ದಿನವಿಡೀ ನಾವೇನು ಡ್ರಗ್ಸ್ ತಗೊಳ್ಳಲ್ಲ: ಬಾಲಿವುಡ್ ಉಳಿಸಿ ಎಂದು ಯೋಗಿ ಮೊರೆ ಹೋದ ಸುನೀಲ್ ಶೆಟ್ಟಿ

0
47

ಬಾಲಿವುಡ್​(Bollywood) ನ ಹಿರಿಯ ನಟ ಸುನೀಲ್ ಶೆಟ್ಟಿ(Sunil Shetty) ಇತ್ತೀಚಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​(Yogi Adityanath) ಅವರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ಅವರು ಯೋಗಿ ಆದಿತ್ಯ ನಾಥ್ ಅವರ ಬಳಿ, ಪ್ರಸ್ತುತ ಹಿಂದಿ ಚಿತ್ರರಂಗದ ಪರಿಸ್ಥಿತಿಯ ಕುರಿತಾಗಿ ಚರ್ಚೆಯನ್ನು ಮಾಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಬಾಲಿವುಡ್ ನ ದೊಡ್ಡ ಸಿನಿಮಾಗಳ ಬಹಿಷ್ಕಾರಕ್ಕೆ ಕರೆ ಕೊಟ್ಟಿದ್ದ ವಿಚಾರವಾಗಿಯೂ ಮಾತನಾಡಿದ್ದಾರೆ ಎನ್ನಲಾಗಿದೆ. ಸುನೀಲ್ ಶೆಟ್ಟಿ ಅವರು ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದ ವಿಚಾರ ಈಗ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆದಿದೆ.

ಶೀಘ್ರದಲ್ಲೇ ತೆರೆಗೆ ಬರಲಿರುವ ಶಾರುಖ್​ ಖಾನ್​(Shah Rukh Khan) ನಟನೆಯ ಪಠಾಣ್ ಸಿನಿಮಾ, ಆಮಿರ್​ ಖಾನ್​(Amir Khan) ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಸೇರಿದಂತೆ ಹಲವು ಸಿನಿಮಾಗಳ ಬಹಿಷ್ಕಾರಕ್ಕೆ ಕರೆ ನೀಡಿ, ಬಾಲಿವುಡ್ ಗೆ ದೊಡ್ಡ ಪೆಟ್ಟನ್ನು ನೀಡಲು ಪ್ರಯತ್ನವನ್ನು ಮಾಡಲಾಗಿದೆ ಎಂದಿರುವ ಸುನೀಲ್ ಶೆಟ್ಟಿ ಅವರು ಯೋಗಿ ಅವರ ಬಳಿ ಈ ವಿಚಾರಕ್ಕೆ ಸಹಾಯವನ್ನು ಕೇಳಿದ್ದಾರೆ. ಈ ವೇಳೆ ನಟ , ನೀವು ಹೇಳಿದರೆ ಬಾಯ್ಕಾಟ್​ ಬಾಲಿವುಡ್​ ಎನ್ನುವ ಟ್ರೆಂಡ್ ಕೊನೆಯಾಗುತ್ತದೆ ಎನ್ನುವ ಮಾತು ಹೇಳಿದ್ದಾರೆ ಎನ್ನಲಾಗಿದೆ.

ಸುನೀಲ್ ಶೆಟ್ಟಿ ಅವರು ಈ ವೇಳೆ ಬಾಲಿವುಡ್ ಗೆ ಅಂಟಿರುವ ಡ್ರ ಗ್ಸ್​ ಎನ್ನುವ ಕಪ್ಪು ಚುಕ್ಕಿಯ ಬಗ್ಗೆಯೂ ಮಾತನಾಡಿದ್ದಾರೆ. ಸುನೀಲ್ ಶೆಟ್ಟಿ ಮಾತ್ರವೇ ಅಲ್ಲದೇ ಬಾಲಿವುಡ್ ನಟ ಜಾಕಿ ಶ್ರಾಫ್ , ಕೈಲಾಶ್ ಖೇರ್, ಗಾಯಕ ಸೋನು ನಿಗಮ್ ಅವರು ಸಹಾ ಯೋಗಿ ಆದಿತ್ಯ ನಾಥ್ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಸುನೀಲ್ ಶೆಟ್ಟಿ ಅವರ ಮಾತುಗಳು ಸದ್ಯಕ್ಕೆ ಎಲ್ಲರ ಗಮನವನ್ನು ಸೆಳೆದಿದೆ. ಅವರು ಉತ್ತರ ಪ್ರದೇಶದ ಜನ ತನಗೆ ಕೊಟ್ಡಿರುವ ಸ್ಥಾನ ಮಾನವನ್ನು ಸ್ಮರಿಸಿ ಧನ್ಯವಾದ ಹೇಳಿದ್ದಾರೆ. ಅಲ್ಲದೇ ಬಾಲಿವುಡ್ ನಲ್ಲಿ ಹೊರೆಸಲಾಗಿರುವ ಕಳಂಕದಂತೆ ಅಲ್ಲಿನ ಜನರಿಲ್ಲ.

99% ರಷ್ಟು ಜನರು ಆ ರೋ ಪ ಮಾಡಿದಂತೆ ಇಲ್ಲ. ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಅದನ್ನು ಎಲ್ಲರಿಗೂ ತಿಳಿಸಬೇಕಾಗಿದೆ. ಬಾಯ್ಕಾಟ್ ಬಾಲಿವುಡ್ ಟ್ರೆಂಡ್ ಅನ್ನು ನಿಲ್ಲಿಸಬೇಕಾಗಿದೆ. ನಾವು ದಿನವೆಲ್ಲಾ ಡ್ರ ಗ್ಸ್ ಸೇವಿಸಲ್ಲ,ಕೆಟ್ಟ ಕೆಲಸ ಮಾಡಲ್ಲ ಎಂದಿದ್ದಾರೆ ಸುನೀಲ್ ಶೆಟ್ಟಿ(Sunil Shetty). ಈ ನಿಟ್ಟಿನಲ್ಲಿ ಯೋಗಿ ಅವರು ಮುಂದಾಳತ್ವ ವಹಿಸಿ ಪ್ರಧಾನಿಯವರ ಬಳಿ ಮಾತನಾಡಿದರೆ ಎಲ್ಲವೂ ಬದಲಾಗುತ್ತದೆ ಎಂದು ಸುನೀಲ್ ಶೆಟ್ಟಿ ಯೋಗಿ ಆದಿತ್ಯ ನಾಥ್ ಅವರ ಬಳಿ ಮನವಿಯನ್ನು ಮಾಡಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here