ಬಿಗ್ ಬಾಸ್ ಇದು ಕನ್ನಡದ ಅತಿದೊಡ್ಡ ಮತ್ತು ಅತಿಹೆಚ್ಚು ಬೇಡಿಕೆ ಇರುವ ರಿಯಾಲಿಟಿ ಶೋ ಎಂದರೆ ತಪ್ಪಲ್ಲ. ಈ ಶೋ ಶುರುವಾಗುತ್ತೆ ಎಂದರೆ ಕನ್ನಡ ಕಿರುತೆರೆ ವೀಕ್ಷಕರು ಕಾಯುತ್ತಾ ಇರುತ್ತಾರೆ. ನಿನ್ನೆಯಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ಚಾಲನೆ ಸಿಕ್ಕಿದ್ದು, ಕಿಚ್ಚ ಸುದೀಪ್ ಅವರು ಬಹಳಷ್ಟು ಟ್ವಿಸ್ಟ್ ಗಳ ಜೊತೆಗೆ 17 ಜನ ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಿದ್ದಾರೆ. ಇಬ್ಬರು ಸ್ಪರ್ಧಿಗಳು ವೇದಿಕೆ ಇಂದಲೇ ಡೈರೆಕ್ಟ್ ಎಲಿಮಿನೇಟ್ ಆಗಿದ್ದಾರೆ.
ಈ ಬಾರಿ ವೀಕ್ಷಕರು ಆಯ್ಕೆ ಮಾಡಿ ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಿದ್ದು, 6 ಸ್ಪರ್ಧಿಗಳು ವೇಟಿಂಗ್ ಲಿಸ್ಟ್ ನಲ್ಲಿದ್ದರು, ಇವರನ್ನು ಬಿಗ್ ಬಾಸ್ ಮನೆಗೆ ಕಳಿಸಲಾಗಿದ್ದು, ಒಂದು ವಾರ ಸಮಯಾವಕಾಶ ನೀಡಲಾಗಿದೆ, ಅಷ್ಟರ ಒಳಗೆ ಸ್ಪರ್ಧಿಗಳು ಬಿಗ್ ಬಾಸ್ ಕೊಡುವ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿ, ತಮ್ಮನ್ನು ತಾವು ಸಮರ್ಥರು ಎಂದು ಪ್ರೂವ್ ಮಾಡಿಕೊಂಡರೆ ಮನೆಯೊಳಗೆ ಉಳಿದುಕೊಳ್ಳುತ್ತಾರೆ. ಈ ಸೀಸನ್ ನಲ್ಲಿ ಇದೊಂದು ಹೊಸ ಪ್ರಯತ್ನ ಆಗಿದ್ದು, ವೀಕ್ಷಕರಿಗು ಆಸಕ್ತಿದಾಯಕ ಅನ್ನಿಸಿದೆ.
6 ಜನ ಸ್ಪರ್ಧಿಗಳಿಗೆ ಈ ಮೊದಲ ವಾರ ಅತ್ಯಂತ ಮುಖ್ಯವಾದ ಘಟ್ಟ, ಈ ಒಂದು ವಾರದಲ್ಲಿ ಅವರನ್ನು ಅವರು ಹೇಗೆ ಪ್ರೂವ್ ಮಾಡಿಕೊಳ್ಳುತ್ತಾರೆ ಎನ್ನುವುದರ ಮೇಲೆ ಉಳಿದುಕೊಳ್ಳುತ್ತಾರೆ. ಕಲರ್ಸ್ ಕನ್ನಡ ಚಾನೆಲ್ ಶೇರ್ ಮಾಡಿರುವ ಪ್ರೊಮೋ ನೋಡಿದರೆ ಮೊದಲ ದಿನವೇ ಬಿಗ್ ಬಾಸ್ ಮನೆಗೆ ಎಂ.ಎಲ್.ಎ ಪ್ರದೀಪ್ ಈಶ್ವರ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಎಲ್ಲಾ ಸ್ಪರ್ಧಿಗಳು ಎಂಟ್ರಿ ಕೊಟ್ಟಿರುವಾಗ ವೀಕ್ಷಕರಲ್ಲಿ ಮೂಡಿರುವ ಒಂದು ಪ್ರಶ್ನೆ ಚಾರ್ಲಿ ಇನ್ನು ಎಂಟ್ರಿ ಕೊಟ್ಟಿಲ್ಲ ಎನ್ನುವುದಾಗಿದೆ.
