Charulatha: ಓ ಮಲ್ಲಿಗೆಯ ಸುಂದರಿ ಚಾರುಲತಾ ಅವರಿಗೆ ಇದೇನಾಯ್ತು?

0 15

Charulatha: 90ರ ದಶಕದಲ್ಲಿ ಕನ್ನಡ ಸಿನಿಪ್ರಿಯರ ಮೆಚ್ಚಿನ ನಟಿಯರಲ್ಲಿ ಒಬ್ಬರು ಚಾರುಲತಾ, ಅವರ ಮೊದಲನೆಯ ಸಿನಿಮಾ ಓ ಮಲ್ಲಿಗೆ. 90ರ ದಶಕದಲ್ಲಿ ಸುರಸುಂದರಾಂಗ ಎಂಬ ಚಿತ್ರದಲ್ಲಿ ಚಾರುಲತಾ ಅವರು ರಮೇಶ್ ಅರವಿಂದ್ ಅವರ ಜೊತೆ ನಾಯಕಿಯಾಗಿ ಅಭಿನಯಿಸಿದ್ದರು. ಆ ಸಿನಿಮಾ ಇವತ್ತಿಗೂ ಎವರ್ಗ್ರೀನ್ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಅಭಿನಯಿಸಿದ್ದ ಚಾರುಲತಾ ಅವರು ಬ್ಯೂಟಿಗೆ ಮತ್ತು ಈ ಸಿನಿಮಾಗೆ ಅಪಾರ ಜನರ ಪ್ರೀತಿ ಪಡೆದಿದ್ದರು. ಚಾರುಲತಾ ಅವರು ಮೂಲತಃ ಪಂಜಾಬ್ ನವರು.

ಚಾರುಲತಾ ಅವರ ನಿಜವಾಕ್ರ ಹೆಸರು ಸೋನಿಯಾ, ಚಿತ್ರರಂಗಕ್ಕೆ ಬರುವ ಮೊದಲೇ ಮಾಡೆಲ್ ಆಗಿದ್ದರು. ಕನ್ನಡ ಚಿತ್ರವಲ್ಲದೆ ಮಲಯಾಳಂ ಅನೇಕ ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಚಾರುಲತಾ ಅಲಿಯಾಸ್ ಸೋನಿಯಾ ಹಾಗೆ ಅನೇಕ ಜಾಹೀರಾತುಗಳನ್ನು ಮಾಡಿ ಹೆಸರುಗಳಿಸಿದ್ದರು. ಚಾರುಲತಾ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಅವಕಾಶ ನೀಡಿದ ನಿರ್ದೇಶಕ ವಿ ಮನೋಹರ್. ವಿ.ಮನೋಹರ್ ಅವರು ನಿರ್ದೇಶನ ಮಾಡಿದ ಮೊದಲ ಚಿತ್ರ ಓ ಮಲ್ಲಿಗೆ ಸಿನಿಮಾದಲ್ಲಿ ಅಭಿನಯಿಸಿದ್ದರು ಚಾರುಲತಾ.

ಆ ಸಿನಿಮಾದ ಮೂಲಕ ಅವರ ಹೆಸರು ಚಾರುಲತಾ ಎಂದು ಬದಲಾಗಿತ್ತು. ಓ ಮಲ್ಲಿಗೆ ಚಿತ್ರ ಸೂಪರ್ ಹಿಟ್ ಹಾಗೂ ಚಾರುಲತಾ ರವರಿಗೆ ಬಹು ಬೇಡಿಕೆಗಳು ಶುರುವಾಯಿತು. ಆನಂತರದಲ್ಲಿ ಚಾರುಲತಾ ಅವರು ಶಿವರಾಜ್ ಕುಮಾರ್ ಅವರೊಂದಿಗೆ ಜೋಡಿಹಕ್ಕಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದ ಮೂಲಕ ಮತ್ತಷ್ಟು ಚಾರುಲತಾ ಅವರು ಫೇಮಸ್ ಆದರು, ಅವರು ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ್ದು ಚಿತ್ರದ ಹೆಸರುಗಳು ಹೀಗಿವೆ ಜಗತ್ ಕಿಲಾಡಿ, ಮಾತಿನ ಮಲ್ಲ, ಹಬ್ಬ, ಸುವ್ವಿ ಸುವ್ವಲಾಲಿ, ಅಂಡರ್ವರ್ಲ್ಡ್ ಸೇರಿದಂತೆ ಮುಂತಾದ ಅನೇಕ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ.

ಹಾಗೆ ಇವರು ಕೂಡ ಟಾಪ್ ಹೀರೋಯಿನ್ ಪಟ್ಟವನ್ನು ಗಳಿಸಿದ್ದರು. 23 ಚಿತ್ರ ದಲ್ಲಿ ಅಭಿನಯಿಸಿದ್ದು ಅನೇಕ ಕನ್ನಡ ಚಿತ್ರರಂಗದ ಗಳೊಂದಿಗೆ ಅಭಿನಯಿಸಿದ್ದಾರೆ. ಶಿವರಾಜ್ಕುಮಾರ್, ಶಿಕುಮಾರ್, ದೇವರಾಜ್ ನವರಸ ನಾಯಕ ಜಗ್ಗೇಶ್, ಕುಮಾರ್ ಗೋವಿಂದ ಹಾಗೆಯೇ ಹಲವು ನಟರ ಜೊತೆ ಅಭಿನಯಿಸಿದ್ದು, ಚಾರುಲತಾ ಅವರು ಕನ್ನಡ ಚಿತ್ರರಂಗವಲ್ಲದೆ ತಮಿಳು ತೆಲುಗು ಹಾಗೆ ಎಲ್ಲ ಚಿತ್ರರಂಗಕ್ಕೂ ಬಹುಬೇಡಿಕೆಯ ನಟಿಯಾಗಿದ್ದರು . ಮದುವೆ ನಂತರ ಚಿತ್ರರಂಗದಿಂದ ದೂರ ಉಳಿದ ಚಾರುಲತಾ ಅವರು ಕೊನೆಯದಾಗಿ ನಟಿಸಿದ್ದು ದರ್ಶನ್ ಅವರ ಚಕ್ರವರ್ತಿ ಸಿನಿಮಾದಲ್ಲಿ.

ಈಗ ಇವರು ನಟಿಸುತ್ತಿರುವುದು ಕಡಿಮೆಯೇ, ಆದರೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಚಾರುಲತಾ ಅವರು ಅನೇಕ ರೀಲ್ಸ್ ಶೇರ್ ಮಾಡುತ್ತಾರೆ, ಮೊದಲಿನ ಹಾಗಿರದೇ ಬಹಳ ವೀಕ್ ಆಗಿ ಕಾಣುತ್ತಾರೆ, ಚಾರುಲತಾ ಅವರನ್ನು ನೋಡಿದ ಅಭಿಮಾನಿಗಳು ಇವರಿಗೆ ಇದೇನಾಯ್ತು ಯಾಕೆ ಹೀಗಾಗಿದ್ದಾರೆ ಎಂದು ಶಾಕ್ ಆಗಿದ್ದಾರೆ.

Leave A Reply

Your email address will not be published.