Darshan Thoogudeepa :ಹೊಸ ಪೇಟೆಯಲ್ಲಿ ದರ್ಶನ್ ಗೆ ಆಗಿದ್ದೇನು ?ನಟ ದರ್ಶನ್ ಏನಂದ್ರು ?
Darshan Thoogudeepa ಸ್ಯಾಂಡಲ್ವುಡ್ ನ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ನಟ ದರ್ಶನ್ ಅವರು ತಮ್ಮ ಹೊಸ ಸಿನಿಮಾ ಕ್ರಾಂತಿ ಪ್ರಚಾರ ಕಾರ್ಯವನ್ನು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಿನಿಮಾ ಪ್ರಚಾರಕ್ಕಾಗಿ ಹೊಸಪೇಟೆಗೆ ತೆರಳಿದ್ದರು. ಹೊಸಪೇಟೆಗೆ ಚಿತ್ರ ತಂಡ ಬರುತ್ತಿರುವ ವಿಷಯವಾಗಿ ಹೊಸಪೇಟೆಯಲ್ಲಿ ಬೆಳಿಗ್ಗಿನಿಂದಲೇ ಆ ಕ್ರೋ ಶ ವ್ಯಕ್ತವಾಗಿತ್ತು. ದರ್ಶನ್ ಮತ್ತು ಅವರ ಚಿತ್ರ ತಂಡ ಬರುವುದಕ್ಕೆ ಮೊದಲು ಅಪ್ಪು ಅಭಿಮಾನಿಗಳು ವೇದಿಕೆಯ ಮೇಲೆ ಏರಿ ಅಪ್ಪು ಅವರ ಹೆಸರಿನಲ್ಲಿ ಜೈ ಕಾರವನ್ನು ಹಾಕಿದ್ದರು. ಇನ್ನು ನಟ ದರ್ಶನ್ ಅವರು ಸಹಾ ವೇದಿಕೆಗೆ ಬರುವ ಮುನ್ನ ಅಪ್ಪು ಅವರ ಪುತ್ಥಳಿಗೆ ಹೂವಿನ ಹಾರವನ್ನು ಹಾಕಿದ್ದರು. ಅನಂತರವೇ ಅವರ ಹೊಸ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡುವ ಕಾರ್ಯಕ್ರಮ ನಡೆಸಲಾಗಿತ್ತು.
ಹೊಸಪೇಟೆಯಲ್ಲಿ #DBoss #ಕ್ರಾಂತಿ ಸಂಭ್ರಮ #Appu ಪ್ರತಿಮೆಗೆ ಹೂವಿನ ಹಾರ ಹಾಕಿದ @Challengingstar @dasadarshan #KrantiRevolutionFromJan26th pic.twitter.com/jpulhFHZ0d
— A Sharadhaa (@sharadasrinidhi) December 18, 2022
ನಟ ದರ್ಶನ್ Darshan Thoogudeepa ಅವರು ಮೈಸೂರಿನಲ್ಲಿ ತಮ್ಮ ಸಿನಿಮಾದ ಮೊದಲನೇ ಹಾಡನ್ನು ಬಿಡುಗಡೆ ಮಾಡಿದ ವೇಳೆಯಲ್ಲೇ ಎರಡನೇ ಹಾಡನ್ನು ಹೊಸ ಪೇಟೆಯಲ್ಲಿ ಅಭಿಮಾನಿಗಳ ಮುಂದೆ ಬಿಡುಗಡೆ ಮಾಡುವುದಾಗಿ ಘೋಷಣೆಯನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರ ತಂಡ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೊಸಪೇಟೆಗೆ ತೆರಳಿದ್ದರು. ಅದರೆ ಕಾರ್ಯಕ್ರಮದ ವೇಳೆ ನಡೆದ ಒಂದು ಅನಿರೀಕ್ಷಿತ ಹಾಗೂ ಅಹಿತಕರ ಘಟನೆಯ ವೀಡಿಯೋವೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಲ್ಲೆಡೆ ಇದು ದೊಡ್ಡ ಸುದ್ದಿಯಾಗಿದೆ. ಇಷ್ಟಕ್ಕೂ ಅಲ್ಲಿ ನಡೆದಿದ್ದೇನು? ತಿಳಿಯೋಣ ಬನ್ನಿ.
