Darshan: ಬಿಗ್ ಬಾಸ್ ಮನೆಗೆ ಎರಡು ವಾರಗಳ ಹಿಂದೆ ಸ್ಪರ್ಧಿಯಾಗಿ ಬಂದವರು ವರ್ತೂರ್ ಸಂತೋಷ್. ಎರಡು ವಾರಗಳಿಂದ ತಮ್ಮದೇ ಶೈಲಿಯಲ್ಲಿ ಆಡುತ್ತಾ ಹೋಗುತ್ತಿದ್ದಾರೆ. ಈ ವಾರ ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ವಾರ್ತೆ ಸಂತೋಷ್ ಎಂದು ಹೆಸರು ಕೊಟ್ಟು ತಮಾಷೆ ಕೂಡ ಮಾಡಿದ್ದರು. ಆದರೆ ನಿನ್ನೆ ಮಧ್ಯರಾತ್ರಿ ವರ್ತೂರ್ ಸಂತೋಷ್ ಅವರು ಅರೆಸ್ಟ್ ಆಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ವರ್ತೂರ್ ಸಂತೋಷ್ ಅವರನ್ನು ಫಾರೆಸ್ಟ್ ಡಿಪಾರ್ಟ್ಮೆಂಟ್ ಆಫೀಸರ್ ಗಳು ಬಿಗ್ ಬಾಸ್ ಮನೆಗೆ ಹೋಗಿ ಅರೆಸ್ಟ್ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅಧಿಕಾರಿಗಳು ಸಂತೋಷ್ ಅವರನ್ನು ಅರೆಸ್ಟ್ ಮಾಡಿರುವುದು ಅವರು ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದಾರೆ ಎನ್ನುವ ಕಾರಣಕ್ಕಾಗಿ. ವರ್ತೂರ್ ಸಂತೋಷ್ ಅವರನ್ನು ಈ ಕಾರಣಕ್ಕೆ ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಆಕ್ಟೊಬರ್ 22ರ ಮಧ್ಯರಾತ್ರಿ ವರ್ತೂರ್ ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ. ವರ್ತೂರ್ ಸಂತೋಷ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಇದಾದ ಬಳಿಕ ಈಗ ನಟ ದರ್ಶನ್ ಹಾಗೂ ವಿನಯ್ ಗುರುಜಿ ಈ ಇಬ್ಬರ ಮೇಲೆ ದೂರು ನೀಡಲಾಗಿದೆ. ರಾಜ್ಯದ ಸರ್ವ ಸಂಘಟನೆಗಳ ಅಧ್ಯಕ್ಷರಾದ ಶಿವಕುಮಾರ್ ಎನ್ನುವವರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ನಟ ದರ್ಶನ್ ಅವರ ಹತ್ತಿರ ಇರುವ ಚಿನ್ನದ ಚೈನ್ ನಲ್ಲಿ ಹುಲಿಯ ಉಗುರು ಇದೆ, ಇನ್ನು ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತುಕೊಳ್ಳುತ್ತಾರೆ. ಹಾಗಾಗಿ ಇವರಿಬ್ಬರನ್ನು ಕರೆಸಿ, ವಿಚಾರಣೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಶಿವಕುಮಾರ್ ಅವರು ದೂರು ನೀಡಿದ್ದಾರೆ. ವರ್ತೂರ್ ಸಂತೋಷ್ ನಂತರ ಈ ವಿಚಾರ ಭಾರಿ ಚರ್ಚೆ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.