ಹೌದು, ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದ ದಿನವೇ ಚಾರ್ಲಿ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾಳೆ ಎಂದು ಮಾಹಿತಿ ಸಿಕ್ಕಿತ್ತು. ಆದರೆ ಗ್ರ್ಯಾಂಡ್ ಓಪನಿಂಗ್ ಎಪಿಸೋಡ್ ನಲ್ಲಿ ಚಾರ್ಲಿ ಮನೆಯೊಳಗೆ ಹೋಗಿಲ್ಲ, ಚಾರ್ಲಿ ಸಿನಿಮಾದಲ್ಲಿ ನಟಿಸಿದ್ದ ಸಂಗೀತ ಶೃಂಗೇರಿ ಅವರು ವೇಟಿಂಗ್ ಲಿಸ್ಟ್ ನಲ್ಲಿದ್ದು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ, ಸಂಗೀತ ಅವರು ವೇದಿಕೆ ಮೇಲೆ ಬಂದಾಗಲೇ ಸುದೀಪ್ ಅವರು ಕೂಡ ಮತ್ತೊಬ್ಬರು ನಿಮ್ಮ ಜೊತೆಗೆ ಬರುತ್ತಾರೆ ಎಂದಾಗ ಸಂಗೀತ ಅವರು ಚಾರ್ಲಿ ಎಂದಿದ್ದರು.
ಚಾರ್ಲಿಯನ್ನು ನೀವೇ ಕರೆಯಿರಿ ಎಂದು ಸುದೀಪ್ ಅವರು ಹೇಳಿದಾಗ, ಸಂಗೀತ ಅವರು ಚಾರ್ಲಿ ಚಾರ್ಲಿ ಎಂದು ಎಷ್ಟು ಸಲ ಕರೆದರು, ಟ್ರೀಟ್ ತಗೊ ಎಂದು ಹೇಳಿದರು ಕೂಡ ಚಾರ್ಲಿ ಬರಲೇ ಇಲ್ಲ. ಆಗ ಸುದೀಪ್ ಅವರು ಚಾರ್ಲಿಗೆ ನೀವು ಕರೆದಿದ್ದು ಕೇಳಿಸಿಲ್ಲ ಅನ್ಸುತ್ತೆ ಎಂದಿದ್ದರು. ಮತ್ತೆ ಚಾರ್ಲಿ ವಿಷಯ ಬಂದಾಗ, ನೀವು ಹೋಗಿ ಚಾರ್ಲಿ ಆಮೇಲೆ ಬರ್ತಾಳೆ, ಪರ್ಮಿಶನ್ ತಗೊಳೋಕೆ ಹೋಗಿರ್ಬೇಕು, ನಾರ್ತ್ ಇಂಡಿಯಾ ಇಂದ ಬರುತ್ತಾಳೆ ಎಂದು ಹೇಳಿದರು.
ಕೊನೆಯ ಸ್ಪರ್ಧಿಯಾಗಿ ಆದರೂ ಚಾರ್ಲಿ ಬಿಗ್ ಬಾಸ್ ಮನೆಯೊಳಗೆ ಹೋಗಬಹುದು ಎಂದು ವೀಕ್ಷಕರು ನಿರೀಕ್ಷೆ ಮಾಡಿದ್ದರು, ಆದರೆ ಗ್ರ್ಯಾಂಡ್ ಓಪನಿಂಗ್ ಎಪಿಸೋಡ್ ಮುಗಿದರು ಚಾರ್ಲಿ ಬಿಗ್ ಬಾಸ್ ಮನೆಯೊಳಹೆ ಹೋಗದೆ ಇದ್ದದ್ದು ವೀಕ್ಷಕರಿಗೆ ಗೊಂದಲಮಯವಾಗಿತ್ತು, ಆದರೆ ಸುದೀಪ್ ಅವರು ಹೇಳಿರುವ ಮಾತಿನ ಪ್ರಕಾರ ಚಾರ್ಲಿ ಶೀಘ್ರದಲ್ಲೇ ಬರಲಿದ್ದು, ವೀಕ್ಷಕರು ಸ್ವಲ್ಪ ಸಮಯ ಕಾಯಬೇಕಿದೆ.