Kannada News ,Latest Breaking News

ಸೌತೆಕಾಯಿ ತಿನ್ನುವ ಮುನ್ನ ಯೋಚಿಸಿ ಯಾಕೆಂದ್ರೆ!

0 9,306

Get real time updates directly on you device, subscribe now.

Cucumber Benifits :ಎಲ್ಲರ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವಂತಹದು ಸೌತೆಕಾಯಿ. ಸೌತೆಕಾಯಿ ತಿನ್ನುವುದಕ್ಕೆ ಅಷ್ಟೇ ರುಚಿಯಲ್ಲ ಸಾಮಾನ್ಯ ಕಾಯಿಲೆಗಳಿಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.ಇದನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಸೌತೆಕಾಯಿ ದೇಹಕ್ಕೆ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುತ್ತದೆ.

ಔಷಧಿ ಗುಣವನ್ನು ಹೊಂದಿರುವ ಹಣ್ಣು ಬೇಸಿಗೆಕಾಲದಲ್ಲಿ ಈ ಹಣ್ಣಿಗೆ ಫುಲ್ ಡಿಮ್ಯಾಂಡ್!

ಸೌತೆಕಾಯಿಯಲ್ಲಿ ಶೇಕಡ 95ರಷ್ಟು ನೀರಿನ ಅಂಶವನ್ನು ಹೊಂದಿದ್ದು ನಿಮ್ಮ ದೇಹದಲ್ಲಿ ಹೆಚ್ಚು ನೀರಿನ ಅಂಶ ಇರುವ ಹಾಗೆ ನೋಡಿಕೊಳ್ಳುತ್ತದೆ. ಸೌತೆಕಾಯಿಯಲ್ಲಿ ಪೌಷ್ಟಿಕಾಂಶ ಹೆಚ್ಚಾಗಿರುತ್ತವೆ. ಅಲ್ಲದೆ ಫೈಬರ್ ಪೊಟ್ಯಾಶಿಯಂ, ಮೆಗ್ನೀಷಿಯಂ ಕೂಡ ಹೆಚ್ಚಾಗಿರುತ್ತದೆ. ಎಲ್ಲ ಪೋಷ್ಟಿಕಾಂಶಗಳು ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಸೌತೆಕಾಯಿ ನೈಸರ್ಗಿಕವಾಗಿ ನಿಮ್ಮ ಚರ್ಮವನ್ನು ತಕ್ಷಣ ಪುನರ್ ಚೇತನಗೊಳಿಸುತ್ತದೆ. ಸೌತೆಕಾಯಿಯಿಂದ ಚರ್ಮಕ್ಕೆ ಹೆಚ್ಚು ಫ್ರೆಶ್ ನೆಸ್ ಬರುತ್ತದೆ. ಹೀಗಾಗಿ ನಿಮ್ಮದು ಒಣಗಿದ ಚರ್ಮವಾಗಿದ್ದರೆ ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿದರೆ ನೀವು ಫ್ರೆಶ್ ಆಗಿ ಕಾಣಿಸುತ್ತಿರ. ಸೌತೆಕಾಯಿಯಲ್ಲಿ ಅಧಿಕ ನೀರಿನ ಅಂಶ ಇದ್ದು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ.ಇದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಸೌತೆಕಾಯಿಯನ್ನು ಸಲಾಡ್ ರೂಪದಲ್ಲಿ ಬಳಸಲಾಗುತ್ತದೆ. ಸೌತೆಕಾಯಿಯು ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ. ಕೀಲುಗಳ ಮತ್ತು ಸಂದುಗಳ ನೋವಿನಿಂದ ಮುಕ್ತಿಯನ್ನು ನೀಡುತ್ತದೆ. ಸೌತೆಕಾಯಿಯು ನಿಶಕ್ತಿಯನ್ನು ನಿವಾರಿಸುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಒತ್ತಡ ಇದ್ದಾಗ ಒತ್ತಡದಿಂದ ತಲೆನೋವು ಬರುತ್ತದೆ.ಇದನ್ನು ತಡೆಯುವುದಕ್ಕೆ ಮನೆಯಲ್ಲಿ ತಯಾರಿಸಿರುವ ಸೌತೆಕಾಯಿ ಖಾದ್ಯವನ್ನು ಸೇವಿಸಿ.

ಔಷಧಿ ಗುಣವನ್ನು ಹೊಂದಿರುವ ಹಣ್ಣು ಬೇಸಿಗೆಕಾಲದಲ್ಲಿ ಈ ಹಣ್ಣಿಗೆ ಫುಲ್ ಡಿಮ್ಯಾಂಡ್!

ತುಂಬಾ ಜನರು ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಸೌತೆಕಾಯಿ ಜ್ಯೂಸ್ ಕುಡಿದು ಅಭ್ಯಾಸ ಇರುತ್ತದೆ. ಆದರೆ ಅತಿಯಾಗಿ ಕುಡಿದರೆ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಸೌತೆಕಾಯಿ ದೇಹದಲ್ಲಿರುವ ಪಿತ್ತವನ್ನು ಕಡಿಮೆಮಾಡುತ್ತದೆ ಮತ್ತು ದೇಹದಲ್ಲಿರುವ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಬೇಸಿಗೆ ದಿನದಲ್ಲಿ ಹೆಚ್ಚಾಗಿ ಬಳಕೆಮಾಡುವ ಸೌತೆಕಾಯಿ ದೇಹದಲ್ಲಿ ಉಷ್ಣಾಂಶವನ್ನು ತಗ್ಗಿಸುವುದು ಅಲ್ಲದೆ ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ಈ ರೀತಿಯಾಗಿ ಸೌತೆಕಾಯಿಯು ಆರೋಗ್ಯಕರ ಗುಣವನ್ನು ಹೊಂದಿದೆ.

Get real time updates directly on you device, subscribe now.

Leave a comment