ದರ್ಶನ್ Darshan Thoogudeepa ಅವರನ್ನು ನೋಡಲು ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲೇ ನೆರೆದಿದ್ದರು. ಸಹಜವಾಗಿಯೇ ಅಲ್ಲೊಂದು ನೂಕು, ನುಗ್ಗಲಿನ ವಾತಾವರಣ ಸಹಾ ನಿರ್ಮಾಣವಾಗಿತ್ತು. ಹೀಗೆ ಜನ ಜಂಗುಳಿಯ ವಾತಾವರಣದಲ್ಲಿ ವೇದಿಕೆ ಮೇಲೆ ನಟಿ ರಚಿತಾ ರಾಮ್ ಅವರು ಮಾತನಾಡಲು ಮುಂದಾದರು. ಅದೇ ಸಂದರ್ಭದಲ್ಲಿ ದರ್ಶನ್ ಅವರು ಸಹಾ ಮುಂದೆ ಬಂದಿದ್ದಾರೆ. ಆಗಲೇ ಯಾರೋ ಕಿಡಿಗೇಡಿಗಳು ಎಸೆದ ಚಪ್ಪಲಿ ದರ್ಶನ್ ಅವರ ಮೇಲೆ ಬಂದು ಬಿದ್ದಿದೆ. ಈ ಕೃತ್ಯ ವೀಡಿಯೋದಲ್ಲಿ ಸೆರೆಯಾಗಿದ್ದು, ಇದನ್ನು ನೋಡಿದ ದರ್ಶನ್ ಅವರ ಅಭಿಮಾನಿಗಳು ಸಿಟ್ಟಾಗಿದ್ದಾರೆ.
A short video clip of a slipper thrown at @dasadarshan during the promotion of Kranti at Hosapete has outraged #dboss fans#Darshan #DBoss #WestandWithDarshan #Kannada #Sandalwood pic.twitter.com/iMJVza224D
— Bangalore Times (@BangaloreTimes1) December 19, 2022
ಇನ್ನು ನಟ ಈ ವಿಚಾರಕ್ಕೆ ಯಾವುದೇ ಸಿಟ್ಟು ಅಥವಾ ಅಸಮಾಧಾನ ವ್ಯಕ್ತಪಡಿಸಿಲ್ಲ. ಅವರು ಈ ಘಟನೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇನ್ನು ವೇದಿಕೆಯ ಎದುರಿಗೆ ಇದ್ದ ಕಾನ್ಸ್ಟೇಬಲ್ ಒಬ್ಬರು ವೇದಿಕೆ ಮೇಲೆ ಬಿದ್ದಿದ್ದ ಚಪ್ಪಲಿಯನ್ನು ಅಲ್ಲಿಂದ ತೆಗೆದು ಕೆಳಗೆ ಹಾಕಿದ್ದಾರೆ. ನಂತರ ನಟಿ ರಚಿತಾ ರಾಮ್ ಅವರಿಗೆ ಮಾತನ್ನು ನಿಲ್ಲಿಸುವಂತೆ ಸೂಚನೆಯನ್ನು ನೀಡಿದ್ದು, ಅನಂತರ ಚಿತ್ರರಂಡ ಅಲ್ಲಿಂದ ತೆರಳಿದರು ಎಂದು ತಿಳಿದು ಬಂದಿದೆ. ನಟ ದರ್ಶನ್ ಅವರ ಅಭಿಮಾನಿಗಳು ಈ ಘಟನೆಯ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.
ತಪ್ಪೇನು ಇಲ್ಲ ಚಿನ್ನ ಪರವಾಗಿಲ್ಲ 💔
— ʜᴇᴍᴀɴᴛʜ #sᴘʀᴇᴀᴅʙᴏssɪsᴍᴷʳᵃⁿᵗⁱ ᴼⁿ ²⁶ᵗʰ ᴶᵃⁿ (@Hemanth61218937) December 18, 2022
ದೇವರು ಆಗಿಬಿಟ್ರಿ ಬಾಸ್ ಇವತ್ತು 🙏
ನಿಮ್ಮ ಜಾಗದಲ್ಲಿ ಬೇರೆ ಅವರು ಇದಿದ್ರೆ ಏನಾದ್ರು ಆಗ್ತಿತ್ತು 🙏@PuneethRajkumar Worst slum fans#DBoss #Kranti @dasadarshan pic.twitter.com/HvHo25yZtx