Cooking Tips: ಅಡುಗೆ ಮಾಡುವಾಗ ಆಹಾರ ಸೀದು ಹೋದರೆ, ಸರಿಪಡಿಸುವುದಕ್ಕೆ ಈ ರೀತಿ ಮಾಡಿ

0 21

Cooking Tips: ಅಡುಗೆ ಮಾಡುವಾಗ ಕೆಲವು ಸಾರಿ ಎಷ್ಟೇ ಹುಷಾರಾಗಿ ಇದ್ದರೂ ಕೂಡ ತಳ ಹಿಡಿಯುತ್ತದೆ, ಸೀದು ಹೋಗುತ್ತದೆ. ಈ ರೀತಿ ಆದಾಗ ಆಹಾರದ ರುಚಿಯೇ ಕಳೆದು ಹೋಗುತ್ತದೆ. ಒಂದು ವೇಳೆ ನಿಮಗೂ ಈ ರೀತಿ ಆದರೆ, ಇಂದು ನಾವು ತಿಳಿಸುವ ಕೆಲವು ಟಿಪ್ಸ್ ಫಾಲೋ ಮಾಡುವ ಮೂಲಕ, ಆಹಾರವನ್ನು ಸರಿಪಡಿಸಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಹಾಲು :- ನೀವು ಮಾಡಿದ ಆಹಾರ ಸೀದು ಹೋಗಿದ್ದಾಗ, ಬೇರೆ ಒಂದು ಪಾತ್ರೆಗೆ ಅದನ್ನು ಹಾಕಿ, ಸ್ವಲ್ಪ ಕೆನೆ ಇರುವ ಹಾಲನ್ನು ಹಾಕಿ, ಸ್ವಲ್ಪ ಬಿಸಿ ಮಾಡಿ. ಈ ರೀತಿ ಮಾಡುವುದರಿಂದ ಸೀದು ಹೋದ ಆಹಾರವನ್ನು ಸರಿ ಮಾಡಬಹುದು.

ಮೊಸರು :- ತರಕಾರಿ ಬಳಸಿ ತಯಾರು ಮಾಡಿರುವ ಯಾವುದೇ ಆಹಾರ ಸೀದು ಹೋದರೆ, ಕಹಿ ಜಾಸ್ತಿ ಆಗಿಬಿಡುತ್ತದೆ. ಹಾಗಾಗಿ ನೀವು ಆಹಾರವನ್ನು ಸೀದು ಹೋದ ಪಾತ್ರೆಯಿಂದ ತೆಗೆದು, ಬೇರೆ ಒಂದು ಪಾತ್ರೆಗೆ ಹಾಕಿ. ಬಳಿಕ ಸ್ವಲ್ಪ ಮೊಸರನ್ನು ಪಾತ್ರೆಗೆ ಸೇರಿಸಿ, ನಂತರ ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದ ಸೀದು ಹೋಗುವ ಆಹಾರ ಸರಿಹೋಗುತ್ತದೆ.

ತುಪ್ಪ :- ಕೆಲವು ರೀತಿಯ ಆಹಾರ ಪದಾರ್ಥಕ್ಕೆ ಹಾಲನ್ನಾಗಲಿ, ಮೊಸರನ್ನಾಗಲಿ ಸೇರಿಸಿದರೆ ಸರಿಯಾಗಿ ಇರುವುದಿಲ್ಲ. ಈ ರೀತಿ ಆದಾಗ ಈ ಎರಡನ್ನು ಬಿಟ್ಟು, ಆಹಾರವನ್ನು ಬೇರೆ ಪಾತ್ರೆಗೆ ಹಾಕಿ, ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದ ಆಹಾರ ಸರಿ ಹೋಗುತ್ತದೆ.

ನಿಂಬೆ ರಸ ಅಥವಾ ವಿನೆಗರ್ :- ಆಹಾರ ಪದಾರ್ಥ ಸೀದು ಹೋದಾಗ, ಅದರ ಸುಟ್ಟ ವಾಸನೆಯನ್ನು ಕರೀಂರ್ ಮಾಡಬೇಕು ಎಂದರೆ, ಆಹಾರಕ್ಕೆ ನಿಂಬೆ ರಸ ಅಥವಾ ವಿನೆಗರ್ ಸೇರಿಸಿ ಮಿಕ್ಸ್ ಮಾಡಿ. ಇದರಿಂದ ಸುಟ್ಟ ವಾಸನೆ ಕಡಿಮೆ ಮಾಡುತ್ತದೆ.

ಕೆನೆ :- ಮನೆಯಲ್ಲಿ ಹಾಲು ಇದ್ದರೆ, ಅದರ ಜೊತೆಗೆ ಕೆನೆ ಇರುತ್ತದೆ. ಅಥವಾ ಹೊರಗಡೆ ಕೂಡ ಸುಲಭವಾಗಿ ಕೆನೆ ಸಿಗುತ್ತದೆ. ಆಹಾರ ಪದಾರ್ಥದಲ್ಲಿ ಕೆಳಗೆ ತಳ ಹಿಡಿದಿರುವ ಪದಾರ್ಥವನ್ನು ತೆಗೆದು, ಮೇಲಿನ ಚೆನ್ನಾಗಿರುವ ಪದಾರ್ಥಕ್ಕೆ ಕೆನೆ ಸೇರಿಸಿ ಮಿಕ್ಸ್ ಮಾಡಿ ಬಳಿಕ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಇದರಿಂದ ಆಹಾರ ವೇಸ್ಟ್ ಆಗೋದಿಲ್ಲ.

Leave A Reply

Your email address will not be published.