Darshan: ಹಿರಿಯನಟಿ ಲೀಲಾವತಿ ಅವರ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ ಡಿಬಾಸ್!

Written by Pooja Siddaraj

Published on:

Darshan: ನಟ ದರ್ಶನ್ ಅವರ ಒಳ್ಳೆತನದ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ದರ್ಶನ್ ಅವರು ತೆರೆಮೇಲೆ ಹೇಗೆ ಹೀರೋ ಆಗಿದ್ದಾರೋ ತೆರೆ ಹಿಂದೆ ಕೂಡ ರಿಯಲ್ ಲೈಫ್ ಹೀರೋ. ಯಾರೇ ಕಷ್ಟದಲ್ಲಿದ್ದರು, ಆ ವಿಷಯ ದರ್ಶನ್ ಅವರಿಗೆ ಗೊತ್ತಾದರೆ, ಸಹಾಯ ಮಾಡದೆ ಸುಮ್ಮನೆ ಇರುವವರಲ್ಲ. ಹಾಗೆಯೇ ಸ್ನೇಹಿತರು ಎಂದರೆ ದರ್ಶನ್ ಅವರಿಗೆ ಬಹಳ ಪ್ರೀತಿ. ಫ್ರೆಂಡ್ಸ್ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ.

ಫ್ಯಾಮಿಲಿಗು ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಪತ್ನಿ, ತಾಯಿ, ಮಗ, ಅಕ್ಕ, ತಮ್ಮ, ಅಕ್ಕನ ಕುಟುಂಬ ಎಲ್ಲರನ್ನು ಕಂಡರೆ ದರ್ಶನ್ ಅವರಿಗೆ ಬಹಳ ಪ್ರೀತಿ. ಚಿತ್ರರಂಗದವರ ಜೊತೆಗೆ ಅದರಲ್ಲೂ ಹಿರಿಯ ಕಲಾವಿದರನ್ನು ಕಂಡರೆ ದರ್ಶನ್ ಅವರಿಗೆ ಅಪಾರವಾದ ಗೌರವವಿದೆ ಎನ್ನುವ ವಿಷಯ ನಮಗೆ ಗೊತ್ತೇ ಇದೆ. ಹಿರಿಯ ಕಲಾವಿದರು ಕಷ್ಟದಲ್ಲಿದ್ದಾರೆ ಎಂದು ಗೊತ್ತಾದರೆ ತಕ್ಷಣವೇ ಹೋಗಿ ಸಹಾಯ ಮಾಡುತ್ತಾರೆ ಡಿಬಾಸ್.

ಇದೀಗ ನಟ ದರ್ಶನ್ ಅವರು ಹಿರಿಯನಟಿ ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದಾರೆ.. ನಟಿ ಲೀಲಾವತಿ ಅವರು ಕಳೆದ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದಾರೆ. ಅವರ ಆರೋಗ್ಯ ಅಷ್ಟೇನು ಚೆನ್ನಾಗಿಲ್ಲ, ಕೆಲ ದಿನಗಳ ಹಿಂದೆ ಹಿರಿಯನಟಿ ಬಿ. ಸರೋಜಾದೇವಿ ಅವರು ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದರು. ಕಳೆದ ವಾರವಷ್ಟೇ ಅರ್ಜುನ್ ಸರ್ಜಾ ಅವರು ಲೀಲಾವತಿ ಅವರ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದರು..

ಇದೀಗ ಡಿಬಾಸ್ ದರ್ಶನ್ ಅವರು ಕೂಡ ಲೀಲಾವತಿ ಅವರ ಮನೆಗೆ ಭೇಟಿ ನೀಡಿ, ಅವರ ಆರೋಗ್ಯದ ಬಗ್ಗೆ ವಿಚಾರಿಸಿ, ಒಂದಷ್ಟು ಸಮಯ ಕಳೆದಿದ್ದಾರೆ. ಲೀಲಾವತಿ ಅವರ ತೋಟಕ್ಕೆ ವಿನೋದ್ ರಾಜ್ ಅವರೊಡನೆ ಹೋಗಿ ಅಲ್ಲಿಯೂ ಸಮಯ ಕಳೆದಿದ್ದು, ಇದೀಗ ಡಿಬಾಸ್ ಅವರು ಲೀಲಾವತಿ ಅವರ ಮನೆಯಲ್ಲಿರುವ ಫೋಟೋಸ್ ವೈರಲ್ ಆಗಿದೆ.

ಅಭಿಮಾನಿಗಳು ಈ ಫೋಟೋಗಳನ್ನು ನೋಡಿ, ದರ್ಶನ್ ಅವರ ಗುಣಗಾನ ಮಾಡುತ್ತಿದ್ದಾರೆ. ಇವರಷ್ಟೇ ಅಲ್ಲ,ಇತ್ತೀಚೆಗೆ ನಟಿಯರಾದ ಸುಧಾರಾಣಿ ಅವರು, ಶ್ರುತಿ ಮತ್ತು ಮಾಳವಿಕಾ ಅವರು ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದರು. ಹಾಗೆಯೇ ಹಿರಿಯನಟಿ ಭಾರತಿ ಅವರು ಕೂಡ ಕೆಲ ದಿನಗಳ ಹಿಂದೆ ಇವರ ಮನೆಗೆ ಭೇಟಿ ನೀಡಿದ್ದರು..

Leave a Comment