Chaya Singh: ಅಮೃತಧಾರೆ ಧಾರವಾಹಿ ಮೂಲಕ ಮನೆಮಾತಾಗಿರುವ ನಟಿ ಛಾಯಾ ಸಿಂಗ್ ಅವರ ಗಂಡ ಯಾರು ಗೊತ್ತಾ?

0 26

Chaya Singh: ಕಿರುತೆರೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಧಾರವಾಹಿಗಳಲ್ಲಿ ಒಂದು ಅಮೃತಧಾರೆ. ಈ ಧಾರವಾಹಿಯಲ್ಲಿ ನಟ ರಾಜೇಶ ನಟರಂಗ ನಾಯಕ ಗೌತಮ್ ಪಾತ್ರದಲ್ಲಿ ನಟಿ ಛಾಯಾ ಸಿಂಗ್ ನಾಯಕಿ ಭೂಮಿಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರಿಗೆ ಧಾರವಾಹಿಯಲ್ಲಿ ಬಹಳ ಲೇಟ್ ಆಗಿ ಮದುವೆ ಆಗುತ್ತದೆ. ಇಬ್ಬರಿಗೂ ನಾನಾ ಕಾರಣಕ್ಕೆ ಮದುವೆ ಆಗಿರುವುದಿಲ್ಲ. ವಿಧಿ ಎನ್ನುವ ಹಾಗೆ ಇಬ್ಬರ ಬಂಧ ಬೆಸೆಯುತ್ತದೆ.

ಈ ರೀತಿ ಗೌತಮ್ ಭೂಮಿಕಾ ಮದುವೆ ಆಗಿದೆ. ಮದುವೆಗಿಂತ ಮೊದಲು, ಮದುವೆಯಾದ ನಂತರ ಇವರಿಬ್ಬರ ಸಣ್ಣ ತಮಾಷೆಯ ಜಗಳಗಳು, ಸ್ನೇಹ ಇದೆಲ್ಲವು ಜನರಿಗೆ ಇಷ್ಟವಾಗಿದೆ. ಈ ಧಾರಾವಾಹಿ ಮೂಲಕ ನಟಿ ಛಾಯಾ ಸಿಂಗ್ ಅವರು ಕನ್ನಡ ಕಿರುತೆರೆಗೆ ಬಹಳ ವರ್ಷಗಳ ನಂತರ ಕಂಬ್ಯಾಕ್ ಮಾಡಿದ್ದಾರೆ. ಮೂಲತಃ ಬೆಂಗಳೂರಿನವರೇ ಆದ ಛಾಯಾ ಸಿಂಗ್ ಅವರ ತಂದೆ ಗೋಪಾಲ್ ಸಿಂಗ್ ಮತ್ತು ತಾಯಿ ಚಮನ್ ಲತಾ..

ಇಲ್ಲಿಯೇ ಹುಟ್ಟಿ ಬೆಳೆದು ಮುಸುಕು ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು, ಹಾಗೆಯೇ ಹಲವು ಧಾರವಾಹಿಗಳಲ್ಲಿ ಕೂಡ ನಟಿಸಿದ್ದಾರೆ. ಛಾಯಾ ಸಿಂಗ್ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಭೋಜ ಪುರಿ ಭಾಷೆಯ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಆದರೆ ಇವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದ್ದು ಕನ್ನಡದಲ್ಲಿ. ಸಿನಿಮಾ, ಧಾರವಾಹಿ ಮಾತ್ರವಲ್ಲದೆ, ಕಿರುತೆರೆಯಲ್ಲಿ ರಿಯಾಲಿಟಿ ಶೋ ಜಡ್ಜ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.

ಇದೀಗ ಜೀಕನ್ನಡ ವಾಹಿನಿಯ ಅಮೃತಧಾರೆ ಧಾರವಾಹಿ ಮೂಲಕ ಮನೆಮಾತಾಗಿದ್ದಾರೆ. ಇದು ಛಾಯಾ ಸಿಂಗ್ ಅವರ ವೃತ್ತಿ ಜೀವನದ ವಿಚಾರ ಆದರೆ ಅವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ, ಇವರು ತಮಿಳು ನಟ ಕೃಷ್ಣ ಅವರೊಡನೆ ಮದುವೆಯಾಗಿದ್ದಾರೆ. ಈ ಜೋಡಿಯದ್ದು ಲವ್ ಮ್ಯಾರೇಜ್, ಸಿನಿಮಾ ಶೂಟಿಂಗ್ ವೇಳೆ ಭೇಟಿಯಾಗಿ, ಪ್ರೀತಿ ಶುರುವಾಗಿ, ಇಬ್ಬರು ತಮ್ಮ ಕುಟುಂಬದವರನ್ನು ಒಪ್ಪಿಸಿ 2012 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವೆ ನಂತರ ಕೂಡ ಇವರಿಬ್ಬರು ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಛಾಯಾ ಸಿಂಗ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಗಂಡನ ಜೊತೆಗಿರುವ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅವುಗಳನ್ನು ಮೆಚ್ಚಿಕೊಂಡ ಅಭಿಮಾನಿಗಳು ಈ ಜೋಡಿ ಹೀಗೆ ಇರಲಿ ಎಂದು ವಿಶ್ ಮಾಡುತ್ತಾರೆ.

Leave A Reply

Your email address will not be published.