲ್ಲಾಟ ಸಿನಿಮಾ ಮೂಲಕ ನಟನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಮುಂಗಾರು ಮಳೆ ಸಿನಿಮಾ ಇಂದ ಸ್ಟಾರ್ ನಟನಾದರು ಗಣೇಶ್.

ಚೆಲುವಿನ ಚಿತ್ತಾರ ಸಿನಿಮಾ ಇಂದ ಗಣೇಶ್ ಅವರಿಗೆ ಗೋಲ್ಡನ್ ಸ್ಟಾರ್ ಪಟ್ಟ ಸಿಕ್ಕಿತು. ಅಲ್ಲಿಂದ ಗಣೇಶ್ ಅವರು ಹಿಂದಿರುಗಿ ನೋಡಿದ್ದೆ ಇಲ್ಲ. ಒಂದಾದಮೇಲೊಂದು ಹಿಟ್ ಸಿನಿಮಾಗಳನ್ನು ನೀಡಿ, ಸ್ಟಾರ್ ನಟನಾದರು. ಶಿಲ್ಪಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಣೇಶ್ ಅವರಿಗೆ ಇಬ್ಬರು ಮಕ್ಳಳಿದ್ದಾರೆ. ಗಣೇಶ್ ಅವರ ಮಗಳ ಹೆಸರು ಚಾರಿತ್ರ್ಯ ಮತ್ತು ಮಗನ ಹೆಸರು ವಿಹಾನ್. ಮಕ್ಕಳ ಜೊತೆ ಬಹಳ ಜಾಲಿಯಾಗಿ ಇರುತ್ತಾರೆ ನಟ ಗಣೇಶ್.

ಗಣೇಶ್ ಅವರು ಹಾಗೂ ಅವರ ಪತ್ನಿ ಶಿಲ್ಪಾ ಅವರು ಆಗಾಗ ಮಕ್ಕಳ ಫೋಟೋಸ್ ಶೇರ್ ಮಾಡುತ್ತಾರೆ. ಇದೀಗ ಇವರ ಮಗಳು ಸೀರೆಯಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದು, ಇದನ್ನು ನೋಡಿದ ನೆಟ್ಟಿಗರು ಗಣೇಶ್ ಅವರ ಮಗಳು ಇಷ್ಟು ದೊಡ್ಡವಳಾಗಿ ಬಿಟ್ಟಿದ್ದಾಳಾ ಎಂದು ಶಾಕ್ ಆಗಿದ್ದಾರೆ. ಈ ಫೋಟೋಸ್ ಈಗ ವೈರಲ್ ಆಗುತ್ತಿದೆ.

Leave A Reply

Your email address will not be published.